ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶಕ್ಕೆ ರಫ್ತಾಗುವ ಗೋಮಾಂಸವನ್ನು ಕೇಂದ್ರ ನಿಷೇಧಿಸಲಿ: ರಾಮಲಿಂಗಾರೆಡ್ಡಿ

|
Google Oneindia Kannada News

ಬೆಂಗಳೂರು, ಮಾರ್ಚ್ 31: ಗೋಹತ್ಯೆ ನಿಷೇಧಿಸುವುದಾಗಿ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಬದಲು ವಿದೇಶಕ್ಕೆ ಗೋಮಾಂಸ ರಫ್ತನ್ನು ನಿಷೇಧಿಸಲಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಗೋವುಗಳಷ್ಟೇ ಅಲ್ಲ ಭೂಮಿ ಮೇಲಿರುವ 14ಲಕ್ಷ ಜೀವರಾಶಿಯಲ್ಲಿ ಯಾವ ಪ್ರಾಣಿಯ ಹತ್ಯೆಯೂ ಆಗಬಾರದು, ವೈಯಕ್ತಿಕವಾಗಿ ಪ್ರಾಣಿ ಹತ್ಯೆಗೆ ನಮ್ಮ ವಿರೋಧವಿದೆ ಎಂದರು.

ಗೋಹತ್ಯೆ ನಿಷೇಧದ ವಿರುದ್ಧ ಗೋಮಾಂಸ ಭಕ್ಷಣೆ ಉತ್ಸವ ಗೋಹತ್ಯೆ ನಿಷೇಧದ ವಿರುದ್ಧ ಗೋಮಾಂಸ ಭಕ್ಷಣೆ ಉತ್ಸವ

ಅಮಿತ್ ಶಾ ಕರ್ನಾಟಕ ಪ್ರವಾಸದ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧಿಸುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಬಿಜೆಪಿ ಆಡಳಿತ ಇರುವ ಈಶಾನ್ಯ ರಾಜ್ಯಗಳು, ಗೋವಾ, ಮಹಾರಾಷ್ಟ್ರ, ಉತ್ತರ ಪ್ರದೇದಲ್ಲಿ ಏಕೆ ಗೋಹತ್ಯೆ ನಿಷೇಧಿಸಿಲ್ಲ ಎಂದು ಪ್ರಶಸ್ನಿಸಿದರು.

Ramalingareddy asks BJP to ban beef export

ಕೇಂದ್ರದಲ್ಲಿ ಮೋದಿ ಸರ್ಕಾರ ಅಸ್ವಿತ್ವಕ್ಕೆ ಬರುವ ಮೊದಲು ಗೋಮಾಂಸ ರಫ್ತಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿತ್ತು. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿತ್ತು. ಬಜೆಪಿ ಸರ್ಕಾರದಲ್ಲಿ ಆಸ್ಟ್ರೇಲಿಯಾವನ್ನು ಹಿಂದಕ್ಕೆ ಹಾಕಿ ಭಾರತ ಎರಡನೇ ಸ್ಥಾನಕ್ಕೆ ಬಂದಿದೆ. ಮೊದಲನೇ ಸ್ಥಾನದಲ್ಲಿರುವ ಬ್ರೆಜಿಲ್ ನನ್ನು ಹಿಂದಿಕ್ಕಲು ಪೈಪೋಟಿ ನಡೆಸುತ್ತಿದೆ ಎಂದು ಹೇಳಿದರು.

ಗೋಮಾಂಸ ರಫ್ತಿನಲ್ಲಿ ಕೇಂದ್ರ ಸರ್ಕಾರ 2015-16ನೇ ಸಾಲಿನಲ್ಲಿ 26,682 ಕೋಟಿ ರೂ. ಆದಾಯ ಗಳಿಸಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಡಾಟಾ ಸಂಸ್ಥೆಯ ಮಾಹಿತಿ ಪ್ರಕಾರ ಮೋದಿ ಆಡಳಿತದಲ್ಲಿ ಗೋಮಾಂಸ ರಫ್ತು ಶೇ.14ರಷ್ಟು ಹೆಚ್ಚಿದೆ ಎಂದು ದೂರಿದರು.

English summary
Home minister Ramalingareddy asks central govt to ban beef export before speaking baout cow slaughters ban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X