ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮೇಶ್ ಜಾರಕಿಹೊಳಿ "ರಾಸಲೀಲೆ ಸಿಡಿ" ಪ್ರಕರಣ; ಆರ್‌.ಟಿ. ನಗರದ ಪಿಜಿ ಸುಂದರಿ ಯಾರು ?

|
Google Oneindia Kannada News

ಬೆಂಗಳೂರು, ಮಾರ್ಚ್ 03: "ರಾಸಲೀಲೆ ಸಿಡಿ ಸ್ಫೋಟ" ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಸೂಕ್ತ ತನಿಖೆಗೆ ವಹಿಸಿ ಎಂದು ರಾಜೀನಾಮೆ ಪತ್ರದಲ್ಲಿ ಸಚಿವರೇ ಉಲ್ಲೇಖಿಸಿದ್ದಾರೆ. ಅವರ ಮನವಿ ಅಂಗೀಕರಿಸಿ ಸರ್ಕಾರವೇ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಲ್ಲಿ ಪ್ರಕರಣದ ತನಿಖೆಗೆ ಹೊಸ ಆಯಾಮ ಸಿಗಲಿದೆ. ಇಲ್ಲಿವರೆಗೂ ನಿಗೂಢವಾಗಿರುವ ಆರ್‌.ಟಿ.ನಗರದ ಪಿ.ಜಿ. ಸುಂದರಿ ಯಾರೂ ಎಂಬುದು ಹೊರಗೆ ಬರಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರು ಯುವತಿಯೊಬ್ಬರಿಗೆ ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅಕೆ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ನಂತರ ತಮ್ಮ ಸಂಬಂಧದ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ ಎಂದು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಕ್ಕೆ ಸಂಬಂಧಿಸಿದ ರಾಸಲೀಲೆಯ ವಿಡಿಯೋವನ್ನು ಬಿಡುಗಡೆಗೊಳಿಸಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಆಪರೇಷನ್ ಜಾರಕಿಹೊಳಿ: ಕಲ್ಯಾಣ ಕರ್ನಾಟಕ ಸಾಹುಕಾರನಿಗೆ ಖೆಡ್ಡಾ ತೋಡಿದ್ದು ಹೇಗೆ?ಆಪರೇಷನ್ ಜಾರಕಿಹೊಳಿ: ಕಲ್ಯಾಣ ಕರ್ನಾಟಕ ಸಾಹುಕಾರನಿಗೆ ಖೆಡ್ಡಾ ತೋಡಿದ್ದು ಹೇಗೆ?

ಆದರೆ ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದ ಸಚಿವ ಜಾರಕಿಹೊಳಿ, "ಸಿ.ಡಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಇದರಲ್ಲಿ ನನ್ನ ತಪ್ಪು ಏನೂ ಇಲ್ಲ. ಆ ಯುವತಿ ಯಾರೆಂದು ನನಗೆ ಗೊತ್ತಿಲ್ಲ. ದಿನೇಶ ಕಲ್ಲಹಳ್ಳಿ ಯಾರೋ ಗೊತ್ತಿಲ್ಲ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನಾನು ತಪ್ಪಿತಸ್ಥ ಎಂದು ಸಾಬೀತಾದರೆ ರಾಜೀನಾಮೆ ಕೊಡುತ್ತೇನೆ" ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ನಡುವೆ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವತಿ ಯಾರು ಎಂಬ ಕುತೂಹಲ ಮೂಡಿದೆ.

ಪೊಲೀಸರ ತನಿಖೆಗೆ ತೊಡಕು:

ಪೊಲೀಸರ ತನಿಖೆಗೆ ತೊಡಕು:

ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆರ್‌ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿರುವ ದೂರನ್ನಾಧರಿಸಿ ಪ್ರಾಥಮಿಕ ತನಿಖೆ ಆರಂಭಿಸಲು ಕಬ್ಬನ್ ಪಾರ್ಕ್ ಪೊಲೀಸರಿಗೆ ಸದ್ಯಕ್ಕೆ ತೊಡಕು ಎದುರಾಗಿದೆ. ದಿನೇಶ್ ದೂರಿನ ಪ್ರಕಾರ, ರಮೇಶ್ ಜಾರಕಿಹೊಳಿ ಮಹಿಳೆ ಗೆ( ಯುವತಿ) ಲೈಂಗಿಕ ಕಿರುಕುಳ ನೀಡಿ, ಉದ್ಯೋಗದ ಅಮಿಷ ಒಡ್ಡಿ ಜೀವ ಬೆದರಿಕೆ ಹಾಕಿದ್ದಾರೆ. ಯುವತಿಗೆ ಸೂಕ್ತ ರಕ್ಷಣೆ ನೀಡಿ ಎಂದು ದೂರಿನಲ್ಲಿ ಕೋರಿದ್ದಾರೆ. ಆರ್‌.ಟಿ. ನಗರದ ಪಿಜಿಯಲ್ಲಿರುವ ಯುವತಿ ಎಂದು ಉಲ್ಲೇಖಿಸಿರುವ ದೂರುದಾರ, ಪೊಲೀಸರ ವಿಚಾರಣೆ ವೇಳೆ ಆಕೆಯ ಸಂಪರ್ಕ ಸಂಖ್ಯೆಯನ್ನಾಗಲಿ, ವಿಳಾಸವನ್ನಾಗಲಿ ನೀಡಿಲ್ಲ. ಆಕೆಯ ಕುಟುಂಬದ ಸದಸ್ಯರೊಬ್ಬರು ಲೈಂಗಿಕ ಸಿಡಿ ನೀಡಿದ್ದಾಗಿ ಹೇಳಿದ್ದು, ಜೀವ ಭಯದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರ ವಿವರವೂ ನೀಡಿಲ್ಲ. ವಿಚಾರಣೆ ನಡೆಸಲು ಸಂತ್ರಸ್ತ ಯುವತಿ ವಿವರವಾಗಲಿ, ಅವರ ಕುಟುಂಬ ಸದಸ್ಯರ ವಿವರ ಇಲ್ಲದ ಕಾರಣ ಪೊಲೀಸರು ಪ್ರಾಥಮಿಕ ತನಿಖೆ ಮಾಡಲು ಸಾಧ್ಯವಾಗಿಲ್ಲ. ರಮೇಶ್ ಜಾರಕಿ ಹೊಳಿ ಪ್ರಕರಣದಲ್ಲಿ ಸರ್ಕಾರ ಪ್ರಕಟಿಸುವ ತನಿಖೆಯ ನಿರ್ಧಾರ ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಕಲಾವಿದೆಯ ಡಾಕುಮೆಂಟರಿ ಸ್ಟೋರಿ:

ಕಲಾವಿದೆಯ ಡಾಕುಮೆಂಟರಿ ಸ್ಟೋರಿ:

ಇನ್ನು, ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ಆರ್‌.ಟಿ.ನಗರದ ಪಿಜಿಯಲ್ಲಿರುವುದಾಗಿ ಉಲ್ಲೇಖವಾಗಿದೆ. ನಿಜವಾಗಿಯೂ ಆ ಸುಂದರಿ ಆರ್‌. ಟಿ. ನಗರದಲ್ಲಿದ್ದಾಳಾ ? ಅದು ಸೃಷ್ಟಿಸಿರುವ ವಿಳಾಸವೇ ಎಂಬ ಅನುಮಾನ ಕೂಡ ಎದ್ದಿದೆ. ಬೆಳಗಾವಿಯಲ್ಲಿ ಡ್ಯಾಮ್ ಅನ್ನು ಡ್ರೋನ್ ಕ್ಯಾಮರಾದಲ್ಲಿ ಶ್ಯೂಟ್ ಮಾಡಿ ಡಾಕ್ಯುಮೆಂಟರಿ ಮಾಡಲು ಅನುಮತಿ ಕೋರಿ ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕಿಸಿರುವುದು ವಿಡಿಯೋಗಳೇ ಸಾರಿ ಹೇಳುತ್ತವೆ. ಡಾಕ್ಯುಮೆಂಟರಿ ಮಾಡುವ ಮೂರು ಮಂದಿಯ ತಂಡವೂ ಇದೆ ಎಂದು ಮಾತನಾಡಿರುವ ಸಂಭಾಷಣೆಗಳು ಹೊರಗೆ ಬಿದ್ದಿದೆ. ಇನ್ನು ಆಕೆ ಉತ್ತರ ಕರ್ನಾಟಕ ಭಾಷೆ ಅನುಕರಣೆ ಮಾಡಿ ಮಾತನಾಡಿರುವ ಕಲಾವಿದೆ ಎಂಬುದು ಹೊರ ಜಗತ್ತಿಗೆ ಗೊತ್ತಾಗಿದೆ. ಈ ಎಲ್ಲ ಅಂಶಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಸುಂದರಿ ಮಾಡಿದ ಸ್ಕ್ರೀನ್ ರೆಕಾರ್ಡಿಂಗ್ :

ಸುಂದರಿ ಮಾಡಿದ ಸ್ಕ್ರೀನ್ ರೆಕಾರ್ಡಿಂಗ್ :

ಇನ್ನು ರಮೇಶ್ ಜಾರಕಿ ಹೊಳಿ ಅಶ್ಲೀಲವಾಗಿ ಮಾತನಾಡಿರುವ ವಿಡಿಯೋ ಕರೆಯ ರೆಕಾರ್ಡಿಂಗ್ ತುಣುಕು ಕೂಡ ಹೊರ ಬಿದ್ದಿದೆ. ರೆಕಾರ್ಡಿಂಗ್ ಆಗಿರುವ ವಿಡಿಯೋದಲ್ಲಿ ರಮೇಶ್ ಜಾರಕಿ ಹೊಳಿ ಚಿತ್ರ ದೊಡ್ಡದಾಗಿ ಕಾಣುತ್ತಿದೆ. ಯುವತಿ ಚಿತ್ರ ಚಿಕ್ಕದಾಗಿ ಕಾಣುತ್ತಿದೆ. ಸಾಮಾನ್ಯವಾಗಿ ಯಾರು ರೆಕಾರ್ಡಿಂಗ್ ಮಾಡಿಕೊಳ್ಳುತ್ತಾರೋ ಅವರ ಸ್ಕ್ರೀನ್ ಚಿಕ್ಕದಾಗಿರುತ್ತದೆ ಎಂಬುದು ಮೊಬೈಲ್ ಬಳಸುವ ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ ವಿಡಿಯೋ ಕರೆಯನ್ನು ಸುಂದರಿಯೇ ರೆಕಾರ್ಡಿಂಗ್ ಮಾಡಿಕೊಂಡಿದ್ದಾಳೆ ಎಂಬ ಗುಮಾನಿ ಎದ್ದಿದೆ. ಇದೆಲ್ಲದರ ಸತ್ಯಾ ಸತ್ಯತೆ ಗೊತ್ತಾಗಬೇಕಾದರೆ ಪೊಲೀಸರ ಸಮರ್ಥ ತನಿಖೆಯಾಗಬೇಕು. ಆದು ಯುವತಿ ನೀಡುವ ದೂರಿನಿಂದ ಆಗಿರಬಹುದು, ಇಲ್ಲವೇ ರಮೇಶ್ ಜಾರಕಿಹೊಳಿ ಕೊಡುವ ದೂರಿನಿಂದಲೂ ಆಗಿರಬಹುದು. ಪೊಲೀಸರ ತನಿಖೆಯೇ ಇಲ್ಲಿ ಬಹು ಮುಖ್ಯವಾದ ಸಂಗತಿ.

ವಿಡಿಯೋ ವಿವರವೂ ಕಷ್ಟ :

ವಿಡಿಯೋ ವಿವರವೂ ಕಷ್ಟ :

ಇನ್ನು ರಮೇಶ್ ಜಾರಕಿಹೊಳಿ ರಾಸಲೀಲೆ ಕುರಿತು ಹೊರ ಬಿದ್ದಿರುವ ವಿಡಿಯೋ ರೆಕಾರ್ಡಿಂಗ್ ಆಗಿರುವ ಸಮಯವಾಗಲೀ ವಿಡಿಯೋ ಅವಧಿ ಕೂಡ ಪೂರ್ಣ ಡಿಲೀಟ್ ಆಗಿದೆ. ಹೀಗಾಗಿ ಯಾವ ದಿನ ಇದು ನಡೆದಿದೆ ಎಂಬ ವಿವರಗಳಿಲ್ಲ. ಎಲ್ಲಿ ನಡೆದಿದೆ ಎಂಬ ವಿವರಗಳು ಇಲ್ಲ. ಹೀಗಾಗಿ ಪೊಲೀಸರು ವಿಡಿಯೋ ಆಧರಿಸಿ ಕೂಡ ತನಿಖೆ ಆರಂಭಿಸಲು ಸದ್ಯದ ಮಟ್ಟಿಗೆ ಸಾಧ್ಯವಾಗಿಲ್ಲ. ಇನ್ನು ಜಾರಕಿಹೊಳಿ ಜತೆ ಸಂಭಾಷಣೆ ಮಾಡಿರುವ ಹುಡುಗಿಗೂ, ರಾಸಲೀಲೆಯಲ್ಲಿ ತೊಡಗಿರುವ ಹುಡುಗಿ ಬೇರೆಯಾಗಿರಬಹುದಾ ಎಂಬ ಅನುಮಾನ ಕೂಡ ಎದ್ದಿದೆ. ವಿಡಿಯೋ ಕರೆಯಲ್ಲಿ ಕಾಣಿಸಿರುವ ಯುವತಿಯ ಚಿತ್ರಕ್ಕೂ, ರಾಸಲೀಲೆಯಲ್ಲಿ ತೊಡಗಿರುವ ಯುವತಿ ಚಿತ್ರಕ್ಕೂ ವ್ಯತ್ಯಾಸವಿರುವುದು ಗೋಚರಿಸುತ್ತಿದ್ದು, ಅಂತೂ ತನಿಖೆಯೊಂದೆ ಎಲ್ಲದರ ಮರ್ಮ ಹೊರಗೆಡವಲು ಸಾಧ್ಯ.

Recommended Video

ಸೆಕ್ಸ್ ಸಿಡಿ ಪ್ರಕರಣ-ನೈತಿಕ ಹೊಣೆ ಹೊತ್ತು ಜಾರಕಿಹೊಳಿ ರಾಜೀನಾಮೆ | Oneindia Kannada
ಕಾನೂನು ಏನು ಹೇಳುತ್ತೆ ? :

ಕಾನೂನು ಏನು ಹೇಳುತ್ತೆ ? :

ಸಿಆರ್‌ಪಿಸಿ ಸೆಕ್ಷನ್ 154 ಪ್ರಕಾರ ಯಾರೇ ದೂರು ನೀಡಿದರೂ ಅದು ಕಾಗ್ನೈಜೆಬಲ್ ಅಥವಾ ನಾನ್ ಕಾಗ್ನೈಜೆಬಲ್ ಎಂದು ನೋಡಬೇಕು. ಕಾಗ್ನೈಜೆಬಲ್ ದೂರು ಎಂದು ಗೊತ್ತಾದರೆ ಮೂರನೇ ವ್ಯಕ್ತಿ ದೂರು ನೀಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಬೇಕು. ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಕಾಗ್ನೈಜೆಬಲ್ ಪ್ರಕರಣ ಎಂದು ಗೊತ್ತಿದ್ದರೂ ದೂರಿನಲ್ಲಿರುವ ತಾಂತ್ರಿಕ ತೊಡಕುಗಳಿಂದ ಎಫ್ಐಆರ್ ಆಗದೇ ಇರಬಹುದು. ಪ್ರಾಥಮಿಕ ವಿಚಾರಣೆ ನಡೆಸಿ ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್ ದಾಖಲಿಸಲು ಅವಕಾಶವಿದೆ ಎನ್ನುತ್ತಾರೆ ಹಿರಿಯ ವಕೀಲ ಶಂಕರಪ್ಪ.

English summary
Ramesh Jarkiholi CD row: Who is that girl involved in Video with minister?. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X