ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ರಾಕೇಶ್ ಟಿಕಾಯಿತ್ ಮೇಲೆ ಮಸಿ: 450 ಪುಟಗಳ ಆರೋಪಪಟ್ಟಿ ಸಲ್ಲಿಕೆ

|
Google Oneindia Kannada News

ಬೆಂಗಳೂರು, ಆಗಸ್ಟ್ 21: ಬೆಂಗಳೂರಿನಲ್ಲಿ ಭಾರತೀಯ ಕಿಸಾನ್ ಒಕ್ಕೂಟ(ಬಿಕೆಯು) ಮುಖ್ಯಸ್ಥ ರಾಕೇಶ್ ಟಿಕಾಯಿತ್ ಮೇಲೆ ಮಸಿ ಎರಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸರು 450 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.

8ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ 20 ಪ್ರತ್ಯಕ್ಷದರ್ಶಿಗಳ ಹೆಸರನ್ನು ದಾಖಲಿಸುವುದರ ಜೊತೆಗೆ 89 ಸಾಕ್ಷಿಗಳನ್ನು ಹೆಸರಿಸಲಾಗಿದೆ.

ರೈತ ನಾಯಕ ರಾಕೇಶ್ ಟಿಕಾಯಿತ್‌ಗೆ ಮಸಿ - ಪೊಲೀಸರ ವೈಫಲ್ಯ..!ರೈತ ನಾಯಕ ರಾಕೇಶ್ ಟಿಕಾಯಿತ್‌ಗೆ ಮಸಿ - ಪೊಲೀಸರ ವೈಫಲ್ಯ..!

ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯಲ್ಲಿ ಹಿಂದುತ್ವ ಸಂಘಟನೆಯ ಕಾರ್ಯಕರ್ತ ಭರತ್ ಶೆಟ್ಟಿ, ಆತನ ಸಹಚರರಾದ ಶಿವಕುಮಾರ್, ಪ್ರದೀಪ್ ಕುಮಾರ್ ಮತ್ತು ಉಮಾದೇವಿ ಸೇರಿದಂತೆ ಬಂಧಿತರ ಮಾಹಿತಿಯೂ ಇದೆ.

Rakesh Tikait ink attack case: Bengaluru police file 450 page chargesheet

ವರದಿಗಳ ಪ್ರಕಾರ, ಉನ್ನತ ಅಧಿಕಾರಿಗಳ ಗಮನ ಸೆಳೆಯುವುದು ದಾಳಿಯ ಪ್ರಾಥಮಿಕ ಗುರಿಯಾಗಿದೆ ಎಂದು ಆರೋಪಿಗಳು ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ. ಫೇಮಸ್ ಆಗುವ ಉದ್ದೇಶದಿಂದ ಟಕಾಯಿತ್ ಮೇಲೆ ಕಪ್ಪು ಮಸಿ ಎರಚಿರುವುದಾಗಿ ಒಪ್ಪಿಕೊಂಡಿರುವ ಪ್ರಮುಖ ಆರೋಪಿ ಭರತ್ ಶೆಟ್ಟಿಯ ಆಡಿಯೋವನ್ನು ಪೊಲೀಸರು ನ್ಯಾಯಾಲಯಕ್ಕೆ ಒದಗಿಸಿದ್ದಾರೆ.

ಬೆಂಗಳೂರಿನಲ್ಲಿ ಮೇ 30ರಂದು ನಡೆದ ಘಟನೆ: ಕಳೆದ ಮೇ 30ರಂದು ಗಾಂಧಿ ಭವನದಲ್ಲಿ ನಡೆದ ಸಮಾವೇಶದಲ್ಲಿ ಬಿಕೆಯು ಮುಖ್ಯಸ್ಥ ರಾಕೇಶ್ ಟಿಕಾಯತ್ ಮಾತನಾಡುತ್ತಿದ್ದರು. ಈ ಬಗ್ಗೆ ತಿಳಿದ ಆರೋಪಿಗಳು ಮೊಟ್ಟೆಯಿಂದ ಹೊಡೆಯಲು ಉದ್ದೇಶಿಸಿದ್ದರು. ಆದರೆ ಮೊಟ್ಟೆಗಳನ್ನು ಸ್ಥಳಕ್ಕೆ ಕೊಂಡೊಯ್ಯುವುದು ಸಾಧ್ಯವಿಲ್ಲ ಎಂದು ಅರಿತುಕೊಂಡು ಶಾಯಿಯನ್ನು ತೆಗೆದುಕೊಂಡು ಹೋಗಿದ್ದರು. ಇದರ ಮಧ್ಯೆ ಕಪ್ಪು ಮಸಿ ಬಳಿಯುವುದಕ್ಕೂ ಪೂರ್ವದಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಉಮಾದೇವಿ ಮನೆಯಲ್ಲಿ ಮಾರಕಾಸ್ತ್ರ ವಶ: ಒಂದು ವರದಿಯ ಪ್ರಕಾರ, ಟಿಕಾಯತ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸ್ ದಾಳಿಯ ಸಂದರ್ಭದಲ್ಲಿ ಉಮಾದೇವಿ ಅವರ ಮನೆಯಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖೆಯ ವೇಳೆ ಶಿವಕುಮಾರ್ ಮೇಲೆ ಕೊಲೆ ಆರೋಪ ಹೊರಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವುದು ಬೆಳಕಿಗೆ ಬಂದಿದೆ. ಉತ್ತಮ ನಡುವಳಿಕೆಗಾಗಿ ಅವರನ್ನು 2015ರಲ್ಲಿ ಬಿಡುಗಡೆ ಮಾಡಲಾಗಿತ್ತು.

ಭಾರತೀಯ ಕಿಸಾನ್ ಯೂನಿಯನ್ (BKU)ನ ರಾಷ್ಟ್ರೀಯ ವಕ್ತಾರರಾಗಿರುವ ರಾಕೇಶ್ ಟಿಕಾಯಿತ್, ಸುಮಾರು ವರ್ಷಗಳ ಕಾಲ ನಡೆದ ಆಂದೋಲನದ ಪರಿಣಾಮವಾಗಿ ಕೇಂದ್ರ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸಿತ್ತು.

Recommended Video

Zimbabwe ವಿರುದ್ಧದ ಸರಣಿಗೆ K L rahul ನಾಯಕ. BCCI ನಿಂದ ಹೊಸ‌ ತಂಡದ ಆಯ್ಕೆ | *Cricket | OneIndia Kannada

English summary
Rakesh Tikait ink attack case: Bengaluru police file 450-page chargesheet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X