ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸತ್ಯಪರರೇ, ನ್ಯಾಯನಿಷ್ಠರೇ ಸಿಡಿದೇಳಿ : ರಾಘವೇಶ್ವರ ಭಾರತಿ ಸ್ವಾಮಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21: ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಸುಪ್ರೀಂ ಕೋರ್ಟ್ ಆದೇಶವನ್ನೂ ಲೆಕ್ಕಿಸದೆ ತನ್ನ ಸುಪರ್ದಿಗೆ ಪಡೆದ ರಾಜ್ಯ ಸರ್ಕಾರದ ವಿರುದ್ಧ ರಾಮಚಂದ್ರಾಪುರ ಮಠ ನ್ಯಾಯಾಂಗ ನಿಂದನೆಯ ದೂರು ದಾಖಲಿಸಿದೆ.

ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಬಂದು ಎಂಟು ವಾರಗಳ ಕಾಲ ದೇವಾಲಯದ ಉಸ್ತುವಾರಿಯನ್ನು ಮಠವೇ ವಹಿಸಿಕೊಳ್ಳಬೇಕು ಎಂದು ಕೋರ್ಟ್ ಹೇಳಿದ್ದರೂ, ಎಂಟು ವಾರ ಕಳೆಯುವ ಮೊದಲೇ ಉತ್ತರ ಕನ್ನಡ ಜಿಲ್ಲಾಡಳಿತ ಮಠವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಸರ್ಕಾರದ ಈ ಕ್ರಮವನ್ನು ಮಠ ವಿರೋಧಿಸಿ, ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ.

ಕೈತಪ್ಪಿದ ಗೋಕರ್ಣ ದೇಗುಲ: ನಿಲುವು ಸ್ಪಷ್ಟಪಡಿಸಿದ ರಾಮಚಂದ್ರಾಪುರ ಮಠಕೈತಪ್ಪಿದ ಗೋಕರ್ಣ ದೇಗುಲ: ನಿಲುವು ಸ್ಪಷ್ಟಪಡಿಸಿದ ರಾಮಚಂದ್ರಾಪುರ ಮಠ

ಈ ಕುರಿತು ರಾಮಚಂದ್ರಾಪುರ ಮಠ ಟ್ವಿಟ್ಟರ್ ಅಭಿಯಾನ ಸಹ ಆರಂಭಿಸಿದ್ದು, ಸರ್ಕಾರದ ನಡೆಯ ವಿರುದ್ಧ ಜನ ಸಿಡಿದೇಳಬೇಕೆಂದು ಮನವಿ ಮಾಡಿದೆ.

Ramachandrapura mutt files Case of Contempt of court against Government of Karnataka

"ಸತ್ಯಪರರೇ! ನ್ಯಾಯನಿಷ್ಠರೇ! ಸಿಡಿದೇಳಿ! ಸಜ್ಜನಶಕ್ತಿಯ ಮೇಲೆ ನಿರಂತರ-ನಿಷ್ಕಾರಣ ಪ್ರಹಾರ ನಡೆಸುತ್ತಿರುವ ಅಸುರರ ವಿರುದ್ಧ ಸಂಘಟಿತ ಸಮರ ಸಾರೋಣ. ಸಾತ್ತ್ವಿಕ ಶಕ್ತಿಯ ಸಾಮರ್ಥ್ಯವೇನೆಂಬುದನ್ನು ಜಗತ್ತು ನೋಡಲಿ..." ಎಂದು ರಾಮಚಂದ್ರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮಿ ಅವರ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಗೋಕರ್ಣ ದೇವಾಲಯದಲ್ಲಿ ರಾಮಚಂದ್ರಾಪುರ ಮಠದ ಅಧಿಕಾರ ಆಬಾಧಿತಗೋಕರ್ಣ ದೇವಾಲಯದಲ್ಲಿ ರಾಮಚಂದ್ರಾಪುರ ಮಠದ ಅಧಿಕಾರ ಆಬಾಧಿತ

ಜೊತೆಗೆ #TempleLooted ಮತ್ತು #MuttAttacked ಎಂಬ ಎರಡು ಹ್ಯಾಶ್ ಟ್ಯಾಗ್ ಗಳ ಮೂಲಕ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ.

English summary
A case of contempt of court was filed by Ramachandrapura mutt against government of Karnataka for taking over Gokarna Mahabaleshwara temple administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X