ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದನ ಕಲಾಪದ ಚರ್ಚೆ ನಂತರ "ಸಿಡಿ ಕೇಸಿಗೆ " ಸಿಗಲಿದೆಯಾ ಮಹಾ ಟ್ವಿಸ್ಟ್ !

|
Google Oneindia Kannada News

ಬೆಂಗಳೂರು, ಮಾರ್ಚ್‌ 23: ರಾಜ್ಯದ ಪ್ರಗತಿಗೆ ಮಂಡಿಸಿದ ಬಜೆಟ್ ಬಗ್ಗೆ ಚರ್ಚೆ ನಡೆಯಬೇಕಿದ್ದ ಕಲಾಪ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಮಯವಾಗಿದೆ. ಇಪ್ಪತ್ತು ದಿನವಾದರೂ ದೂರು ನೀಡದೇ ಕಣ್ಮರೆಯಾಗಿರುವ ಸಂತ್ರಸ್ತೆ ಎನ್ನಲಾದ ಯುವತಿ ಎಸ್ಐಟಿಗೆ ದೂರು ನೀಡಿಲ್ಲ. ಕಲಾಪದಲ್ಲಿ ವಿಪಕ್ಷಗಳು ಸಿಡಿ ವಿಚಾರ ಸತತ ವಾಗ್ದಾಳಿ ನಡೆಯುತ್ತಿವೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ಸಿಡಿ ಲೇಡಿಯೇ ಸ್ವತಃ ಎಸ್ಐಟಿ ಮುಂದೆ ಬಂದು ಹೇಳಿಕೆ ದಾಖಲಿಸಲಿದ್ದಾಳೆಯೇ ಎಂಬ ಚರ್ಚೆ ಇದೀಗ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ.

"ಅಶ್ಲೀಲ ಸಿಡಿ ನಕಲಿ" ಎಂದು ಸಾಬೀತು ಪಡಿಸಲು ಹೊರಟಿರುವ ಜಾರಕಿಹೊಳಿಗೆ ಈ ಬೆಳವಣಿಗೆಯಿಂದ ನಿಜವಾಗಿಯೂ ಹೊಡೆತ ಬೀಳಲಿದೆಯಾ ? ಇಲ್ಲವೇ ಸಿಡಿಯೂ ಅಸಲಿ, ಹನಿ ಟ್ರ್ಯಾಪ್ ಹೌದು ಎಂಬ ಸಂಗತಿ ಎಸ್ಐಟಿ ತನಿಖೆಯಲ್ಲಿ ಏನಾದರೂ ಬಿದ್ದರೆ ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದರ ವಿವರ ಇಲ್ಲಿದೆ.

ಅಶ್ಲೀಲ ಸಿಡಿ ಕೇಸಿನಿಂದ ಹೊರ ಬೀಳುತ್ತಿರುವ ಸುಳ್ಳುಗಳಿಂದ ಆಗುವ ಅನಾಹುತ ಎಂಥದ್ದು ಗೊತ್ತಾ ?ಅಶ್ಲೀಲ ಸಿಡಿ ಕೇಸಿನಿಂದ ಹೊರ ಬೀಳುತ್ತಿರುವ ಸುಳ್ಳುಗಳಿಂದ ಆಗುವ ಅನಾಹುತ ಎಂಥದ್ದು ಗೊತ್ತಾ ?

ಸಿಡಿ ಸ್ಫೋಟ: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟಗೊಳ್ಳುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮಾಜಿ ಸಚಿವರಿಂದ ಯುವತಿಗೆ ಅನ್ಯಾಯವಾಗಿದೆ. ಕೆಲಸ ಕೊಡಿಸುವ ನೆಪದಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ದಿನೇಶ್ ಕಲ್ಲಹಳ್ಳಿ ಎಂಬಾತ ಪೊಲೀಸ್ ಆಯುಕ್ತರಿಗೆ ದೂರು ನೀಡಿದರು. ದೂರು ನೀಡಿದ ಬಳಿಕ ಸಂತ್ರಸ್ತೆ ಎನ್ನಲಾದ ಯುವತಿ ದೂರು ನೀಡಲು ಮುಂದೆ ಬರಲಿಲ್ಲ. ಅಶ್ಲೀಲ ಸಿಡಿ ಷಡ್ಯಂತ್ರ, ಹನಿಟ್ರ್ಯಾಪ್ ಎಂಬ ಚರ್ಚೆಗಳು ಮುನ್ನೆಲೆಗೆ ಬಂದವು. ದೂರುದಾರನ ಹೆಜ್ಜೆಗಳು ಅನುಮಾನ ಮೂಡಿಸಿದವು. ಕೊನೆಗೂ ದೂರನ್ನು ದಿನೇಶ್ ಕಲ್ಲಹಳ್ಳಿ ವಾಪಸು ಪಡೆದಿದ್ದು ಇಡೀ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿತು.

ಸಿಡಿ ಕೇಸಿನ ಬೆಳವಣಿಗೆಯ ವೃತ್ತಾಂತ

ಸಿಡಿ ಕೇಸಿನ ಬೆಳವಣಿಗೆಯ ವೃತ್ತಾಂತ

ಸಂತ್ರಸ್ತೆ ಎನ್ನಲಾದ ಯುವತಿಯೇ ಕಣ್ಮರೆಯಾದಳು. ಎಷ್ಟು ದಿನವಾದರೂ ದೂರು ನೀಡಲು ಮುಂದೆ ಬರಲಿಲ್ಲ. ಆನಂತರದ ಬೆಳವಣಿಗೆ ನೀಡಿ ರಮೇಶ್ ಜಾರಕಿಹೊಳಿಯೇ ಸ್ವತಃ ದೂರು ನೀಡಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತು. ತನಿಖೆಗೆ ಎಫ್‌ಐಆರ್ ಇಲ್ಲದ ಕಾರಣ ಎಸ್ಐಟಿಗೆ ತನಿಖೆಗೆ ಆರಂಭದಲ್ಲಿ ಹಿನ್ನೆಡೆ ಆಯಿತು. ಜಾರಕಿಹೊಳಿ ನೀಡಿದ ದೂರನ್ನೇ ಪರಿಗಣಿಸಿ ಅಶ್ಲೀಲ ಸಿಡಿಯ ಮಹತ್ವದ ಸಂಗತಿಗಳನ್ನು ಹೊರಗೆ ಹಾಕಿತು. ಟ್ರ್ಯಾಪ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಶಂಕಿತರೆನ್ನಲಾದ ಆರೋಪಿತರ ಮನೆಗಳ ಮೇಲೆ ದಾಳಿ ನಡೆಯಿತು.

ದಾಳಿಗೂ ಮುನ್ನ ಯುವತಿ ನೀಡಿದ್ದ ನನಗೆ ಅನ್ಯಾಯವಾಗಿದೆ ವಿಡಿಯೋ ಹೇಳಿಕೆ ಬಿಟ್ಟರೂ ಈವರೆಗೂ ಆಕೆ ಸ್ವತಃ ಬಂದು ಹೇಳಿಕೆ ದಾಖಲಿಸಿಲ್ಲ. ಈ ಎಲ್ಲಾ ನಡೆಗಳು ಕೆಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟವು. ಶಂಕಿತ ಅರೋಪಿಗಳ ಮನೆಗಳ ಮೇಲೆ ದಾಳಿಯೂ ಹಣಕಾಸಿನ ವಹಿವಾಟಿನ ಕೆಲವು ಸಂಗತಿಗಳನ್ನು ಹೊರ ಹಾಕಿತು. ಇದರ ಬೆನ್ನಲ್ಲೆ ಶಂಕಿತರೆನ್ನಲಾದ ನಾಲ್ವರಿಗಾಗಿ ಎಸ್ಐಟಿ ಕಳೆದ ಹದಿನೈದು ದಿನಗಳಿಂದ ಶೋಧ ನಡೆಸುತ್ತಿದೆ. ಇದೀಗ ಕಲಾಪದಲ್ಲಿ ಸಿಡಿ ಸಮರ ತಾರಕಕ್ಕೇರಿದೆ.

ಕಲಾಪದ ನಂತರ ಆಗುವ ಬೆಳವಣಿಗೆ

ಕಲಾಪದ ನಂತರ ಆಗುವ ಬೆಳವಣಿಗೆ

ಇದೊಂದು ಅತ್ಯಾಚಾರಕ್ಕೆ ಸಮವಾದ ಆರೋಪ. ಎಸ್ಐಟಿ ರಚನೆಯಾಗಿ ಇಷ್ಟು ದಿನವಾದರೂ ಎಸ್ಐಟಿ ಸಂತ್ರಸ್ತೆಯನ್ನು ಪತ್ತೆ ಮಾಡಿಲ್ಲ. ಕಾನೂನು ಪ್ರಕಾರ ಇದನ್ನು ತನಿಖೆಗೆ ಒಳಪಡಿಸಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ " ಹನಿ ಟ್ರ್ಯಾಪ್ ಅನ್ನುವುದಾದರೆ ಹನಿಗೆ ಯಾಕೆ ಕೈ ಹಾಕಿದರು ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಇನ್ನು ಇದೊಂದು ಅಸಲಿ ವಿಡಿಯೋ, ಐದು, ಕೋಟಿ, 9 ಕೋಟಿ ಕೊಟ್ಟಿದ್ದಾರೆ ಎಂಬೆಲ್ಲಾ ಮಾತು ಬರುತ್ತಿವೆ. ಈ ಕುರಿತು ಇಡಿ ಮತ್ತು ಐಟಿ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದ್ದಾರೆ.

ಸದನದಲ್ಲಿ ಡಿಕೆಶಿ ಸ್ಪೋಟಕ ಭಾಷಣ: 'ಮಂಚದ ಮೇಲಿರುವಾಗ ಮಂಚದ ಕೆಲಸ ಮಾಡಲಿ'ಸದನದಲ್ಲಿ ಡಿಕೆಶಿ ಸ್ಪೋಟಕ ಭಾಷಣ: 'ಮಂಚದ ಮೇಲಿರುವಾಗ ಮಂಚದ ಕೆಲಸ ಮಾಡಲಿ'

ಇದು ಅಸಲಿ ಸಿಡಿ ಎಂಬುದನ್ನು ಮಾರ್ಮಿಕವಾಗಿ ಪ್ರಸ್ತಾಪ ಮಾಡಿದ್ದಾರೆ. ಇದರ ನಡುವೆ ಎಸ್ಐಟಿ ರಚನೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಕೂಡ ಕಾಂಗ್ರೆಸ್ ಪ್ರಸ್ತಾಪಿಸಿದೆ. ಸಂತ್ರಸ್ತೆ ಎನ್ನಲಾದ ಯುವತಿ ಪರವಾಗಿ ಬಲವಾದ ಧ್ವನಿಯೆತ್ತಿದೆ. ಸದನದಲ್ಲಿ ಯುವತಿಗೆ ಸಿಕ್ಕ ಬಲ ನೋಡಿ ಸಂಸ್ತಸ್ತೆ ಎನ್ನಲಾದ ಸಿಡಿ ಗರ್ಲ್ ಸ್ವಯಂ ಪ್ರೇರಿತವಾಗಿ ಎಸ್ಐಟಿ ಅಧಿಕಾರಿಗಳ ಮುಂದೆ ಬಂದು ಹೇಳಿಕೆ ನೀಡಲು ಮುಂದಾಗಳಿದ್ದಾಳೆಯೇ ಎಂಬುದು ಚರ್ಚೆಗೆ ನಾಂದಿ ಹಾಡಿದೆ.

ಸಿಡಿ ಗರ್ಲ್ ದೂರು ಕೊಟ್ಟರೆ ಜಾರಕಿಹೊಳಿಗೆ ತೊಡಕು

ಸಿಡಿ ಗರ್ಲ್ ದೂರು ಕೊಟ್ಟರೆ ಜಾರಕಿಹೊಳಿಗೆ ತೊಡಕು

ಸಾಧ್ಯತೆ 1 : ಸಂತ್ರಸ್ತೆ ಎನ್ನಲಾದ ಯುವತಿ ಯಾವುದಾದರೂ ಪೊಲೀಸ್ ಠಾಣೆಗೆ ದೂರು ನೀಡಿದರೆ, ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಕಾನೂನು ಪ್ರಕಾರ ನೋಡುವುದಾದರೆ ಸಿಡಿ ಗರ್ಲ್ ದೂರನ್ನು ಪೊಲೀಸರು ಪ್ರಾಥಮಿಕ ಹಂತದಲ್ಲಿ ಪರಿಗಣಿಸಲೇಬೇಕಾಗುತ್ತದೆ. ಹೀಗಾಗಿ ಎಫ್ಐಆರ್ ಆದರೂ ಸಾಕು ರಮೇಶ್ ಜಾರಕಿಹೊಳಿಗೆ ಇನ್ನೊಂದು ಹಿನ್ನೆಡೆಯಾಗುವ ಸಾಧ್ಯತೆಯಿದೆ.

ಇನ್ನು ರಮೇಶ್ ಜಾರಕಿಹೊಳಿ ಅವರ ನಕಲಿ ಸಿಡಿ ಎಂಬ ವಾದವೇ ಸಂಪೂರ್ಣ ಮಣ್ಣು ಪಾಲಾಗಲಿದೆ. ಮತ್ತೊಂದು ಸುತ್ತಿನಲ್ಲಿ ಸಮಸ್ಯೆ ಎದುರಾಗಬಹುದು. ಇನ್ನು ಅವರು ಜಾರಕಿಹೊಳಿ ಹೇಳುವ ಇದೊಂದು ರಾಜಕೀಯ ಷಡ್ಯಂತ್ರ, ಬ್ಲಾಕ್ ಮೇಲ್ ಎಂಬ ಆರೋಪಗಳಿಗೆ ಪುರಾವೆ ಒದಗಿಸಬೇಕಾಗುತ್ತದೆ. ಒಂದು ವೇಳೆ ಐದಾರು ಕೋಟಿ ಕೊಟ್ಟಿದ್ದೇವೆ ಎಂದರೆ, ಅದು ಎಲ್ಲಿಂದ ಬಂತು ಎನ್ನುವ ಪ್ರಶ್ನೆಯನ್ನು ವಿಪಕ್ಷಗಳು ಎತ್ತಬಹುದು. ಹೀಗಾಗಿ ಸಂತ್ರಸ್ತೆ ಎನ್ನಲಾದ ಯುವತಿ ದೂರು ಕೊಟ್ಟಿದ್ದೇ ಆದಲ್ಲಿ ಪ್ರಾರಂಭಿಕ ಹಂತದಲ್ಲಿ ರಮೇಶ್ ಜಾರಕಿಹೊಳಿಗೆ ತೊಡಕಾಗುವ ಸಾಧ್ಯತೆಯಿದೆ.

ಸಿಡಿ ಲೇಡಿ ಸತ್ಯ ಬಿಚ್ಚಿಟ್ಟರೆ ಕಂಟಕ ಯಾರಿಗೆ ?

ಸಿಡಿ ಲೇಡಿ ಸತ್ಯ ಬಿಚ್ಚಿಟ್ಟರೆ ಕಂಟಕ ಯಾರಿಗೆ ?

ಸಾಧ್ಯತೆ 2 : ಸಂತ್ರಸ್ತೆ ಎನ್ನಲಾದ ಯುವತಿ ಏನಾದರೂ ಪೊಲೀಸರ ಮುಂದೆ ಶರಣಾಗಿ, ಹೌದು ನಿ ಟ್ರ್ಯಾಪ್ ಮಾಡಿದ್ದು ನಿಜ. ನನಗೆ ಈಗೆ ಆಗುತ್ತೆ ಅಂತ ಗೊತ್ತಿರಲಿಲ್ಲ. ತಪ್ಪು ಮಾಡಿದೆ. ನನಗೆ ಇಂತಹ ವ್ಯಕ್ತಿಗಳು ಫುಸಲಾಯಿಸಿ ನನ್ನ ಕೈಯಲ್ಲಿ ಮಾಡಿಸಿದರು ಎಂಬ ಸಂಗತಿಯನ್ನು ಏನಾದರೂ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದಲ್ಲಿ, ಸಂತ್ರಸ್ತೆ ಪ್ರಕರಣದ ಕೇಂದ್ರ ಬಿಂಧು ಆಗಲಿದ್ದಾಳೆ. ಆಕೆ ನೀಡುವ ಹೇಳಿಕೆ ಆಧರಿಸಿ ರೂಪಿಸಿದ ಷಡ್ಯಂತ್ರ್ಯದ ವೃತ್ತಾಂತವನ್ನ ಎಸ್ಐಟಿ ಅಧಿಕಾರಿಗಳು ಬಯಲಿಗೆ ಎಳೆಯಬಹುದು. ಹೀಗೆ ಆಗಿದ್ದೇ ಆದಲ್ಲಿ ಜಾರಕಿಹೊಳಿ ಸಾಮಾಜಿಕವಾಗಿ ತನ್ನ ಅಸ್ತಿತ್ವ ಕಳೆದುಕೊಂಡರೂ ರಾಜಕೀವಾಗಿ ಉಳಿಯವ ಪ್ರಯತ್ನಕ್ಕೆ ಅಲ್ಪ ಜಯ ತಂದು ಕೊಟ್ಟಂತಾಗುತ್ತದೆ. ಇನ್ನು ಈಪ್ರಕರಣದ ಷಡ್ಯಂತ್ರ, ಭಾಗಿಯಾದವರು ಕಟೆಕಟೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಲಿದೆ.

Recommended Video

ಶಾಸಕ ಯತ್ನಾಳ್ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು..ಸಿಎಂ ಗೆ ದೂರು | Oneindia Kannada
ಮರ್ಯಾದೆ ಬಯಸಿ ನಿಂತರೆ

ಮರ್ಯಾದೆ ಬಯಸಿ ನಿಂತರೆ

ಸಾಧ್ಯತೆ - 3: ಆಗಿದ್ದು ಸಾಕು, ಇನ್ನು ನನ್ನ ರಾಜಕೀಯ ಭವಿಷ್ಯವೂ ಮುಗಿಯಿತು. ಇದರಿಂದ ಇನ್ನು ಆಗಬೇಕಿರುವುದು ಏನೂ ಇಲ್ಲ ಅಂತ ಜಾರಕಿಹೊಳಿ ಸುಮ್ಮನಾದಲ್ಲಿ, ಬಹುಶಃ ಸಿಡಿ ಲೇಡಿ ಕೂಡ ಸುಮ್ಮನಾಗಿ ಪ್ರಕರಣ ಸದ್ದಿಲ್ಲದೇ ಮುಕ್ತಾಯ ಆಗಬಹುದು. ಇಲ್ಲ, ನನ್ನ ರಾಜಕೀಯ ಭವಿಷ್ಯ ಮುಖ್ಯವಲ್ಲ, ನನ್ನ ಕುಟುಂಬದ ಮರ್ಯಾದೆ ಮುಖ್ಯ. ಇದರ ಅಸಲಿ ಸತ್ಯವನ್ನು ಬಯಲಿಗೆ ಎಳೆಯುವ ವರೆಗೂ ಬಿಡಲ್ಲ ಎಂದು ಪಟ್ಟು ಹಿಡಿದು ಕಾನೂನು ಸಮರ ಮುಂದುವರೆಸಿದ್ದೇ ಆದಲ್ಲಿ, ಅದರಂತೆ ಎಸ್ಐಟಿ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ಮಾಡಿದರೆ, ಬಹುಶಃ ಕಾಲಂತರದಲ್ಲಿ ರಮೇಶ್ ಜಾರಕಿಹೊಳಿ ನಿರೀಕ್ಷೆಗೂ ಮೀರಿದ ಗೆಲವು ಸಿಗಬಹುದು. ತಪ್ಪೇ ಮಾಡಿದ್ದಲ್ಲಿ ಕಡು ಕಷ್ಟವೂ ಎದುರಾಗಬಹುದು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಇದೊಂದು ನಕಲಿ ಸಿಡಿ ಎಂದು ಸಾಭೀತು ಮಾಡಲು ಅಂತು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

English summary
Will Ramesh Jarki get in trouble if CD girl lodges complaint after debate in Assembly Session? know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X