ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking News: ಪೊಲೀಸ್ ಆಯುಕ್ತರಿಗೆ ಸಿಡಿ ಗರ್ಲ್ ದೂರು ಸಲ್ಲಿಕೆ, ಮುಂದೇನು?

|
Google Oneindia Kannada News

ಬೆಂಗಳೂರು, ಮಾರ್ಚ್ 26: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಸುಮಾರು 24 ದಿನಗಳ ಬಳಿಕ ಸಿಡಿಯಲ್ಲಿರುವ ಯುವತಿ ಇದೇ ಮೊದಲ ಬಾರಿಗೆ ದೂರು ದಾಖಲಿಸಿದ್ದಾರೆ. ಯುವತಿ ಪರ ವಕೀಲರಾದ ಜಗದೀಶ್ ಕುಮಾರ್ ಅವರು ಇಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

Recommended Video

Jarkiholi CD Lady, ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದು ಯಾಕೆ ? | Ramesh Jarkiholi | Oneindia Kannada

ದೂರು ಸ್ವೀಕರಿಸಿದ ಪೊಲೀಸ್ ಆಯುಕ್ತ ಪಂತ್ ಅವರು ಸದರಿ ದೂರಿನ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಡಿಸಿಪಿ ಅನುಚೇತ್ ಅವರಿಗೆ ಸೂಚಿಸಿದ್ದಾರೆ. ದೂರಿನ ಪ್ರತಿ ಮೊದಲು ದೂರು ದಾಖಲಾಗಿದ್ದ ಕಬ್ಬನ್ ಪಾರ್ಕ್ ಠಾಣೆ ತಲುಪಲಿದೆ. ಯುವತಿ ಪರ ವಕೀಲರು ಕೂಡಾ ಠಾಣೆಗೆ ತೆರಳಿ ದೂರು ಸ್ವೀಕೃತಿ ಪತ್ರವನ್ನು ಸಲ್ಲಿಸಲಿದ್ದಾರೆ.

ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್ಐಟಿ) ಕೈಗೆತ್ತಿಕೊಂಡಿರುವುದರಿಂದ ಈ ಲಿಖಿತ ದೂರಿನ ಬಗ್ಗೆ ಎಸ್ಐಟಿ ತಂಡದೊಡನೆ ಕೂಡಾ ಕಮಲ್ ಪಂತ್ ಅವರು ಕ್ಲುಪ್ತವಾಗಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

Ramesh jarkiholi CD Row : Advocate Jagadish Handover CD Ladys Complaint To Police Commissioner

ರಮೇಶ್ ಮೇಲೆ ಏನೇನು ದೂರು?
ಕೆಲಸ ಕೊಡಿಸದೆ ವಂಚಿಸಿ, ಜೀವ ಬೆದರಿಕೆ ಹಾಕಿರುವುದು, ಅಧಿಕಾರದ ದುರ್ಬಳಕೆ, ಅಶ್ಲೀಲವಾಗಿ ವರ್ತಿಸಿ, ದೈಹಿಕ ಸಂಪರ್ಕಕ್ಕೆ ಫುಸಲಾಯಿಸಿರುವುದು, ವಿಡಿಯೋದಲ್ಲಿ ನಗ್ನವಾಗಲು ಸೂಚಿಸಿ, ಗುಪ್ತಾಂಗ ತೋರಿಸಲು ಪ್ರಚೋದಿಸಿರುವುದು ಇದೆಲ್ಲದರ ಜೊತೆಗೆ ಅವರ ಅಪಾರ್ಟ್ಮೆಂಟ್‌ಗೆ ಕರೆಸಿಕೊಂಡು ಎರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.

ರಕ್ಷಣೆಗಾಗಿ ಮನವಿ
ಯುವತಿ ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆ ಇದೆ, ಅವರಿಗೆ ಸೂಕ್ತ ಭದ್ರತೆ ನೀಡಬೇಕು, ಈ ಬಗ್ಗೆ ಡಿಐಜಿ ಬಗ್ಗೆ ಚರ್ಚಿಸುತ್ತೇನೆ. ಭದ್ರತೆ ಬಗ್ಗೆ ನಂಬಿಕೆ ಬಂದರೆ ನಾಳೆ, ನಾಡಿದ್ದರಲ್ಲಿ ಆಯುಕ್ತರ ಮುಂದೆ ಯುವತಿ ಹಾಜರಾಗಲಿದ್ದಾರೆ, ಸದ್ಯಕ್ಕೆ ಕೇವಲ ದೂರು ನೀಡುವುದು ನನ್ನ ಜವಾಬ್ಧಾರಿ . ಅದನ್ನು ಮಾಡುದ್ದೇನೆ ಎಂದು ವಕೀಲ.‌ಕೆ.ಎನ್. ಜಗದೀಶ್ ಕುಮಾರ್ ಹೇಳಿದ್ದಾರೆ.

English summary
Ramesh Jarkiholi CD row: Advocate Jagadish Handover CD Lady's Complaint To Police Commissioner at 2.30 pm today in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X