ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಡಿ ಗರ್ಲ್ ಪೋಷಕರಿಂದ ಹೇಳಿಕೆ ದಾಖಲಿಸಿಕೊಂಡ ಎಸ್ಐಟಿ ಪೊಲೀಸರು

|
Google Oneindia Kannada News

ಬೆಂಗಳೂರು, ಮಾರ್ಚ್‌ 23: ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣದ ಕೇಂದ್ರಬಿಂದು ಆಗಿರುವ ಸಿಡಿಗರ್ಲ್ ಕಣ್ಮರೆಯಾಗಿ 21 ದಿನ ಆಗಿದೆ. ಆಕೆಯ ಪೋಷಕರನ್ನು ಪತ್ತೆ ಮಾಡಿ ಹೇಳಿಕೆ ದಾಖಲಿಸುವಲ್ಲಿ ಎಸ್ಐಟಿ ಪೊಲೀಸರು ಯಶಸ್ವಿಯಾಗಿದ್ದಾರೆ. ನನ್ನ ಮಗಳನ್ನು ಯಾರೋ ಅಪಹರಿಸಿ ಬಲವಂತವಾಗಿ ಇಟ್ಟುಕೊಂಡಿದ್ದಾರೆ ಎಂಬ ಸಂಗತಿಯನ್ನು ಎಸ್ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ.

ಸಿಡಿ ಸ್ಫೋಟ ಬಳಿಕ ಬೆಂಗಳೂರು ಖಾಲಿ ಮಾಡಿರುವ ಸಿಡಿ ಗರ್ಲ್, ನನಗೆ ರಮೇಶ್ ಜಾರಕಿಹೊಳಿ ಮೋಸ ಮಾಡಿದರು ಎಂಬ ವಿಡಿಯೋ ಬಿಡುಗಡೆ ಮಾಡಿದರು. ರಕ್ಷಣೆ ಕೋರಿ ಗೃಹ ಮಂತ್ರಿಗಳಲ್ಲಿ ಮನವಿ ಮಾಡಿದ್ದರು. ಆನಂತರ ಆಕೆಯನ್ನು ಪತ್ತೆ ಮಾಡಿ ಹೇಳಿಕೆ ದಾಖಲಿಸುವ ಎಸ್ಐಟಿ ಅಧಿಕಾರಿಗಳ ಪ್ರಯತ್ನ ವಿಫಲವಾಗಿದೆ. ಇನ್ನೊಂದಡೆ ಆಕೆಯ ಪೋಷಕರೇ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು. ಇದಾಗಿ ಹದಿನೈದು ದಿನ ಕಳೆದರೂ ಆಕೆ ಪತ್ತೆಯಾಗಿಲ್ಲ. ಇತ್ತೀಚೆಗೆ ಶಂಕಿತ ಆರೋಪಿ ಎನ್ನಲಾದ ವ್ಯಕ್ತಿ ಸಿಡಿ ಗರ್ಲ್ ತನ್ನ ಜತೆ ಇರುವುದಾಗಿಯೂ ಹೇಳಿಕೆ ನೀಡಿದ್ದರು. ಇದೀಗ ಸಿಡಿ ಸಂಗತಿ ಕಲಾಪದಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಇದರ ಬೆನ್ನಲ್ಲೇ ಸಿಡಿ ಗರ್ಲ್ ಪೋಷಕರನ್ನು ಪತ್ತೆ ಮಾಡಿದ ಎಸ್ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಸದನ ಕಲಾಪದ ಚರ್ಚೆ ನಂತರ ಸದನ ಕಲಾಪದ ಚರ್ಚೆ ನಂತರ "ಸಿಡಿ ಕೇಸಿಗೆ " ಸಿಗಲಿದೆಯಾ ಮಹಾ ಟ್ವಿಸ್ಟ್ !

ಯುವತಿ ಹುಟ್ಟಿನಿಂದ, ವಿದ್ಯಾಭ್ಯಾಸ, ಕೆಲಸದ ವರೆಗೂ ಆಕೆಯ ತಂದೆ ತಾಯಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಇದೇ ವೇಳೆ ನನ್ನ ಮಗಳನ್ನು ಯಾರೋ ಅಪಹರಿಸಿದ್ದಾರೆ. ಆಕೆಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ ಎಂಬ ಹೇಳಿಕೆಯನ್ನು ದಾಖಲಿಸಿದ್ದಾರೆ. ಇದರ ಜತೆಗೆ ಈವರೆಗೂ ನಾಲ್ಕು ಬಾರಿ ಕರೆ ಮಾಡಿರುವ ಸಂಗತಿಯನ್ನು ಹೇಳಿದ್ದಾರೆ.

Ramesh Jarkiholi CD Case: SIT cops recorded CD girl parents statement

Recommended Video

ಶಾಸಕ ಯತ್ನಾಳ್ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು..ಸಿಎಂ ಗೆ ದೂರು | Oneindia Kannada

ಬೆಂಗಳೂರಿನಿಂದ ಕರೆ ಮಾಡಿದಾಗ ನಾನು ಸುರಕ್ಷತೆಯಿಂದ ಇದ್ದೇನೆ ಎಂದಿದ್ದಳು. ಆನಂತರ ಗೋವಾಗೆ ಹೋಗಿಯೂ ಕರೆ ಮಾಡಿದ್ದಳು. ಚೆನ್ನೈಗೆ ಹೋದ ಬಳಿಕ ಭಯದಿಂದ ಮಾತನಾಡಿದ್ದಳು. ತನ್ನನ್ನು ಬಲವಂತವಾಗಿ ಇಟ್ಟುಕೊಂಡಿದ್ದಾರೆ. ನಾನು ಮುಂದೆ ಏನಾಗುತ್ತೇನೋ ಗೊತ್ತಿಲ್ಲ. ಖಿನ್ನತೆಗೆ ಒಳಗಾಗಿದ್ದೇನೆ ಎಂದು ತಿಳಿಸಿದ್ದಾಗಿ ಎಸ್ಐಟಿ ಅಧಿಕಾರಿಗಳ ಮುಂದೆ ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನು ಸಿಡಿ ಗರ್ಲ್ ಕರೆ ಮಾಡಿದ್ದ ಸಹೋದರನ ಬಳಿ ಕಾಲ್ ರೆಕಾರ್ಡ್ ಗಳಿವೆ. ಆದರೆ ಆತ ಸದ್ಯದ ಮಟ್ಟಿಗೆ ಎಸ್‌ಐಟಿ ಪೊಲೀಸರಿಗೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

English summary
SIT police have recorded a statement of a CD girl's parents in connection with the case of Eamesh Jarkiholi CD case know more .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X