ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್ಬುಕ್ ಕವನ, ಹಡಪದ್ ಗಾಯನ ಕೇಳಲು ಬನ್ನಿ

By Mahesh
|
Google Oneindia Kannada News

ಬೆಂಗಳೂರು, ಮೇ.6: ಬುಕ್ಕಲ್ಲೇ ಓದಬೇಕಿಲ್ಲ ಕವನಾನ, ಇದು FB, WhatsApp ಜಮಾನ ಎಂಬ ಟ್ಯಾಗ್ ಲೈನ್ ನೊಂದಿಗೆ ಅವಿರತ ಪ್ರತಿಷ್ಠಾನ 'ಫೇಸ್ಬುಕ್ ಕವನ ಹಡಪದ್ ಗಾಯನ' ಎಂಬ ವಿನೂತನ ಸಂಗೀತ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.

ಸೋಮವಾರ ಕೆಲಸ ಮಾಡಿ ಸಾಕಾಗಿರ್ತೀರಲ್ವಾ? ನಿಮ್ಮ ಮನಸ್ಸಿಗೊಂದಿಷ್ಟು ಮುದ ನೀಡೋಣ ಅಂತ ಈ ಸಂಗೀತ ಸಂಜೆ. ಕೆಲ್ಸಕ್ಕೆ ಬೇಗ ಟಾಟಾ ಹೇಳಿ ತಪ್ಪದೇ ಬನ್ನಿ, ನಿಮಗೋಸ್ಕರ ಕಾಯ್ತಾ ಇತೀವಿ ಎಂದು ಅವಿರತ ತಂಡದ ಅಧ್ಯಕ್ಷ ಕೆ.ಟಿ ಸತೀಶ್ ಗೌಡ ಅವರು ಒನ್ ಇಂಡಿಯಾಗೆ ತಿಳಿಸಿದ್ದಾರೆ.

ಖ್ಯಾತ ಗಾಯಕರಾದ ರಾಮಚಂದ್ರ ಹಡಪದ್ ರವರು ವಿನೂತನ ಕಾರ್ಯಕ್ರಮವನ್ನು ಸಾದರ ಪಡಿಸುತ್ತಿದ್ದಾರೆ. ಫೇಸ್ ಬುಕ್ ಪದ್ಯಗಳಿಗೆ ಸಂಗೀತ ಸಂಯೋಜಿಸಿ ಹಾಡಲಿದ್ದಾರೆ. ಆ ದಿನ ಹಿರಿಯ ಕವಿಗಳು, ಸಾಹಿತಿಗಳಾದ ಡಾ.ಎಚ್.ಎಸ್ ವೆಂಕಟೇಶಮೂರ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.

ಈ ಹೊಸ ಪ್ರಯೋಗಕ್ಕೆ ರಘುನಂದನ್, ಶಶಿಕಾಂತ್ ಯಡವಳ್ಳಿ, ಚೇತನಾ ತೀರ್ಥಹಳ್ಳಿ, ಚಕ್ರವರ್ತಿ ಚಂದ್ರಚೂಡ, ಶೈಲಜಾ ಮೈಸೂರು, ಗಣೇಶ್ ಪ್ರಸಾದ್, ಮಮತ ಅರಸೀಕೆರೆ, ರವಿ ಕುಲಕರ್ಣಿ, ಹುಬ್ಬಳ್ಳಿ ಅವರ ಕವನಗಳು ಬಳಕೆಯಾಗಲಿವೆ.

ರಾಗ ಸಂಯೋಜನೆ: ರಾಮಚಂದ್ರ ಹಡಪದ್
ಗಾಯನ: ರಾಮಚಂದ್ರ ಹಡಪದ್, ಸ್ಪರ್ಶ.
ದಿನಾಂಕ : 12/05/2014 ರಂದು ಸೋಮವಾರ ಸಂಜೆ
ಸ್ಥಳ: ಬೆಂಗಳೂರಿನ K.H. ಕಲಾಸೌಧ, ಹನುಮಂತನಗರ
ಟಿಕೆಟ್ ದರ : 100,
ಟಿಕೆಟ್ ಹಾಗೂ ಇನ್ನಿತರ ವಿವರಗಳಿಗಾಗಿ ಸಂಪರ್ಕಿಸಿ : ಕೆಟಿ ಸತೀಶ್ ಗೌಡ: 98800 86300

Ramachandra Hadapad musical

ಅವಿರತ ಪ್ರತಿಷ್ಠಾನದ ಬಗ್ಗೆ: ತಾಯ್ನಾಡು ಹಾಗೂ ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳ ತಂಡ. ಅವಿರತ ಸಂಸ್ಥೆಯು ಮಾರ್ಚ್ 25, 2007 ರಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರಿಂದ ಉದ್ಘಾಟನೆಯಾಯಿತು.

ಆವಿರತದಲ್ಲಿ ಸಾಹಿತಿಗಳಿಂದ ಹಿಡಿದು ಸಾಫ್ಟ್ ವೇರ್ ಇಂಜಿನಿಯರ್‌ಗಳು, ವೈದ್ಯರು, ಬುದ್ಧಿಜೀವಿಗಳು ತತ್ವಜ್ಞಾನಿಗಳು, ತಂತ್ರಜ್ಞರು, ವಿಜ್ಞಾನಿಗಳು ,ನಾಗರೀಕರು, ರೈತರು, ಉದ್ಯಮಿಗಳು ಹೀಗೆ ಸಮಾಜದ ಎಲ್ಲ ವರ್ಗದ ಜನರಿಂದ ರೂಪಿತವಾಗಿದೆ. ತಾಯ್ನಾಡನ್ನು ತರ್ಕಬದ್ಧವಾಗಿ, ನ್ಯಾಯಯುತವಾಗಿಮುನ್ನಡೆಸಲು ಪಣತೊಟ್ಟಿರುವ ಬದಲಾವಣೆಯ ಹರಿಕಾರರಿದ್ದಾರೆ.

ಅವಿರತ ಪ್ರತಿಷ್ಠಾನವು ಇನ್ನೆರಡು ಸಂಸ್ಥೆಯಾದ ಇಂಡಿಯ ಸುದಾರ್ ಮತ್ತು ಫ್ತೂಚರ್ ಇಂಡಿಯ ಜೊತೆಗೂಡಿ ಸುಮಾರು 158 ಹಳ್ಳಿಗಳ 15,000ಮಕ್ಕಳಿಗೆ ಒಂದು ಲಕ್ಷ ನೋಟ್ ಪುಸ್ತಕಗಳನ್ನು ವಿತರಿಸಿದೆ. ವೃತ್ತಿ ಮಾರ್ಗದರ್ಶನ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರ, ಕಂಪ್ಯೂಟರ್ ಕಲಿಕೆ, ದೇಸಿ ಸೊಗಡಿನ ಚರ್ಚಾ ಸ್ಪರ್ಧೆ, ಆಟೋಟಗಳನ್ನು ಉತ್ತೇಜಿಸುವುದಲ್ಲದೆ, ಸದಭಿರುಚಿ ಕನ್ನಡ ಚಲನ ಚಿತ್ರಗಳ ವಿಶೇಷ ಪ್ರದರ್ಶನ-ಸಂವಾದ ನಡೆಸಲಾಗಿದೆ. ಈಗ ಫೇಸ್ಬುಕ್ ಕವನ ಕಾರ್ಯಕ್ರಮದ ಟಿಕೆಟ್ ಹಣದಿಂದ ಸಂಗ್ರಹಿಸಲಾಗುವ ಮೊತ್ತವನ್ನು ಇಂಥ ಸತ್ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ಅವಿರತ ಪ್ರತಿಷ್ಠಾನ ಹೇಳಿದೆ.

English summary
Musician Ramachandra Hadapad has tuned music to Kannada poems written on Facebook wall by various same will be recited on May 12 at KH Kala soudha, Bangalore. Aviratha Pratishtana organised the unique program in which vetern writer HS Venkatesha Murthy will the chief guest
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X