ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2ನೇ ವಿಡಿಯೋದಲ್ಲಿ ಸುಳ್ಳು ಹೇಳಿ ಸಿಕ್ಕಿಬಿದ್ಳಾ ಸಿಡಿ ಗರ್ಲ್ !

|
Google Oneindia Kannada News

ಬೆಂಗಳೂರು, ಮಾರ್ಚ್‌ 25; ಸಿಡಿ ಗರ್ಲ್ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ, ಯುವತಿಯ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದ್ದಾರೆ. ಯುವತಿ ಹೇಳಿದಂತೆ ಮಾ. 2 ಯಾವ ಎಸ್ಐಟಿ ಅಧಿಕಾರಿಗೆ ವಿಡಿಯೋ ಕಳಿಸಿದ್ದಾರೋ ಗೊತ್ತಿಲ್ಲ. ಎಸ್ಐಟಿ ರಚನೆಯಾಗಿರುವುದೇ ಮಾ. 12 ರಂದು ಎಂದು ಹಿರಿಯ ಐಪಿಎಸ್ ಅಧಿಕಾರಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣ ಸಂಬಂಧ ಎರಡನೇ ಕಂತಿನ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಿಡಿ ಗರ್ಲ್ ಮಾ. 2 ರಂದು ದಿನೇಶ್ ಕಲ್ಲಹಳ್ಳಿ ದೂರು ನೀಡಿದ ದಿನವೇ ನಾನು ವಿಡಿಯೋ ಹೇಳಿಕೆ ನೀಡಿದ್ದೆ. ಆದರೆ, ಅದನ್ನು ರಮೇಶ್ ಜಾರಕಿಹೊಳಿ ದೂರು ನೀಡಿದ ಬಳಿಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಎಸ್ಐಟಿ ರಮೇಶ್ ಜಾರಕಿಹೊಳಿ ಪರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾಳೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ, ಮಾ. 2 ರಂದು ಎಸ್ಐಟಿ ರಚನೆಯೇ ಆಗಿಲ್ಲ. ರಚನೆ ಯಾಗಿದ್ದೇ ಮಾ. 12 ರಂದು. ನಿಮಗೆ ರಕ್ಷಣೆ ಕೊಡುತ್ತೇವೆ ಎಂದರೂ ಯುವತಿ ಬಂದಿಲ್ಲ. ಐದು ಬಾರಿ ನೋಟಿಸ್ ಕೊಟ್ಟರೂ ಉತ್ತರ ಸಿಕ್ಕಿಲ್ಲ. ಆಕೆಯ ಆರೋಪ ಸತ್ಯಕ್ಕೆ ದೂರವಾದುದು. ಎಸ್ಐಟಿ ಯಶಸ್ವಿಯಾಗಿ ತನಿಖೆ ನಡೆಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Ramesh jarkiholi CD row: is CD girl release fake statement in 2nd video ?

ಯುವತಿ ಹೇಳಿಕೆ ಚರ್ಚೆ: ಕಾಂಗ್ರೆಸ್‌ನ ಮೂವರು ನಾಯಕರ ಹೆಸರು ಉಲ್ಲೇಖಿಸಿ ವಿಡಿಯೋ ಬಿಡುಗಡೆ ಮಾಡಿರುವ ಯುವತಿ, ತನಗೆ ಎರಡು ದಿನದ ಬೆಳವಣಿಗೆಯಿಂದ ರಕ್ಷಣೆ ಸಿಗುವ ಭರವಸೆ ಸಿಕ್ಕಿದೆ. ನನ್ನ ತಂದೆ ತಾಯಿಗೆ ಎಲ್ಲವೂ ಗೊತ್ತಿದೆ. ಅವರಿಂದ ಬಲವಂತವಾಗಿ ಅಪಹರಣ ದೂರು ಕೊಡಿಸಿದ್ದಾರೆ. ಅವರ ಜೀವ ರಕ್ಷಣೆ ಮುಖ್ಯ ಎಂದು ಯುವತಿ ಹೇಳಿ ಕೊಂಡಿದ್ದು, ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Ramesh jarkiholi CD row: is CD girl release fake statement in 2nd video ?

Recommended Video

ಮತ್ತೊಂದು ವಿಡಿಯೋ ರಿಲೀಸ್ ಮಾಡಿದ ಸಿಡಿ ಲೇಡಿ! ಎಸ್‌ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಯುವತಿ | Oneindia Kannada

ಸುಳ್ಳು ಹೇಳಿ ಸಿಕ್ಕಿಬಿದ್ಲಾ ?: ಯಾರನ್ನೋ ಮೆಚ್ಚಿಸೋಕೆ ವಿಡಿಯೋ ಬಿಡುಗಡೆ ಮಾಡಿ ಸಂತ್ರಸ್ತೆ ಎನ್ನಲಾದ ಯುವತಿ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡಿದ್ದಾಳೆ. ತಾನು ಮಾ. 2 ರಂದೇ ವಿಡಿಯೋ ಹೇಳಿಕೆ ಕೊಟ್ಟಿದ್ದಾಗಿ ತಿಳಿಸಿದ್ದಾಳೆ. ಆದರೆ, ವಾಸ್ತವದಲ್ಲಿ ಮಾ. 12 ರಂದು ಎಸ್ಐಟಿ ರಚನೆಯಾಗಿ ಮಾ. 13 ರಂದು ತನಿಖೆ ಆರಂಭವಾಗುತ್ತದೆ. ಆದರೆ ಸಂತ್ರಸ್ತೆ ಎನ್ನಲಾದ ಯುವತಿ ಮಾ. 13 ರಂದು ಬಿಡುಗಡೆ ಯಾದ ವಿಡಿಯೋ ಹೇಳಿಕೆ ಮೊದಲೇ ಪೊಲೀಸರಿಗೆ ನೀಡಿದ್ದೆ. ಅದನ್ನು ಪೊಲೀಸರೇ ಬಿಡುಗಡೆ ಮಾಡಿದ್ದಾರೆ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾಳೆ. ಎಸ್ಐಟಿ ರಚನೆ ಮೊದಲೇ ಸಿಡಿ ಹೇಗೆ ಕೊಟ್ಟಳು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.

English summary
SIT chief Soumedu Mukherjee has made it clear that the CD Girl video statement is far from the truth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X