ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ನಾಣ್ಯಗಳಿಂದಲೇ ನಿರ್ಮಾಣವಾದ ಶ್ರೀರಾಮಮಂದಿರ ಕಲಾಕೃತಿ ಉದ್ಘಾಟನೆ

|
Google Oneindia Kannada News

ಬೆಂಗಳೂರು,ಫೆಬ್ರವರಿ 25: ರಾಷ್ಟ್ರಧರ್ಮ ಸಂಸ್ಥೆಯು ನಾಣ್ಯಗಳಿಂದಲೇ ನಿರ್ಮಾಣಮಾಡಲಾಗಿರುವ ಶ್ರೀರಾಮ ಮಂದಿರ ಕಲಾಕೃತಿಯನ್ನು ಪ್ರದರ್ಶಿಸುತ್ತಿದೆ.

Recommended Video

ಈಡೇರಿತು 500 ವರ್ಷದ ಭಾರತೀಯರ ಕನಸು | Oneindia Kannada

ಅದರ ಉದ್ಘಾಟನಾ ಕಾರ್ಯಕ್ರಮ ಇಂದು ನೆರವೇರಲಿದೆ. ಲಾಲ್‌ಬಾಗ್‌ನ ಪಶ್ಚಿಮ ದ್ವಾರದಲ್ಲಿರುವ ಅನಂತವನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.ಐದುನೂರು ವರ್ಷಗಳ ಹೋರಾಟದಲ್ಲಿ ಕೊನೆಗೂ ಜಯ ಸಾಧಿಸಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಳ್ಳುತ್ತಿದೆ.

ರಾಮ ಭಕ್ತರು ಜನವರಿ 15 ರಿಂದ ಇಡೀ ದೇಶಾದ್ಯಂತ ಸಂಚರಿಸಿ ನಿಧಿ ಸಮರ್ಪಣ ಅಭಿಯಾನವನ್ನು ನಡೆಸಿ, 1400 ಕೋಟಿ ರೂ ಸಂಗ್ರಹಿಸಿ ಟ್ರಸ್ಟ್‌ಗೆ ಒಪ್ಪಿಸಿದ್ದಾರೆ.ಇದರ ಗೌರವಾರ್ಥವಾಗಿ ಟ್ರಸ್ಟ್‌ ನಾಣ್ಯಗಳಿಂದ ಶ್ರೀ ರಾಮಮಂದಿರ ಕಲಾಕೃತಿಯನ್ನು ನಿರ್ಮಿಸಿದೆ ಅದು 30/40 ಅಡಿಯದ್ದಾಗಿದೆ.

Rama Mandir In Coins Artwork Installation Ceremony Will Be Held Near Lalbagh From Feb 25-27

ಒಟ್ಟು 2 ಲಕ್ಷ ನಾಣ್ಯಗಳನ್ನು ಸಂಗ್ರಹಿಸಿ ಕಲಾಕೃತಿ ನಿರ್ಮಿಸಲಾಗಿದೆ, ಫೆಬ್ರವರಿ 27ರವರೆಗೂ ಕಲಾಕೃತಿಯನ್ನು ವೀಕ್ಷಿಸಬಹುದಾಗಿದೆ.ಇಂದು ಸಂಜೆ 5.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಪೇಜಾವರ ಶ್ರೀಗಳು,ಸಂಸದ ತೇಜಸ್ವಿ ಸೂರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ.

English summary
Rama Mandir In Coins Artwork Installation Ceremony Will Be Held In Anantavan Near Lalbagh west Gate, From Feb 25-27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X