ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡಿಗರಿಗೆ ಉದ್ಯೋಗ ಸಿಗಲಿ, ಕರವೇ ಮೆರವಣಿಗೆ

By Mahesh
|
Google Oneindia Kannada News

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು ಅನ್ನುವ ಸಾಮಾನ್ಯ ಕನ್ನಡಿಗರ ಬಯಕೆಗೆ ಪೂರಕವಾಗಿರೋ ವರದಿ ಅಂದರೆ "ಸರೋಜಿನಿ ಮಹಿಷಿ ವರದಿ" .

1983ರಲ್ಲಿ ರಚಿಸಿದ ಡಾ.ಸರೋಜಿನಿ ಮಹಿಷಿ ಸಮಿತಿಯು ಕರ್ನಾಟಕದಲ್ಲಿನ ಎಲ್ಲಾ ಖಾಸಗಿ, ಸರ್ಕಾರಿ ವಲಯದ ಎಲ್ಲಾ ಹಂತಗಳ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಿಸುವತ್ತ ಹಲವಾರು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ 1986ರಲ್ಲೇ ಸಲ್ಲಿಸಿದೆ. ನೋವಿನ ಸಂಗತಿಯೆಂದರೆ ವರದಿ ಬಂದು 27 ವರ್ಷವಾದರೂ ಅದು ಪೂರ್ತಿ ಜಾರಿಯಾಗಿಲ್ಲ. ಹೀಗಾಗಿ, ಕರ್ನಾಟಕ ರಕ್ಷಣಾ ವೇದಿಕೆ ಮತ್ತೊಮ್ಮೆ ಜನಜಾಗೃತಿ ಹಾಗೂ ವರದಿ ಅನುಷ್ಠಾನ ಆಗ್ರಹಕ್ಕಾಗಿ ಬೃಹತ್ ಮೆರವಣಿಗೆ ಹಮ್ಮಿ ಕೊಂಡಿದೆ.. ಅದರ ವಿವರ ಇಲ್ಲಿದೆ..

ಮಾನ್ಯ ಸಂಪಾದಕರೇ,

ವಿಷಯ: ಸರೋಜಿನಿ ಮಹಿಷಿ ವರದಿ ಅನುಷ್ಠಾನವಾಗುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಬೃಹತ್ ಮೆರವಣಿಗೆಯನ್ನು ಸೆಪ್ಟಂಬರ್ 25ರಂದು ಆಯೋಜಿಸಿದ್ದೇವೆ.

ಕನ್ನಡ-ಕನ್ನಡಿಗ-ಕರ್ನಾಟಕದ ಏಳಿಗೆಗಾಗಿ ಕಳೆದ 13 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿರುವುದು ನಾಡಿನ ಜನತೆಗೆ ತಿಳಿದಿದೆ. ಕನ್ನಡಿಗರಿಗೆ ಉದ್ಯೋಗಾವಕಾಶಗಳು ಸಿಕ್ಕಲ್ಲಿ ಮಾತ್ರ ಕನ್ನಡ ಜನ ಸಮುದಾಯದ ಬದುಕು ಹಸನಾಗುತ್ತದೆ.

ಇವತ್ತು ಕರ್ನಾಟಕದಲ್ಲಿ ಹಲವಾರು ಉದ್ದಿಮೆಗಳು ತೆರೆದುಕೊಳ್ಳುತ್ತಿವೆ. ಕರ್ನಾಟಕದಲ್ಲಿ ಭೂಮಿ, ನೀರು, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುತ್ತಿರುವ ಕಂಪನಿಗಳು ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಒದಗಿಸಬೇಕಾದದ್ದು ನ್ಯಾಯ ಮತ್ತು ಧರ್ಮ.

ಇದೇ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಸರ್ಕಾರಕ್ಕೆ ಶಿಫಾರಸ್ಸನ್ನು ಸಲ್ಲಿಸಲಾಗಿತ್ತು. ಕಳೆದ ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಸರೋಜಿನಿ ಮಹಿಷಿ ವರದಿಯನ್ನು ಇವತ್ತಿನ್ನ ಕಾಲಮಾನಕ್ಕೆ ಬೇಕಾದ ಬದಲಾವಣೆಗಳನ್ನು ಮಾಡಿ ಕರ್ನಾಟಕ ಸರ್ಕಾರ ಅದನ್ನ ಜಾರಿಗೊಳಿಸಬೇಕೆಂದು ನಾವು ಆಗ್ರಹಿಸುತ್ತೇವೆ.

Karnataka Rakshana vedike rally for sarojini mahishi report-implementation

ಸರೋಜಿನಿ ಮಹಿಷಿ ವರದಿ ಅನುಷ್ಠಾನವಾಗಲಿ ಅನ್ನುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಬೃಹತ್ ಮೆರವಣಿಗೆಯನ್ನು ಇದೇ ಸೆಪ್ಟಂಬರ್ 25ರಂದು ಆಯೋಜಿಸಿದ್ದೇವೆ.

ಮೆರವಣಿಗೆಯು ಬಸವನಗುಡಿಯ ನಾಶನಲ್ ಕಾಲೇಜು ಮೈದಾನದಿಂದ ಬೆಳಗ್ಗೆ 10 ಘಂಟೆಗೆ ಶುರುವಾಗಿ ಸ್ವತಂತ್ರ ಉದ್ಯಾನವನವನ್ನು ತಲುಪಲಿದೆ.ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಕನ್ನಡಿಗರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ

ಈ ಬೃಹತ್ ಮೆರವಣಿಗೆಯ ಫೇಸ್ಬುಕ್ ಇವೆಂಟೊಂದನ್ನು ಸಹ ತೆರೆಯಲಾಗಿದೆ. ಅದರ ಕೊಂಡಿ ಇಲ್ಲಿದೆ ನೋಡಿ:

ಇಂತಿ,
ಬಿ.ಸಣ್ಣೀರಪ್ಪ
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ರಕ್ಷಣಾ ವೇದಿಕೆ.

ವಸಂತ್ ಶೆಟ್ಟಿ ಹೇಳಿಕೆ: ಕರ್ನಾಟಕದಲ್ಲಿನ ಉದ್ಯೋಗಗಳ ಸಿಂಹಪಾಲು ಕನ್ನಡಿಗರಿಗೆ ದೊರಕಬೇಕು ಅನ್ನುವ ಸರೋಜಿನಿ ಮಹಿಷಿ ವರದಿ ಇವತ್ತಿನ ಕಾಲಕ್ಕೆ ತಕ್ಕಂತೆ ಬದಲಾಯಿಸಿ ಜಾರಿ ಮಾಡುವ ಅಗತ್ಯವಿದೆ ಅನ್ನುವ ಮಾತುಗಳನ್ನು ಮಾನ್ಯ ಮುಖ್ಯಮಂತ್ರಿಗಳು ನಿನ್ನೆ ಹುಬ್ಬಳ್ಳಿಯಲ್ಲಿ ಆಡಿದ್ದಾರೆ.

ಹೆಚ್ಚಿನ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಇದನ್ನೇ ಹೇಳಿದ್ದರು, ಆದರೆ ಅನುಷ್ಠಾನದ ವಿಷಯಕ್ಕೆ ಬಂದಾಗ ಐಎಎಸ್ ಅಧಿಕಾರಿಗಳ ಮಾತಿಗೆ ಕಟ್ಟುಬಿದ್ದು ಹೆದರಿಕೊಂಡು ಸುಮ್ಮನಾಗಿ ಅಧಿಕಾರ ಮುಗಿಸಿಕೊಂಡು ಹೋಗುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ.

ಈಗ ಸರೋಜಿನಿ ಮಹಿಶಿ ವರದಿ ಜಾರಿಗಾಗಿ ನಿರ್ಣಾಯಕ ಸ್ವರೂಪದ ಹೋರಾಟ ನಡೆಯುವ ಲಕ್ಷಣ ಕಾಣುತ್ತಿರುವ ಹೊತ್ತಲ್ಲಾದರೂ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದಿಷ್ಟು ಧೈರ್ಯ ತೋರಿಸಿ ಸ್ಥಳೀಯರ ಉದ್ಯೋಗದ ಹಕ್ಕಿನ ರಕ್ಷಣೆಗೆ ಒಂದು ಕಾನೂನಿನ ಚೌಕಟ್ಟು ಕಟ್ಟುತ್ತಾರಾ ಕಾದು ನೋಡಬೇಕಿದೆ. ಅಂದ ಹಾಗೆ ಬುಧವಾರ ಈ ಬಗ್ಗೆ ನಡೆಯುತ್ತಿರುವ ಈ ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವಕರು ಪಾಲ್ಗೊಳ್ಳಲಿದ್ದಾರೆ

English summary
Karnataka Rakshana Vedike demands Karnataka government to implement Sarojini Mahishi report soon. Implementation of Sarojini Mahishi report set to ensure employment to local Kannadigas. Karave oraganises a awareness rally in Bangalore on Sept 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X