ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರವೇಯಿಂದ ರಾಜ್ಯೋತ್ಸವ ಸಂಭ್ರಮ ಎಲ್ಲರೂ ಬನ್ನಿ

By Mahesh
|
Google Oneindia Kannada News

ಬೆಂಗಳೂರು, ನ.26: ನಾಡು ನುಡಿ ವಿಚಾರವಾಗಿ ರಾಜಿ ರಹಿತ ಹೋರಾಟಗಳನ್ನು ಮಾಡುತ್ತಲೇ ಬಂದಿರುವ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯೋತ್ಸವ ಹಾಗೂ ಐಟಿ ಘಟಕದ ವಾರ್ಷಿಕೋತ್ಸವ ಸಮಾರಂಭವನ್ನು ಆಯೋಜಿಸಿದೆ.

ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ನಾಡು ನುಡಿ ವಿಚಾರವಾಗಿ ರಾಜಿ ರಹಿತ ಹೋರಾಟಗಳನ್ನು ಮಾಡುತ್ತಲೇ ಬಂದಿದ್ದು, ಕನ್ನಡಿಗರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಉದ್ಯೋಗಾವಕಾಶಗಳು ಸಿಗಬೇಕೆನ್ನುವುದು ಕರವೇ ಆದ್ಯತೆಗಳಲ್ಲಿ ಒಂದಾಗಿದೆ.

ರೈಲ್ವೆ ಇಲಾಖೆಯಲ್ಲಿನ ಉದ್ಯೋಗಗಳು, ಹೆಚ್.ಎ.ಎಲ್ ಸಂಸ್ಥೆಯಲ್ಲಿನ ಉದ್ಯೋಗಗಳು, ಹೋಂಡಾ ಸಂಸ್ಥೆ ಮುಂತಾದ ಅನೇಕ ಸಂಸ್ಥೆಗಳಲ್ಲಿನ ಉದ್ಯೋಗಗಳು ಪರಭಾಷಿಕರ ಪಾಲಾಗುತ್ತಿದ್ದ ಸಂದರ್ಭಗಳಲ್ಲಿ ಕರವೇ ಹೋರಾಟ ನಡೆಸಿ ಆ ಉದ್ಯೋಗಗಳು ಕನ್ನಡಿಗರಿಗೆ ದಕ್ಕುವಂತೆ ಮಾಡಿರುವ ನಿದರ್ಶನಗಳು ನಾಡಿನ ಜನತೆಯ ಮುಂದಿದೆ.

Karave Rajyotsava 2015

ಬೆಂಗಳೂರಿನಲ್ಲಿ ಹೆಮ್ಮರವಾಗಿ ಬೆಳೆದ ಐಟಿ ಕ್ಷೇತ್ರದಲ್ಲಿಯೂ ಕನ್ನಡಿಗರಿಗೆ ಆದ್ಯತೆ ಸಿಗಬೇಕೆಂದು ಬೆಂಗಳೂರಿನ ಪ್ರತಿಷ್ಠಿತ ಐಟಿ ಸಂಸ್ಥೆಗಳ ಮೇಲೆಯೂ ಒತ್ತಡ ಹೇರಿ ಕನ್ನಡಿಗರನ್ನು ಆಯ್ಕೆ ಮಾಡುವಂತೆ ಕರವೇ ಯಶಸ್ವಿ ಹೋರಾಟ ಮಾಡಿದೆ.

ಐಟಿ ಉದ್ಯೋಗಗಳನ್ನು ಅರಸುತ್ತಿರುವ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಅವರಿಗೆ ಹೊಂದುವಂತ ಐಟಿ ಉದ್ಯೋಗಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿಯೂ ಕರವೇ ಸಹಾಯ ಮಾಡಬೇಕೆಂಬ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಆಷಯದಂತೆ ಕಳೆದ ವರ್ಷ (ಡಿಸೆಂಬರ್ 2014ರಲ್ಲಿ) ಕರವೇ ಐಟಿ ಘಟಕವನ್ನು ಸ್ಥಾಪಿಸಲಾಯಿತು.

ದಿನಾಂಕ: 28 ನವಂಬರ್ 2015, ಶನಿವಾರ
ಸಮಯ : ಬೆಳಿಗ್ಗೆ 10.00ಕ್ಕೆ
ಸ್ಥಳ: ಯವನಿಕ ಸಭಾಂಗಣ, ನೃಪತುಂಗ ರಸ್ತೆ

2015 ರ ಜನವರಿ, ಮಾರ್ಚ್, ಜುಲೈ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಕರವೆ ಐಟಿ ಘಟಕದ ವತಿಯಿಂದ ಉದ್ಯೋಗ ಮಾರ್ಗದರ್ಶನ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು. ಹತ್ತಾರು ವಿಧ್ಯಾರ್ಥಿಗಳು ನಮ್ಮ ಶಿಬಿರದಲ್ಲಿ ಪಾಲ್ಗೊಂಡ ನಂತರ ಕೆಲಸಗಳನ್ನು ಗಿಟ್ಟಿಸಿಕೊಳ್ಳುವ ನೈಪುಣ್ಯತೆ ದೊರಕಿತೆಂದು ನಮ್ಮ ಬಳಿ ಸಂತಸದಿಂದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ದೇಶ-ವಿದೇಶಗಳಲ್ಲಿರುವ ಕನ್ನಡಿಗ ಐ.ಟಿ. ಉದ್ಯೋಗಿಗಳು ಮತ್ತು ಇತರ ವೃತ್ತಿಪರರನ್ನು ಒಗ್ಗೂಡಿಸುವ ಉದ್ದೇಶದಿಂದ ೨೦೧೪ ರಂದು ಕರ್ನಾಟಕ ರಕ್ಷಣಾ ವೇದಿಕೆಯ 'ಐ.ಟಿ. ಘಟಕ' ವನ್ನು ಆರಂಭಿಸಲಾಗಿತ್ತು. ಈಗ ಅದಕ್ಕೆ ಒಂದು ವರ್ಷದ ಸಂಭ್ರಮ. ಕರವೇ ಐಟಿ ಘಟಾಕದ ಮೊದಲನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ತೀರ್ಮಾನಿಸಿದ್ದೇವೆ ಎಂದು ಕರವೇ ಐಟಿ ಘಟಕದ ಉಪಾಧ್ಯಕ್ಷ ಅಮರನಾಥ್ ಶಿವಶಂಕರ್ ಅವರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

English summary
Karave Rajyotsava 2015: Karnataka Rakshana Vedike is celebrating Karnataka Rajyotsava and anniversary day of Karave IT Unit on November 28 at Yavanika, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X