ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಮಗಳನ್ನು ನನಗೆ ಕೊಟ್ಟು ಬಿಡಿ: ಕೈ ಮುಗಿದು ಕೇಳಿದ 'ಸಿಡಿ ಲೇಡಿ' ತಂದೆ

|
Google Oneindia Kannada News

ಬೆಂಗಳೂರು, ಮಾರ್ಚ್‌ 27: ನಾನು ದೇಶ ರಕ್ಷಣೆ ಮಾಡಿ ಬಂದ ಸೈನಿಕ. ನನ್ನ ಮಗಳನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ನನ್ನ ಮಗಳನ್ನು ಮುಂದಿಟ್ಟುಕೊಂಡು ಹೊಲಸು ರಾಜಕಾರಣ ಮಾಡುತ್ತೀರಾ ? ದೇಶ ಕಾಯುವ ನಾನು ನನ್ನ ಮಗಳನ್ನು ರಕ್ಷಣೆ ಮಾಡಿಕೊಳ್ಳುತ್ತೇನೆ.

ಮಾಧ್ಯಮಗಳ ಎದುರು ಕೈ ಮುಗಿದು ಕಣ್ಣೀರು ಹಾಕುತ್ತಲೇ ಸಿಡಿಲೇಡಿಯ ತಂದೆ ಕೇಳಿದ ಪರಿಯಿದು. ಯುವತಿ ತನ್ನ ಸಹೋದರ ಜತೆ ಮಾತನಾಡಿದ್ದ ಅಡಿಯೋ ಮೊಬೈಲ್ ನಲ್ಲಿ ಪ್ರಸಾರ ಮಾಡಿದ ಯುವತಿ ತಂದೆಯ ಕಣ್ಣಲ್ಲಿ ನೀರು ತುಂಬಿತ್ತು. ನನ್ನ ಮಗಳನ್ನು ನನಗೆ ಕೊಡಿ. ಒಬ್ಬ ದಲಿತ ಹೆಣ್ಣು ಮಗಳನ್ನು ಮುಂದಿಟ್ಟುಕೊಂಡು ಹೊಲಸು ರಾಜಕಾರಣ ಮಾಡುವ ಅಗತ್ಯವಿಲ್ಲ. ನನ್ನ ಮಗಳನ್ನು ನಾನು ಕಾಯುತ್ತೇನೆ. ಎಲ್ಲಾ ಸಾಕ್ಷಿಗಳನ್ನು ಎಸ್ಐಟಿ ಅಧಿಕಾರಿಗಳಿಗೆ ನೀಡಿದ್ದೇವೆ ಎಂದು ಯುವತಿ ತಂದೆ ಹೇಳಿದರು.

ರಮೇಶ್ ಜಾರಕಿಹೊಳಿ ದೃಶ್ಯವಲ್ಲ, ಮಾತೂ ಸಹ ಅಶ್ಲೀಲ: ಕಾಂಗ್ರೆಸ್ರಮೇಶ್ ಜಾರಕಿಹೊಳಿ ದೃಶ್ಯವಲ್ಲ, ಮಾತೂ ಸಹ ಅಶ್ಲೀಲ: ಕಾಂಗ್ರೆಸ್

ಇದೇ ವೇಳೆ ಮಾತನಾಡಿದ ಯುವತಿಯ ಸಹೋದರ, ವಿಡಿಯೋ ಬಿಡುಗಡೆಯಾದ ಬಳಿಕ ನನ್ನ ಅಕ್ಕನಿಗೆ ದುಡ್ಡು ಕೊಟ್ಟು ಗೋವಾಗೆ ಕಳುಹಿಸಿದ್ದಾರೆ. ಆಕೆಯ ಮೊಬೈಲ್ ಸ್ವಿಚ್‌ ಆಫ್ ಆಗಿದ್ದಕ್ಕೆ ಅಕಾಶ್ ಗೆ ಪೋನ್ ಮಾಡಿ ಮಾತನಾಡಿಸಿದೆ. ಡಿ.ಕೆ. ಶಿವಕುಮಾರ್ ಮನೆ ಹತ್ತಿರ ಹೋಗಿರುವ ವಿಚಾರವನ್ನು ಹೇಳಿದ್ದಾಳೆ. ಡಿ.ಕೆ. ಶಿವಕುಮಾರ್ ಹಣ ಕೊಟ್ಟು ಕಳುಹಿಸಿದ್ದಾರೆ. ನನ್ನ ಅಕ್ಕನನ್ನು ಒತ್ತೆಯಾಳು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಅಕ್ಕನನ್ನು ಬಿಟ್ಟು ಗಂಡಸ್ತನ ರಾಜಕಾರಣ ಮಾಡಿ ಎಂದು ಸಂತ್ರಸ್ತೆ ಯುವತಿಯ ಸಹೋದರ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಕೂಡಲೇ ನನ್ನ ಅಕ್ಕನನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿದರು.

Ramesh Jarkiholi CD row: CD lady father says Politicians playing with my daughter

Recommended Video

DK ಶಿವಕುಮಾರ್ ಹೆಸರು ಹೇಳಿದ ಸಿಡಿ ಲೇಡಿ | Oneindia Kannada

ಎಲ್ಲಾ ದಾಖಲೆ ಎಸ್‌ಐಟಿಗೆ : ನಮ್ಮ ಬಳಿ ಇರುವ ಎಲ್ಲಾ ದಾಖಲೆಗಳನ್ನು ಎಸ್ಐಟಿ ಅಧಿಕಾರಿಗಳಿಗೆ ಸಲ್ಲಿಸಿದ್ದೇವೆ ಎಂದು ಇದೇ ವೇಳೆ ತಿಳಿಸಿದರು. ನನ್ನ ಅಕ್ಕನಿಗೆ ಏನಾದರೂ ಆದರೂ ಡಿ.ಕೆ. ಶಿವಕುಮಾರ್ ಕಾರಣ ಎಂದು ಆರೋಪಿಸಿದರು. ರಾಜಕೀಯ ಷಡ್ಯಂತ್ರದ ಹಿಂದೆ ಕೇಳಿ ಬರುತ್ತಿದ್ದ ಮಹಾನಾಯಕ ಡಿ.ಕೆ. ಶಿವಕುಮಾರ್ ಎಂಬುದನ್ನು ಯುವತಿ ಪೋಷಕರು ಆರೋಪಿಸಿದ್ದಾರೆ.

English summary
Ramesh Jarkiholi CD row: CD lady father says Politicians are playing with my family in front of media. Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X