ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮೇಶ್ ಜಾರಕಿಹೊಳಿ ದೂರು ಆಧರಿಸಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಏನಿದೆ?

|
Google Oneindia Kannada News

ಬೆಂಗಳೂರು, ಮಾ. 14: 'ಸಿಡಿ' ಬಿಡುಗಡೆಯಾದ 12 ದಿನಗಳ ನಂತರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೂರು ಕೊಟ್ಟಿದ್ದಾರೆ. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ಆಪ್ತನ ಮೂಲಕ ರಮೇಶ್ ಜಾರಕಿಹೊಳಿ ಅವರು ದೂರು ಸಲ್ಲಿಸಿದ್ದಾರೆ. ರಮೇಶ್ ಜಾರಕಿಹೊಳಿ ಅವರು ದೂರು ಸಲ್ಲಿಸುತ್ತಿದ್ದಂತೆಯೆ ಸಂತ್ರಸ್ತ ಯುವತಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಳಲು ತೋಡಿಕೊಂಡಿದ್ದಾರೆ.

ಈ ಮಧ್ಯೆ ಎಸ್‌ಐಟಿ ತನಿಖೆಗೆ ಸಹಾಯಕವಾಗುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರು ದಾಖಲಿಸಿದ್ದಾರೆ. ತಮ್ಮ ಆಪ್ತ, ಮಾಜಿ ಶಾಸಕ ನಾಗರಾಜ್ ಅವರ ಮೂಲಕ ದೂರು ಸಲ್ಲಿಸಿದ್ದಾರೆ. ರಮೇಶ್ ಜಾರಕಿಹೊಳಿ ಅವರ ದೂರು ಆಧರಿಸಿ ಸದಾಶಿವನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದೀಗ ಎಫ್‌ಐಆರ್ ಬೆಂಗಳೂರು ಪೊಲೀಸ್ ಆಯುಕ್ತರ ಮೂಲಕ ಎಸ್‌ಐಟಿಗೆ ಹಸ್ತಾಂತರವಾಗಿದೆ.

ರಮೆಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣದ ತನಿಖೆಗೆ ಚೆಕ್‌ಮೇಟ್ !ರಮೆಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣದ ತನಿಖೆಗೆ ಚೆಕ್‌ಮೇಟ್ !

ಇಡೀ ದೇಶದ ಗಮನ ಸೆಳೆದಿರುವ 'ಸಿಡಿ' ಬಿಡುಗಡೆ ಕುರಿತ ದೂರಿನಲ್ಲಿ ರಮೇಶ್ ಜಾರಕಿಹೊಳಿ ಏನು ಉಲ್ಲೇಖಿಸಿದ್ದಾರೆ? ಅವರ ದೂರು ಆಧರಿಸಿ ಪೊಲೀಸರು ಹಾಕಿರುವ ಎಫ್‌ಐಆರ್‌ನಲ್ಲಿ ಯಾವ ಯಾವ ಸೆಕ್ಷನ್ ಹಾಕಿದ್ದಾರೆ? ಈ ಎಲ್ಲ ಮಾಹಿತಿ ಇಲ್ಲಿದೆ.

ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು

ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು 'ಸಿಡಿ' ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ದೂರು ದಾಖಲಿಸಿದ್ದಾರೆ. ಹೆಸರು ಸಹಿತ ದೂರು ದಾಖಲಿಸುತ್ತೇನೆ ಎಂದಿದ್ದ ರಮೇಶ್ ಜಾರಕಿಹೊಳಿ ಅವರು ಇದೀಗ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ಕೊಟ್ಟಿದ್ದಾರೆ.

'ಸಿಡಿ' ಪ್ರಕರಣದ ಎಫ್‌ಐಆರ್‌ನಲ್ಲಿ ಏನಿದೆ?

'ಸಿಡಿ' ಪ್ರಕರಣದ ಎಫ್‌ಐಆರ್‌ನಲ್ಲಿ ಏನಿದೆ?

ನನ್ನ ವಿರುದ್ಧ ತೇಜೋವಧೆ ಮಾಡಲು, ರಾಜಕೀಯವಾಗಿ ಮುಗಿಸಲು ಹಾಗೂ ಹಣ ವಸೂಲಿ ಮಾಡಲು ಷಡ್ಯಂತ್ರವನ್ನು ರೂಪಿಸಲಾಗಿದೆ. ಸುಮಾರು ಮೂರು ತಿಂಗಳುಗಳಿಂದ ಸದಾಶಿವನಗರದಲ್ಲಿ ನನ್ನ ವಿರುದ್ಧ ಮಸಲತ್ತು ಹಾಗೂ ಮೋಸ ಮಾಡಿ ನಕಲಿ 'ಸಿಡಿ' ಸೃಷ್ಟಿ ಮಾಡಿದ್ದಾರೆ.

ಸಿಡಿ ಸ್ಫೋಟ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಿಡಿ ಗರ್ಲ್ ವೈರಲ್ !ಸಿಡಿ ಸ್ಫೋಟ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಿಡಿ ಗರ್ಲ್ ವೈರಲ್ !

ನಕಲಿ ಸಿಡಿ ಸೃಷ್ಟಿಸಿ ನನಗೆ ಮಾನಸಿಕ ಹಿಂಸೆಯನ್ನು ಮಾಡಿ ರಾಜಕೀಯವಾಗಿ ಮಾನಹಾನಿ ಮಾಡಿ ನನ್ನಿಂದ ಹಣ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ರಾಜಕೀಯ ಅಸ್ಥಿರತೆಗೆ ಪ್ರಯತ್ನ

ರಾಜಕೀಯ ಅಸ್ಥಿರತೆಗೆ ಪ್ರಯತ್ನ

ಈ ಪ್ರಕರಣದ ಹಿಂದೆ ಹಲವಾರು ಜನರಿದ್ದಾರೆ. ಕೆಲವರು ಷಡ್ಯಂತ್ರ ಮಾಡಿ, ಇನ್ನೂ ಕೆಲವರು ನಕಲಿ ಸಿಡಿ ತಯಾರಿಸಲು ಭಾಗಿಯಾಗಿದ್ದಾರೆ. ಜೊತೆಗೆ ಮತ್ತಿತರರನ್ನು ಬಳಸಿಕೊಂಡು ಅಂತರ್ಜಾಲ ವಾಹಿನಿಯಲ್ಲಿ ಬಿಡುಗಡೆ ಮಾಡಿ ರಾಜಕೀಯ ಅಸ್ಥಿರತೆಯನ್ನು ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಕಾನೂನು ಕ್ರಮವನ್ನು ದಾಖಲಿಸುವಂತೆ ಕೊಟ್ಟ ದೂರು ಎಂದು ನಮೂದಿಸಲಾಗಿದೆ.

ಯಾವ ಯಾವ ಸೆಕ್ಷನ್‌ಗಳನ್ನು ಹಾಕಲಾಗಿದೆ?

ಯಾವ ಯಾವ ಸೆಕ್ಷನ್‌ಗಳನ್ನು ಹಾಕಲಾಗಿದೆ?

ರಮೇಶ್ ಜಾರಕಿಹೊಳಿ ಅವರು ಕೊಟ್ಟಿರುವ ದೂರು ಆಧರಿಸಿ ಸದ್ಯಕ್ಕೆ ಐಪಿಸಿ ಸೆಕ್ಷನ್ 34, 120B, 385, 465 ಹಾಗೂ 469 ಅಡಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 34ರ ಪ್ರಕಾರ ಅಪರಾಧ ಉದ್ದೇಶ, 120B ಪಿತೂರಿ ಒಳಸಂಚು, 385 ತೇಜೋವಧೆ ಮಾಡಲು ಒಳಸಂಚು ರೂಪಿಸುವುದು, 465 ನಕಲಿ ದಾಖಲೆಗಗಳ ಸೃಷ್ಟಿ ಹಾಗೂ 469 ಕೂಡ ಸೆಕ್ಷನ್ 465ಕ್ಕೆ ಪೂರಕವಾಗಿ ತನಿಖೆ ನಡೆಸಲು ಪೊಲೀಸರಿಗೆ ಸಹಾಯವಾಗಲಿವೆ.

English summary
Ramesh Jarkiholi CD Row: FIR has lodged by police on basis of Ramesh Jarkiholi complaint. Read More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X