ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾದಲ್ಲಿ ಶಾಸಕ ಹಾಸನ ಪ್ರೀತಂ ಗೌಡ ಹಣ ಹಂಚುತ್ತಿರುವ ವಿಡಿಯೋ ಬಹಿರಂಗ!

|
Google Oneindia Kannada News

ಬೆಂಗಳೂರು, ಅ. 28: ರಾಜ್ಯದಲ್ಲಿ ಉಪ ಚುನಾವಣೆಯ ಜಿದ್ದಾಜಿದ್ದಿ ಹೆಚ್ಚಾಗಿದ್ದು, ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ ಎಂದು ಅನುಮಾನ ಮೂಡುತ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದವರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ಕಾನೂನು ಬದ್ದವಾಗಿ ಎಲ್ಲರು ಪ್ರಚಾರ ಮಾಡುವ ಹಕ್ಕಿದೆ. ಪೊಲೀಸರು ಕೆಲಸ ಮಾಡುತ್ತಿದ್ದಾರೋ ಇಲ್ಲವೊ ಗೊತ್ತಾಗುತ್ತಿಲ್ಲ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಚಾರದ ವೇಳೆ ಮಾಜಿ ಕಾರ್ಪೊರೇಟರ್ ವೆಂಕಟೇಶ ಸಿದ್ದರಾಮಯ್ಯ ಕಾರಿಗೇ ಅಡ್ಡ ಹಾಕುತ್ತಾರೆ ಅಂದರೆ ಏನು ಅರ್ಥ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಗೆ ಕಣ್ಣೀರು ಹಾಕಿದ ಬಿಜೆಪಿ ಅಭ್ಯರ್ಥಿ ಮುನಿರತ್ನ!ಸಿದ್ದರಾಮಯ್ಯ ಹೇಳಿಕೆಗೆ ಕಣ್ಣೀರು ಹಾಕಿದ ಬಿಜೆಪಿ ಅಭ್ಯರ್ಥಿ ಮುನಿರತ್ನ!

ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೋದಿ, ಮೋದಿ ಅಂತಾ ಕೂಗುವ ಅವಶ್ಯಕತೆ ಏನಿದೆ?. ಬಿಜೆಪಿ ಕಾರ್ಯಕ್ರಮದಲ್ಲಿ ಮೋದಿ ಅಂತಾ ಬಾಯಿಬಡ್ಕೋಳ್ಳಲಿ. ನಾವು ಬಿಜೆಪಿ ಕಾರ್ಯಕ್ರಮದಲ್ಲಿ ಹೋಗಿ ರಾಹುಲ್ ರಾಹುಲ್ ಅಂತಾ ಕೂಗಬಹುದಾ ? ಮಾಜಿ ಮುಖ್ಯಮಂತ್ರಿಗಳ ಕಾರಿಗೆ ಅಡ್ಡ ಹಾಕುತ್ತಾರಂದರೆ ಪೊಲೀಸರು ಇದ್ದಾರೋ ಇಲ್ವೋ ಗೊತ್ತಾಗುತ್ತಿಲ್ಲ ಎಂದರು.

 ramalinga reddy questioned state bjp govt that is there any democracy in karnataka or not?

ಶಾಂತಿಯುತವಾಗಿ ಚುನಾವಣೆ ನಡೆಸಲು ಅರೆಸೇನಾ ಪಡೆ ಕರೆಸಿದ್ದಾರೆ. ಬಿಜೆಪಿಯವರು ಬದಲಾಗಬೇಕಾಗುತ್ತದೆ. ಇಲ್ಲ ಅಂದೆರೆ, ನಾವು ಕೂಡ ಹೀಗೆ ಮಾಡಬೇಕಾಗುತ್ತದೆ. ಪೊಲೀಸ್ ಕಮಿಷನರ್ ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಬಿಜೆಪಿ ಶಾಸಕ ಪ್ರೀತಂ ಗೌಡ ಹಣ ಹಂಚುತ್ತಿರುವ ವಿಡಿಯೋ ಬಹಿರಂಗ: ಶಿರಾದಲ್ಲಿ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಹಣ ಹಂಚುತ್ತಿರುವ ವಿಡಿಯೋ ಬಹಿರಂಗಗೊಡಿದೆ. ಆದರೆ ಯಾರ ಮೇಲೂ ಕ್ರಮ ತೆಗೆದುಕೊಂಡಿಲ್ಲ. ಚುನಾವಣಾ ಆಯೋಗ ಇದೆಯೋ ಇಲ್ಲವೊ ತಿಳಿಯುತ್ತಿಲ್ಲ. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲವೇ?

 ramalinga reddy questioned state bjp govt that is there any democracy in karnataka or not?

Recommended Video

Munirathna : ನಮ್ ಅಮ್ಮ ಸತ್ತು 25 ವರುಷ ಆಗಿದೆ | Oneindia Kannada

ಸಚಿವರಾದ ಅಶೋಕ, ಅಶ್ವಥ್ ನಾರಾಯಣ ಬುದ್ದಿ ಹೇಳಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಪ್ರಚಾರಕ್ಕೆ ಬಂದಾಗ ಕಾಂಗ್ರೆಸ್ ಕಾರ್ಯಕರ್ತರೂ ಹೀಗೆ ಅವರ ಕಾರಿಗೆ ಅಡ್ಡ ಹಾಕಬೇಕಾ ? ನಾವು ಅವರ ರೀತಿ ಕೀಳು ಮಟ್ಟದ ರಾಜಕೀಯ ಮಾಡುವುದಿಲ್ಲ. ಬಿಜೆಪಿಯವರು ಧರ್ಮ, ಜಾತಿ ಒಡೆದು ರಾಜಕಾರಣ ಮಾಡುತ್ತಾರೆ ಎಂದು ಆರೋಪಿಸಿದರು.

English summary
Former minister Ramalinga Reddy has questioned the Karnataka government that is there democracy or not? in Karnataka. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X