ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಾಮನಿಂದ ಸಾಮಾಜಿಕ ಸಮರಸತೆ: ಮಿಲಿಂದ್ ಪರಾಂಡೆ

|
Google Oneindia Kannada News

ಬೆಂಗಳೂರು, ಜುಲೈ 30: ಮರ್ಯಾದಾ ಪುರುಷೋತ್ತಮನಾದ ಪ್ರಭು ಶ್ರೀರಾಮನು ಸಾಮಾಜಿಕ ಸಮರಸತೆ ಹಾಗೂ ಸಶಕ್ತೀಕರಣದ ಸಂದೇಶವನ್ನು ತನ್ನ ಭವ್ಯ ಜೀವನದ ಆಚರಣೆಯಿಂದ ಸಾರಿದ್ದಾನೆ. ಈ ಮಂದಿರದ ಶಿಲಾನ್ಯಾಸಕ್ಕೆ ದೇಶದೆಲ್ಲೆಡೆಯಿಂದ ಸಂಗ್ರಹಿಸಿ ಬಳಸಲಾಗುವ ಮೃತ್ತಿಕೆ, ವಿವಿಧ ನದಿಗಳ ಜಲ ರಾಷ್ಟ್ರಕ್ಕೆ ಏಕಾತ್ಮತೆಯ ದರ್ಶನವನ್ನು ಸಾರುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ನ ಕೇಂದ್ರೀಯ ಮಹಾಮಂತ್ರಿಯಾದ ಮಿಲಿಂದ್ ಪರಾಂಡೆ ಪತ್ರಿಕಾಗೋಷ್ಠಿಯಲ್ಲಿ ನುಡಿದರು.

Recommended Video

ಏನಿದು ಹೊಸ ಶಿಕ್ಷಣ ರೀತಿ?ಏನಿದು ಹೊಸ ಸಚಿವಾಲಯ ಬದಲಾವಣೆ? | Oneindia Kannada

ಡಾ. ಹೆಡಗೇವಾರ್ ಅವರ ಸಂಘ-ಗಂಗಾ ವನ್ನು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ದೀಕ್ಷಾ ಭೂಮಿಯಲ್ಲಿ ಸಮತಾ-ಗಂಗಾವನ್ನು ಪರಿಚಯಿಸಿದ ಊರಿನಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಿರುವುದು ಹೆಮ್ಮೆಯ ವಿಚಾರವೆಂದರು.

ಅಯೋಧ್ಯಾ ರಾಮ ಮಂದಿರ ಮೇಲೆ ಪಾಕ್ ಐಎಸ್ಐ ಕಣ್ಣು!ಅಯೋಧ್ಯಾ ರಾಮ ಮಂದಿರ ಮೇಲೆ ಪಾಕ್ ಐಎಸ್ಐ ಕಣ್ಣು!

ಪ್ರಭು ಶ್ರೀರಾಮನಿಂದ ಸಾಮಾಜಿಕ ಸಮರಸತೆಯನ್ನು ಎತ್ತಿಹಿಡಿಯುವ ಉದಾಹರಣೆಗಳಾದ ಅಹಲ್ಯೆಯ ಶಾಪ ವಿಮೋಚನೆ, ಶಬರಿಗೆ ತೋರಿದ ಪ್ರೀತಿ, ನಿಷಾದರಾಜನ ಜೊತೆಗಿನ ಮಿತ್ರತ್ವ ಕಾಣಸಿಗುತ್ತವೆ. 1989ರಲ್ಲಿ ಶ್ರೀ ರಾಮ ಜನ್ಮಭೂಮಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅನೇಕ ಸಾಧು ಸಂತರು ಉಪಸ್ಥಿತರಿದ್ದರು. ಅವರಲ್ಲಿ ಪರಿಶಿಷ್ಠ ಜಾತಿಗೆ ಸೇರಿದ ಶ್ರೀ ಕಾಮೇಶ್ವರ ಚೌಪಾಲರ ಅಮೃತಾಹಸ್ತದಿಂದಲೇ ಶಿಲಾನ್ಯಾಸವನ್ನು ನೇರವೇರಿಸಲಾಗಿತ್ತು. ಪ್ರಸ್ತುತ ದಿನಗಳಲ್ಲಿ, ಅವರು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ತರೂ ಹೌದು ಎಂದರು.

Ram Janmabhoomi Temple will be a unique hub for social harmony: Milind Parande, VHP

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ವಿವಿಧ ತೀರ್ಥ ಕ್ಷೇತ್ರಗಳಿಂದ ಪಾವನ ಮೃತ್ತಿಕೆ ಹಾಗೂ ಹಲವು ನದಿಗಳಿಂದ ಸಂಗ್ರಹಿಸಲಾದ ಜಲವನ್ನು ಅಯೋಧ್ಯೆಯ ಶ್ರೀರಾಮಜನ್ಮ ಭೂಮಿಯಲ್ಲಿ ಪೂಜೆಗೆ ಸಹಾಯವಾಗುವಂತೆ ಅನುವು ಮಾಡಲಾಗಿದೆ. ಇದು ಆನಂದ ಹಾಗೂ ಹರ್ಷೋಲ್ಲಾಸದ ವಾತಾವರಣವನ್ನು ಸೃಷ್ಟಿಸುತ್ತದೆ. ಅವುಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನನವಾದ ನಾಗಪುರವಿರಬಹುದು, ಸಂತ ರವಿದಾಸರ ಪಾವನ ಕ್ಷೇತ್ರವಾದ ಕಾಶಿ ಇರಬಹುದು, ಮಹರ್ಷಿ ವಾಲ್ಮೀಕಿಗಳ ಆಶ್ರಮವಾದ ಸೀತಾಮಢಿ ಇರಬಹುದು, ವಿದರ್ಭದ ಗೊಂದಿಯಾ ಜಿಲ್ಲೆಯ ಕಾಚಾರಗಡ್ ಇರಬಹುದು,ಜಾರ್ಖಂಡ್ ನ ರಾಮರೇಖಾಧಾಮ್, ಮಧ್ಯಪ್ರದೇಶದ ಟಂಟ್ಯಾ ಭಿಲ್ ಪುಣ್ಯಭೂಮಿ, ಪಂಜಾಬಿನ ಅಮೃತಸರದ ಶ್ರೀ ಹರಮಂದಿರ ಸಾಹಿಬ್, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮಸ್ಥಳವಾದ ಮಹೂವಿನ, ದಿಲ್ಲಿಯ ಜೈನ ಲಾಲ್ ಮಂದಿರ, ಮಹಾತ್ಮ ಗಾಂಧಿಯವರು 72 ದಿನಗಳು ನೆಲೆಸಿದ್ದ ವಾಲ್ಮೀಕಿ ಮಂದಿರವಿರಬಹುದು ಇಲ್ಲಿಂದ ಮೃತ್ತಿಕೆಯನ್ನು ಸಂಗ್ರಹಿಸಲಾಗಿದೆ ಎಂದರು.

ಮನೆಯಲ್ಲೇ ಕುಳಿತು ರಾಮ ಮಂದಿರ ಶಂಕುಸ್ಥಾಪನೆ ನೋಡಿಮನೆಯಲ್ಲೇ ಕುಳಿತು ರಾಮ ಮಂದಿರ ಶಂಕುಸ್ಥಾಪನೆ ನೋಡಿ

ಮಿಲಿಂದ್ ಪರಾಂಡೆಯವರು ತಮ್ಮ ಮಾತನ್ನು ಮುಂದುವರಿಸುತ್ತಾ, ದೇಶದ ಜನರಲ್ಲಿ ಆಗಸ್ಟ್ 5ನೆಯ ತಾರೀಖು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ, ಸಾಧ್ಯವಾದರೆ ದೇವಸ್ಥಾನಗಳಲ್ಲಿ, ಬೆಳಿಗ್ಗೆ 10.30 ರಿಂದ ತಮ್ಮ ಆರಾಧ್ಯ ದೇವರನ್ನು ನೆನೆಯುತ್ತಾ, ಭಜನೆ, ಸತ್ಸಂಗ, ಆರಾಧನೆ, ಪೂಜೆಯನ್ನು ನೆರವೇರಿಸಿ, ದೇವರಿಗೆ ಮಂಗಳಾರತಿ ಬೆಳಗಿ, ಪ್ರಸಾದ ವಿನಿಯೋಗ ಮಾಡಬೇಕೆಂದು ಕೇಳಿಕೊಂಡರು. ಅಯೋಧ್ಯೆಯ ಕಾರ್ಯಕ್ರಮವನ್ನು ಸಾಧ್ಯವಾದಷ್ಟರ ಮಟ್ಟಿಗೆ ಸಮಾಜಕ್ಕೆ ಲೈವ್ ಮುಖಾಂತರ ಬಿತ್ತರಿಸಬೇಕೆಂದು ಕೇಳಿಕೊಂಡರು. ಅಂದು ಸಂಜೆ, ನಾವು ನೆಲೆಸಿರುವ ಮನೆ, ಹತ್ತಿರದ ದೇವಸ್ಥಾನ, ಮಠ, ಗುರುದ್ವಾರ, ಆಶ್ರಮಗಳಲ್ಲಿ, ಊರುಗಳಲ್ಲಿ ದೀಪ ಬೆಳಗಿಸೋಣವೆಂಬ ಕರೆ ಇತ್ತರು. ಮಂದಿರ ನಿರ್ಮಾಣಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ದಾನ ನೀಡುವ ಸಂಕಲ್ಪ ಸಮಾಜ ಮಾಡಬೇಕೆಂದು ಕೇಳಿಕೊಂಡರು.

English summary
Shri Ram Janmabhoomi Temple will be a unique hub for social harmony: Milind Parande, Central Secretary General of Vishva Hindu Parishad (VHP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X