ಡಿಸಿಎಂ ಡಾ. ಅಶ್ವಥ್ ನಾರಾಯಣ್ ಯಾರು? 'ಮೀರ್ ಸಾದಿಕ್' ಅಲ್ವೇ?
ಬೆಂಗಳೂರು, ಅ. 23: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಮೀರ್ ಸಾಧಿಕ್ ಎಂದಿರುವ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಹೇಳಿಕೆಯನ್ನು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಖಂಡಿಸಿದ್ದಾರೆ. ಮೀರ್ ಸಾದಿಕ್ ಯಾರು ಎಂಬುದನ್ನು ಡಿಸಿಎಂ ಅಶ್ವಥ್ ನಾರಾಯಣ್ ಅವರೇ ಹೇಳಬೇಕು. ಬಿಜೆಪಿಯಲ್ಲಿಯೇ ಹಲವರು ಮೀರ್ ಸಾದಿಕ್ ಇದ್ದಾರೆ ಎಂದು ರಾಮಲಿಂಗಾರೆಡ್ಡಿ ಅವರು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ.
ಡಾ. ಅಶ್ವಥ್ ನಾರಾಯಣ್ ಯಾರು? ಮೀರ್ ಸಾದಿಕ್ ಅಲ್ವೇ? ಆಪರೇಷನ್ ಕಮಲ ಮಾಡಿದ್ದು ಯಾರು? ಶ್ರೀನಿವಾಸ್ ಗೌಡರಿಗೆ 5 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದು ಯಾರು? ಇದೇ ಅಶ್ವಥ್ ನಾರಾಯಣ್ ಅಲ್ಲವಾ ಅವರ ಮನೆಗೆ ಹೋಗಿದ್ದು? ಅವರಿಗೆ 5 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದು? ವಿಧಾನಸಭೆಯ ಕಲಾಪದಲ್ಲಿಯೇ ಶಾಸಕ ಶ್ರೀನಿವಾಸ್ ಅವರು ಇದನ್ನು ಹೇಳಿದ್ದರು.
ಶೋಭಕ್ಕ ನೀನು, ನಿನ್ನ ಮಗಳೋ ಕುಸುಮಾ ಸ್ಥಾನದಲ್ಲಿ ಇದ್ದಿದ್ದರೆ ಏನು ಹೇಳುತ್ತಿದ್ದೆ?
ಆಗ ಸದನದಲ್ಲಿ ಡಾ. ಅಶ್ವಥ್ ನಾರಾಯಣ್ ಅವರು ಮುಂದೇಯೇ ಕುಳಿತಿರಲಿಲ್ಲವಾ? ಅವರಿಗೆ ಗೊಂದಲ ಇರಬಹುದು, ನನಗೆ ಎಲ್ಲವೂ ಗೊತ್ತಿದೆ. ಯಾರು ಮೀರ್ ಸಾದಿಕ್ ಅನ್ನೋದು ಗೊತ್ತಿದೆ, ಹಾಗೆ ಬಿಜೆಪಿಯಲ್ಲಿರುವ ಮೀರ್ ಸಾದಿಕರ ಬಗ್ಗೆಯೂ ಗೊತ್ತಿದೆ ಎಂದು ಡಿಸಿಎಂ ಡಾ. ಅಶ್ಚಥ್ ನಾರಾಯಣ್ ಅವರಿಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.