ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓವೈಸಿ ಪಕ್ಷದ ಜತೆ ಬಿಜೆಪಿ ಗುಪ್ತ ಸಭೆ: ರಾಮಲಿಂಗಾರೆಡ್ಡಿ ಆರೋಪ

|
Google Oneindia Kannada News

ಬೆಂಗಳೂರು, ಜನವರಿ 29 : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಓವೈಸಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಗುಪ್ತ ಮಾತುಕತೆ ನಡೆಸಿದೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಸೋಮವಾರ ನಗರದ ಶಕ್ತಿ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಕೋಮುವಾದಿ ಓವೈಸಿ ಪಕ್ಷದೊಂದಿಗೆ ಮುಂಬರುವ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಹೈದರಾಬಾದ್ ನಲ್ಲಿ ಗುಪ್ತ ಸಭೆ ನಡೆಸಿದೆ. ಈ ಕುರಿತು ನಮಗೆ ಖಚಿತ ಮಾಹಿತಿ ಲಭ್ಯವಾಗಿದೆ ಎಂದರು.

ಮೋದಿ, ರಾಹುಲ್, ಅಮಿತ್ ಷಾರನ್ನು ಇಸ್ಲಾಂಗೆ ಆಹ್ವಾನಿಸಿದ ಅಸಾದುದೀನ್ ಓವೈಸಿಮೋದಿ, ರಾಹುಲ್, ಅಮಿತ್ ಷಾರನ್ನು ಇಸ್ಲಾಂಗೆ ಆಹ್ವಾನಿಸಿದ ಅಸಾದುದೀನ್ ಓವೈಸಿ

ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳ ಜತೆಗೆ ಕಾಂಗ್ರೆಸ್ ಗೆ ಸಂಪರ್ಕವಿದೆ ಎಂದು ಆರೋಪಿಸುವ ಬಿಜೆಪಿ ಇದೀಗ ಓವೈಸಿ ಮಾಡುಕತೆ ನಡೆಸುವ ಮೂಲಕ ತಮ್ಮ ನಿಜ ಬಣ್ಣವನ್ನು ಬಯಲು ಮಾಡಿಕೊಂಡಂತಾಗಿದೆ ಎಂದು ದೂರಿದ್ದಾರೆ.

Ramalinga reddy accuses BJP is in good terms with Owaisi

ಸುಳ್ಳು ಹೇಳೋದ್ರಲ್ಲಿ ಬಿಜೆಪಿಯವರು ನಿಸ್ಸೀಮರು: ರಾಮಲಿಂಗಾ ರೆಡ್ಡಿಸುಳ್ಳು ಹೇಳೋದ್ರಲ್ಲಿ ಬಿಜೆಪಿಯವರು ನಿಸ್ಸೀಮರು: ರಾಮಲಿಂಗಾ ರೆಡ್ಡಿ

ಈ ಹಿಂದೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಕೆಲ ಸಂಘಟನೆಗಳ ಜತೆಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಕರ್ನಾಟಕದಲ್ಲೂ ಅದೇ ರೀತಿ ಕೆಲ ಸಂಘಟನೆಗಳೊಂದಿಗೆ ಅದರಲ್ಲೂ ಆತಂಕಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಪಿಎಫ್ ಐ, ಎಸ್ ಡಿಪಿಐ ಸಂಘಟನೆಗಳೊಂದಿಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಇದರ ಬಗ್ಗೆ ನಮ್ಮ ಬಳಿ ಖಚಿತವಾದ ಆಧಾರವಿದ್ದು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

English summary
Home Minister Ramalinga reddy accused that BJP is discussing with Owaisi in Hyderabad to supporting upcoming state assembly elections. He was talking to the reporters at shakti bhavan said that BJP has aligned with some anti national organizations in UP elections also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X