• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸ್ ವಿಚಾರಣೆಗೆ ದೂರುದಾರ ದಿನೇಶ್ ಕಲ್ಲಹಳ್ಳಿ ಗೈರಾಗಿದ್ದು ಯಾಕೆ ?

|

ಬೆಂಗಳೂರು, ಮಾರ್ಚ್‌ 04, ಮಾಜಿ ಸಚಿವ ರಮೇಶ ಜಾರಕಿಹೊಳಿ "ರಾಸಲೀಲೆ ಸಿಡಿ" ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ದೂರುದಾರ ದಿನೇಶ್ ಕಲ್ಲಹಳ್ಳಿ ನಿರಾಕರಿಸಿದ್ದಾರೆ. ನನಗೆ ಜೀವ ಭಯವಿದ್ದು, ಭದ್ರತೆ ಇಲ್ಲದೇ ನಾನು ಪೊಲೀಸ್ ಠಾಣೆಗೆ ಬರಲು ಆಗುವುದಿಲ್ಲ ಎಂದು ಪತ್ರ ರವಾನಿಸಿದ್ದಾರೆ.

ಜಾರಕಿಹೊಳಿ ಸಿಡಿ ಪ್ರಕರಣ: ಯುವತಿಗಾಗಿ ಪೊಲೀಸರ ಹುಡುಕಾಟ

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಾರುತಿ ಅವರಿಗೆ ಪತ್ರ ರವಾನಿಸಿದ್ದು, ಭದ್ರತೆ ಬಗ್ಗೆ ಪರಿಶೀಲಿಸಿ ಮುಂದಿನ ದಿನಾಂಕ ನಿಗದಿ ಪಡಿಸಲು ಕಬ್ಬನ್ ಪಾರ್ಕ್ ಪೊಲೀಸರು ತೀರ್ಮಾನಿಸಿದ್ದಾರೆ.

   ಅಬ್ಬಾ ಎಂಥಾ ಕೆಟ್ಟ ರಾಜಕಾರಣಿಗಳು ! ನಾಚಿಗೆಡ್ ಸರ್ಕಾರ ! | Oneindia Kannada

   ದಿನೇಶ್ ಕಲ್ಲಹಳ್ಳಿ ವಿಚಾರಣೆಗೆ ಗೈರು ಹಾಜರಾಗಿರುವ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಮಾಹಿತಿ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಗೆ ಬರೆದಿರುವ ಪತ್ರದ ಬಗ್ಗೆ ವಿವರ ನೀಡಿದ್ದಾರೆ. ಆಯುಕ್ತರ ಸೂಚನೆ ಮೇರೆಗೆ ದೂರುದಾರ ದಿನೇಶ್ ಕಲ್ಲಹಳ್ಳಿಗೆ ಭದ್ರತೆ ಒದಗಿಸಿ ವಿಚಾರಣೆ ನಡೆಸಲು ತೀರ್ಮಾನಿಸಿದ್ದಾರೆ. ದೂರು ನೀಡಿ ಎರಡು ದಿನವಾದರೂ ಇನ್ನೂ ಸಂತ್ರಸ್ತ ಯುವತಿಯ ವಿವರ ಲಭ್ಯವಾಗಿಲ್ಲ. ಹೀಗಾಗಿ ದೂರು ಸ್ವೀಕರಿಸಿದರೂ ಎಫ್‌ಐಆರ್ ದಾಖಲಿಸದೇ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

   English summary
   Ramesh Jarkiholi CD row: Complainant Dinesh Kallahalli failed to appear before Cubbon Park station Police today and sent a letter to the police saying he would not attend the hearing.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X