ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿಲ್ಲ : ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಜುಲೈ 03: ಆನಂದ್ ಸಿಂಗ್ ಮಾತ್ರವೇ ರಾಜೀನಾಮೆ ಸಲ್ಲಿಸಿದ್ದಾರೆ, ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

'ಪ್ರಜಾಪ್ರಭುತ್ವದ ಗಣಿತ' ಕಲಿತುಕೊಳ್ಳಿ: ಬಿಜೆಪಿಗೆ ಸಿದ್ದರಾಮಯ್ಯ ಪಾಠ'ಪ್ರಜಾಪ್ರಭುತ್ವದ ಗಣಿತ' ಕಲಿತುಕೊಳ್ಳಿ: ಬಿಜೆಪಿಗೆ ಸಿದ್ದರಾಮಯ್ಯ ಪಾಠ

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿಲ್ಲವೆಂದು ಸ್ಪೀಕರ್ ರಮೇಶ್ ಕುಮಾರ್ ಅವರೇ ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ಕೈಲಿದೆ ಜೆಡಿಎಸ್ -ಕಾಂಗ್ರೆಸ್ ಸರ್ಕಾರದ ಭವಿಷ್ಯಸ್ಪೀಕರ್ ರಮೇಶ್ ಕುಮಾರ್ ಕೈಲಿದೆ ಜೆಡಿಎಸ್ -ಕಾಂಗ್ರೆಸ್ ಸರ್ಕಾರದ ಭವಿಷ್ಯ

ಆನಂದ್ ಸಿಂಗ್ ಅವರು ಜಿಂದಾಲ್‌ ವಿಚಾರವಾಗಿ ಬೇಸರಗೊಂಡು ರಾಜೀನಾಮೆ ಸಲ್ಲಿಸಿದ್ದೇನೆ ಎನ್ನುತ್ತಿದ್ದಾರೆ, ಅವರೊಂದಿಗೆ ಮಾತನಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Ramesh Jarkiholi did not give resignation: Siddaramaiah

ರಮೇಶ್ ಕುಮಾರ್ ಅವರು ಕೈಬರಹದಲ್ಲಿ ರಾಜೀನಾಮೆ ಪತ್ರ ಬರೆದು ರಾಜೀನಾಮೆಯನ್ನು ಸ್ಪೀಕರ್ ಕಚೇರಿಗೆ ರವಾನಿಸಿದ್ದಾಗಿ ಹೇಳಿದ್ದರು. ಆದರೆ ರಮೇಶ್ ಕುಮಾರ್ ಅವರು ಇದನ್ನು ಅಲ್ಲಗಳೆದಿದ್ದು, ಫ್ಯಾಕ್ಸ್‌ ಮಷಿನ್ ಇಲ್ಲದ ಕಚೇರಿಗೆ ಫ್ಯಾಕ್ಸ್‌ ಮೂಲಕ ಹೇಗೆ ರಾಜೀನಾಮೆ ರವಾನಿಸಲು ಸಾಧ್ಯ ಎಂದು ಸಿಟ್ಟಾಗಿದ್ದರು.

ನನಗೆ ಯಾರೂ ರಾಜೀನಾಮೆ ಪತ್ರ ನೀಡಿಲ್ಲ: ಸ್ಪೀಕರ್ ರಮೇಶ್ ಕುಮಾರ್ ನನಗೆ ಯಾರೂ ರಾಜೀನಾಮೆ ಪತ್ರ ನೀಡಿಲ್ಲ: ಸ್ಪೀಕರ್ ರಮೇಶ್ ಕುಮಾರ್

ರಮೇಶ್ ಕುಮಾರ್ ಅವರು ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದು, ಅದಕ್ಕಾಗಿಯೇ ಹೀಗೆ ಅನೂರ್ಜಿತಗೊಳ್ಳಲೆಂದೇ ಕೈಬರಹದಲ್ಲಿ ರಾಜೀನಾಮೆ ಪತ್ರ ಬರೆದು, ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗುತ್ತಿದೆ.

English summary
Congress MLA Ramesh Jarkiholi did not give resignation, speaker only clarifies the thing said former cm Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X