ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವತಿ 164 ಹೇಳಿಕೆ ರದ್ದುಕೋರಿ ಅರ್ಜಿ, ಎಸ್ಐಟಿಗೆ ಹೈಕೋರ್ಟ್ ಸಮನ್ಸ್

|
Google Oneindia Kannada News

ಬೆಂಗಳೂರು, ಏಪ್ರಿಲ್ 05: ಸಿಡಿ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ ಸೆಕ್ಷನ್ 164 ಅಡಿ ದಾಖಲಿಸಿದ ಹೇಳಿಕೆಯನ್ನು ಪರಿಗಣಿಸಬಾರದು ಎಂದು ಸಂತ್ರಸ್ತ ಯುವತಿ ಪೋಷಕರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಕುರಿತು ಎಸ್ಐಟಿ ಹಾಗೂ ಗೃಹ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇನ್ನು ಸಿಡಿ ಸಂತ್ರಸ್ತ ಯುವತಿ ದಾಖಲಿಸಿರುವ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕಾಲಾವಕಾಶ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಸರಣಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಸಿಡಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ನೀಡಿದ್ದ ಸಿಡಿಲೇಡಿ ತಾನು ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ ಸೆಕ್ಷನ್ 164 ಅಡಿ ಹೇಳಿಕೆ ದಾಖಲಿಸುವುದಾಗಿ ಹೇಳಿಕೆ ನೀಡಿದ್ದರು. ಅದರಂತೆ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿ ಗುರುನಾನಕ್ ಭವನದಲ್ಲಿರುವ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸಿಡಿ ಸಂತ್ರಸ್ತ ಯುವತಿ ಹೇಳಿಕೆ ದಾಖಲಿಸಿದ್ದರು.

Ramesh Jarkiholi CD case: HC summons to SIT and Home Department

''ತನ್ನ ಮಗಳು ಒತ್ತಡಕ್ಕೆ ಒಳಗಾಗಿದ್ದಾರೆ. ಆಕೆ ನಾಲ್ಕು ದಿನ ನಮ್ಮ ಜತೆ ಇರಲಿ ಅವಕಾಶ ಕೊಡಿ. ಇಲ್ಲವೇ ನ್ಯಾಯಾಧೀಶರು ಸೂಚಿಸಿದ ಜಾಗದಲ್ಲಿ ಇರಲಿ. ಆಕೆ ಮಾನಸಿಕ ಒತ್ತಡದಿಂದ ಹೊರ ಬಂದ ನಂತರ ಹೇಳಿಕೆ ದಾಖಲಿಸಲು ಕಲಾವಕಾಶ ಮಾಡಿ. ಆಕೆ ಒತ್ತಡದಲ್ಲಿ ನ್ಯಾಯಾಧೀಶರ ಮುಂದೆ ಸೆಕ್ಷನ್ 164 ಅಡಿ ದಾಖಲಿಸಿರುವ ಹೇಳಿಕೆಯನ್ನು ರದ್ದು ಮಾಡಿ ''ಎಂದು ಸಂತ್ರಸ್ತ ಯುವತಿಯ ತಂದೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

Ramesh Jarkiholi CD case: HC summons to SIT and Home Department

Recommended Video

ಕಮಲ್ ಹಾಸನ್ ಗೋಸ್ಕರ ರಸ್ತೆಗಿಳಿದ ನಟಿ ಸುಹಾಸಿನಿ | Oneindia Kannada

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಸಂಬಂಧ ಎಸ್ಐಟಿ ಮುಖ್ಯಸ್ಥರಿಗೆ ಹಾಗೂ ಗೃಹ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. ಸಿಡಿ ಸಂತ್ರಸ್ತ ಯುವತಿ ದಾಖಲಿಸಿರುವ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಸಂತ್ರಸ್ತ ಯುವತಿ ಪರ ವಕೀಲರು ಮನವಿ ಮಾಡಿದರು. ಮನವಿ ಪುರಸ್ಕರಿಸಿದ ಹೈಕೋರ್ಟ್ ಕಾಲಾವಕಾಶ ಕಲ್ಪಿಸಿದೆ. ಹೈಕೋರ್ಟ್ ಪೋಷಕರ ಮನವಿಯನ್ನು ಪುರಸ್ಕರಿಸಿ ತೀರ್ಪು ನೀಡಿದಲ್ಲಿ, ಸಿಡಿ ಸಂತ್ರಸ್ತ ಯುವತಿ ಸಿಆರ್ ಪಿಸಿ ಸೆಕ್ಷನ್ 164 ಅಡಿ ದಾಖಲಿಸಿರುವ ಹೇಳಿಕೆ ಅಮಾನ್ಯ ವಾಗಲಿದೆಯಾ ? ಇಲ್ಲವೇ ಅದನ್ನು ನ್ಯಾಯಾಲಯ ಪರಿಗಣಿಸುತ್ತಾ ಎಂಬುದು ಅಂತಿಮ ಆದೇಶ ಬಳಿಕ ಗೊತ್ತಾಗಲಿದೆ.

English summary
The High Court has issued summons to the SIT and Home Department, which has filed a writ petition filed by the parents of the CD girl seeking to quash the crpc 164 statement of the victim, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X