ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಲೈಮ್ಯಾಕ್ಸ್ :ವಿಧಾನಸಭಾ ಕಲಾಪಕ್ಕೆ ಅತೃಪ್ತ ಶಾಸಕರು ಹಾಜರ್

|
Google Oneindia Kannada News

Recommended Video

ಕಾಂಗ್ರೆಸ್ ನಾಲ್ವರು ಅತೃಪ್ತ ಶಾಸಕರು ವಿಧಾನಸಭಾ ಕಲಾಪಕ್ಕೆ ಹಾಜರ್ | Oneindia Kannada

ಬೆಂಗಳೂರು, ಫೆಬ್ರವರಿ 13: ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ, ಬಿಜೆಪಿ ಹಿಡಿದಿಟ್ಟುಕೊಂಡಿದೆ ಎನ್ನಲಾಗಿದ್ದ ನಾಲ್ಕು ಮಂದಿ ಅತೃಪ್ತ ಶಾಸಕರು ವಿಧಾನಸಭಾ ಕಲಾಪಕ್ಕೆ ಇಂದು ಹಾಜರಾಗಿದ್ದಾರೆ.

ಶಾಸಕ ರಮೇಶ್ ಜಾರಕಿಹೊಳಿ, ಕೆಆರ್ ಪೇಟೆ ಶಾಸಕ ನಾರಾಯಣ ಗೌಡ, ಶಾಸಕ ಉಮೇಶ್ ಜಾದವ್, ಶಾಸಕ ಉಮೇಶ್ ಕುಮಟಳ್ಳಿ ಇದೀಗ ಕಲಾಪಕ್ಕೆ ಹಾಜರಾಗಿದ್ದಾರೆ. ಹಾಗಾದರೆ ಆಪರೇಷನ್ ಕಮಲದ ಬಗ್ಗೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ಸಿದ್ಧ

ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ಸಿದ್ಧ

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಶಾಸಕ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಅಧಿವೇಶನಕ್ಕೆ ತೆರಳುವ ಮುನ್ನ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಮುಂಬೈಗೆ ಹೋಗಿದ್ದು ಆಪರೇಷನ್ ಕಮಲದಿಂದ ಅಲ್ಲ, ಪಕ್ಷದ ಜೊತೆ ಅಸಮಾಧಾನವಿದೆ ಕೆಲವೊಂದು ವಿಚಾರಗಳನ್ನು ಹೈಕಮಾಂಡ್ ಬಳಿ ಚರ್ಚೆ ಮಾಡುತ್ತೇವೆ ಎಂದರು.

ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ಈಗಲೂ ಸಿದ್ಧ: ರಮೇಶ್ ಜಾರಕಿಹೊಳಿಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ಈಗಲೂ ಸಿದ್ಧ: ರಮೇಶ್ ಜಾರಕಿಹೊಳಿ

ಪಕ್ಷದ ಮೇಲೆ ಅಸಮಾಧಾನವಿದೆ

ಪಕ್ಷದ ಮೇಲೆ ಅಸಮಾಧಾನವಿದೆ

ಪಕ್ಷದಲ್ಲಿ ಅಸಮಾಧಾನವಿರುವುದು ನಿಜ, ಪಕ್ಷವು ತೆಗೆದುಕೊಂಡಿರುವ ಕೆಲವು ತೀರ್ಮಾನಗಳಿಗೆ ನನಗೆ ಒಪ್ಪಿಗೆ ಇಲ್ಲ, ಅಧಿವೇಶನವಿರುವ ಕಾರಣ ವಾಪಸ್ ಬಂದಿದ್ದೇನೆ ಎಂದು ಶಾಸಕ ಮಹೇಶ್ ಕುಮಟಳ್ಳಿ ತಿಳಿಸಿದ್ದಾರೆ.

ನನ್ನ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಬಗ್ಗೆ ಅಸಮಾಧಾನ

ನನ್ನ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಬಗ್ಗೆ ಅಸಮಾಧಾನ

ನನ್ನ ಕ್ಷೇತ್ರದ ಕಾಂಗ್ರೆಸ್ ಮುಖಂಡರ ನಿಲುವುಗಳ ಬಗ್ಗೆ ಅಸಮಾಧಾನವಿದೆ, ಮಲ್ಲಿಕಾರ್ಜುನ ಖರ್ಗೆಯವರು ದೊಡ್ಡವರು ಅವರ ವಿರುದ್ಧ ನಾವೆಲ್ಲಾ ಮಾತನಾಡಲು ಸಾಧ್ಯವಿಲ್ಲ, ಸಮಯ ನೋಡಿ ಮಾತನಾಡಬೇಕು ಎಂದು ಶಾಸಕ ಉಮೇಶ್ ಜಾದವ್ ತಿಳಿಸಿದ್ದಾರೆ.

ಅತೃಪ್ತರ ಬೇಡಿಕೆ ಈಡೇರಿಸಲು ಮುಂದಾದ ಎಚ್‌ಡಿಕೆ, ಇದು ಕೊನೆ ಅವಕಾಶಅತೃಪ್ತರ ಬೇಡಿಕೆ ಈಡೇರಿಸಲು ಮುಂದಾದ ಎಚ್‌ಡಿಕೆ, ಇದು ಕೊನೆ ಅವಕಾಶ

ಕಾಗೆ ಕುಳಿತಾಗ ಕೊಂಬೆ ಮುರಿದಿದೆಯಷ್ಟೇ

ಕಾಗೆ ಕುಳಿತಾಗ ಕೊಂಬೆ ಮುರಿದಿದೆಯಷ್ಟೇ

ನಾನು ವ್ಯಾಪಾರದ ನಿಮಿತ್ತ ಮುಂಬೈಗೆ ಹೋಗಿದ್ದೆ, ಕಾಗೆ ಕುಳಿತಾಗಲೇ ಕೊಂಬೆ ಮುರಿದಿದೆ ಆದರೆ ಕಾಗೆಯಿಂದ ಅಲ್ಲ, ನಾನು ಮುಂಬೈಗೆ ಹೋಗಿದ್ದಕ್ಕೂ ಆಪರೇಷನಲ್ ಕಮಲಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ನಾಗೇಂದ್ರ ಹೇಳಿದ್ದಾರೆ.

ನಾಲ್ಕು ಶಾಸಕರು ಕಾಂಗ್ರೆಸ್ ಬಿಟ್ಟು ಹೋಗಲ್ಲ

ನಾಲ್ಕು ಶಾಸಕರು ಕಾಂಗ್ರೆಸ್ ಬಿಟ್ಟು ಹೋಗಲ್ಲ

ನಾಲ್ವರು ಶಾಸಕರು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಅವರು ಕಾಂಗ್ರೆಸ್‌ನಿಂದ ಆಯ್ಕೆಯಾದವರು ಕೊನೆಯವರೆಗೂ ಕಾಂಗ್ರೆಸ್‌ನಲ್ಲಿಯೇ ಇರುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಪಕ್ಷದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇರಬಹುದು ಆದರೆ ಅದೆಲ್ಲವೂ ದೂರವಾಗಲಿದೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮುಂಬೈನಿಂದ ಬೆಂಗಳೂರಿಗೆ ಬಂದ ಕಾಂಗ್ರೆಸ್‌ನ ನಾಲ್ವರು ಅತೃಪ್ತ ಶಾಸಕರುಮುಂಬೈನಿಂದ ಬೆಂಗಳೂರಿಗೆ ಬಂದ ಕಾಂಗ್ರೆಸ್‌ನ ನಾಲ್ವರು ಅತೃಪ್ತ ಶಾಸಕರು

English summary
Controversial MLA ramesh jarkiholi and other 3 entered into Assembly session and participated in todays discussion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X