ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್‌ನಲ್ಲಿ ಈಗ ಪಕ್ಷ ಬಿಡುವ ಪರ್ವ: ರಮೇಶ್‌ ಬಾಬು ರಾಜೀನಾಮೆ

|
Google Oneindia Kannada News

ಬೆಂಗಳೂರು, ಮಾರ್ಚ್ 7: ಆಗ್ನೇಯ ಪದವೀಧರರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್‌ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ ಬಾಬು, ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಪತ್ರವನ್ನು ಈಗಾಗಲೇ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರಿಗೆ ರವಾನಿಸಿದ್ದಾರೆ.

Recommended Video

Ramesh Babu Resigned to Jds | ರಮೇಶ್ ಬಾಬು ಜೆಡಿಎಸ್ ಗೆ ರಾಜೀನಾಮೆ | Oneindia Kannada

ಅಧಿಕೃತವಾಗಿ ಪಕ್ಷ ತ್ಯಜಿಸಿದ್ದಾರೆ, ಇವರು ಹಲವು ದಿನಗಳಿಂದ ಪಕ್ಷದ ಎಲ್ಲಾ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆದರೆ ತಮ್ಮ ಮುಂದಿನ ಹಾದಿ ಯಾವುದೆಂದು ಇನ್ನೂ ನಿರ್ಧರಿಸಿರಲಿಲ್ಲ, ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ರಮೇಶ್ ಬಾಬು ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದಾರೆ.

ಜೆಡಿಎಸ್ ಮಾಧ್ಯಮ ಗ್ರೂಪ್‌ನಲ್ಲೇ ಪಕ್ಷದ ನಾಯಕರಿಗೆ ವಕ್ತಾರ ಧಮ್ಕಿಜೆಡಿಎಸ್ ಮಾಧ್ಯಮ ಗ್ರೂಪ್‌ನಲ್ಲೇ ಪಕ್ಷದ ನಾಯಕರಿಗೆ ವಕ್ತಾರ ಧಮ್ಕಿ

ಇತ್ತೀಚೆಗೆ ಜೆಡಿಎಸ್‌ನ ಇನ್ನೋರ್ವ ಪರಿಷತ್‌ ಸದಸ್ಯ ಪುಟ್ಟಣ್ಣ ಪಕ್ಷ ತ್ಯಜಿಸಿದ್ದರು. ಪಕ್ಷದ ವಿರುದ್ಧ ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದ ಅವರು ನಂತರ ಬಿಜೆಪಿ ಸೇರಿದ್ದರು. ಇದರ ಜೊತೆಗೆ ಮಧು ಬಂಗಾರಪ್ಪ ಪಕ್ಷದಿಂದ ಹೊರ ಬರುವ ಹಾದಿಯಲ್ಲಿದ್ದಾರೆ. ಹೀಗೆ ಜೆಡಿಎಸ್‌ ತೊರೆಯುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

Ramesh Babu Resigned To JDS

ರಮೇಶ್‌ ಬಾಬು ಜೆಡಿಎಸ್‌ ವಕ್ತಾರರಾಗಿ ಟಿವಿ ಚಾನಲ್‌ಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಪಕ್ಷ ವರಿಷ್ಠ ಎಚ್‌ಡಿ ದೇವೇಗೌಡರ ಜೊತೆಗೂ ಹೆಚ್ಚಾಗಿ ಇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸುದ್ದಿ ವಾಹಿನಿಗಳು ಮತ್ತು ದೇವೇಗೌಡರಿಂದ ದೂರ ಸರಿದಿದ್ದರು. ಪದವೀಧರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ರಮೇಶ್‌ ಬಾಬು ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯೂ ಇದೆ.

English summary
Former MLC Ramesh Babu Has Resigned To JDS Party Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X