ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಕೇಶ್ ಗ್ರೂಪ್ ಫೋಟೋ ಬಗ್ಗೆ ಗೆಳೆಯ ಹೇಳಿದ್ದೇನು?

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 01: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರ ನಿಧನದ ಶೋಕಾಚರಣೆಯಲ್ಲಿ ಅವರ ಗೆಳೆಯರು, ಆಪ್ತ ವಲಯ ಮುಳುಗಿದೆ. ಈ ಸಂದರ್ಭದಲ್ಲಿ ರಾಕೇಶ್ ಅವರ ಬಗ್ಗೆ ಅಪವಾದ, ಆರೋಪಯುಕ್ತ ಸಂದೇಶಗಳು, ಫೋಟೋಗಳು ಸಾಮಾಜಿಕ ಜಾಲ ತಾಣಗಳು ಹರಿದಾಡುತ್ತಿವೆ. 'ವಿವಾದಕ್ಕೆ ಕಾರಣವಾಗಿರುವ ಗ್ರೂಪ್ ಫೋಟೋ' ಬಗ್ಗೆ ರಾಕೇಶ್ ಅವರ ಗೆಳೆಯರೊಬ್ಬರು ಸ್ಪಷ್ಟನೆ ನೀಡಿದ್ದಾರೆ.

'ಮೊಟ್ಟ ಮೊದಲಿಗೆ ಈ ಚಿತ್ರ ಬೆಲ್ಜಿಯಂನ ಬೂಮ್ ನಗರದಲ್ಲಿ ನಡೆಯುವ ಮೋಜಿನ ಹಬ್ಬ ಟುಮಾರೋಲ್ಯಾಂಡ್ ನಲ್ಲಿ ತೆಗೆದಿದ್ದಲ್ಲ. ಇದು ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿರುವ ಬಾರ್ ರಿಪಬ್ಲಿಕ್ ರೆಸ್ಟೋರೆಂಟ್ ನಲ್ಲಿ ತೆಗೆದ ಚಿತ್ರ'. [ಮೈಸೂರಿನ ಕಾಟೂರು ಗ್ರಾಮದಲ್ಲಿ ರಾಕೇಶ್ ಅಂತ್ಯಕ್ರಿಯೆ]

ರಾಕೇಶ್ ಸಿದ್ದರಾಮಯ್ಯ ಅವರು ನನ್ನ ಆಪ್ತ ಗೆಳೆಯ ಹಾಗೂ ಹಿತ ಬಯಸುವವರು, ಅಂದು ನಾವು ಗೆಳೆಯ, ಗೆಳತಿಯರೆಲ್ಲರೂ ಡಿನ್ನರ್ ಮಾಡಿದ್ದಷ್ಟೇ. ಆದರೆ, ಇದು ಬೆಲ್ಜಿಯಂನಲ್ಲಿ ತೆಗೆದ ಚಿತ್ರ ಎಂದು ಹೇಳಿ ವಾಟ್ಸಪ್ ಹಾಗೂ ಇತರೆ ಗ್ರೂಪ್ ಗಳಲ್ಲಿ ಹಂಚಲಾಗುತ್ತಿದೆ. ಇದೆಲ್ಲವೂ ಸುಳ್ಳು ಸುದ್ದಿ. [ಕರಳು ಬೇನೆ ಕಾಯಿಲೆಗೆ ಬಲಿಯಾದ ರಾಕೇಶ್]

Rakesh Siddaramaiah' s friend clarification about the group photo

ನಾನು ಬೆಂಗಳೂರಿನಲ್ಲಿದ್ದೇನೆ ಹಾಗೂ ನನಗೂ ಟುಮಾರೋ ಲ್ಯಾಂಡ್ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಅಲ್ಲಿಗೆ ಹೋಗಿರಲಿಲ್ಲ. ರಾಕೇಶ್ ಅವರನ್ನು ಕಳೆದುಕೊಂಡ ದುಃಖದಲ್ಲಿ ನಾವಿದ್ದೇವೆ. ಅಂಥ ವ್ಯಕ್ತಿ ನಮಗೆ ಮತ್ತೆ ಸಿಗಲ್ಲ, ನಾವು ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಿದ್ದೇವೆ ಎಂದಿದ್ದಾರೆ.

ರಾಕೇಶ್ ಅವರ ಗೆಳೆಯ ಅನಂತ್ ನಾರಾಯಣ್ ಅವರು ಫೇಸ್ ಬುಕ್ ನಲ್ಲಿ ನೀಡಿರುವ ಸ್ಪಷ್ಟನೆ ಇಲ್ಲಿದೆ.

ಏನೆಂದು ಸುದ್ದಿ ಹಬ್ಬಿದೆ?:
ಈ ಚಿತ್ರದಲ್ಲಿ ರಾಕೇಶ್ ಅವರ ಜತೆಗೆ ರಿಯಾಲಿಟಿ ಶೋ ಸ್ಟಾರ್ ರೋಹನ್ ಗೌಡ, ಧಾರಾವಾಹಿ ಅವನು ಮತ್ತು ಶ್ರಾವಣಿಯ ನಟಿ ಇದ್ದಾರೆ. ಜುಲೈ 22ರಿಂದ ಮೂರು ದಿನ ನಡೆದ ಟುಮಾರೋಲ್ಯಾಂಡ್ ಹಬ್ಬದಲ್ಲಿ ಮೋಜು ಮಸ್ತಿ, ಡ್ರಗ್ಸ್, ಓಪನ್ ಸೆಕ್ಸ್ ಎಲ್ಲವೂ ನಡೆಯುತ್ತದೆ.

ಇಂಥ ಮುಕ್ತ ವಾತಾವರಣದ ಎಲೆಕ್ಟ್ರಾನಿಕ್ ಮ್ಯೂಸಿಕ್ ಫೆಸ್ಟಿವಲ್ ನಲ್ಲಿ ರಾಕೇಶ್ ಹಾಗೂ ಗೆಳೆಯರು ಗುಂಪು ಪಾಲ್ಗೊಂಡಿತ್ತು. ಮೊದಲ ದಿನದಂದು ತೆಗೆದ ಚಿತ್ರ ಇದು ಎಂದು ಸುಳ್ಳು ಹಬ್ಬಿಸಲಾಗಿದೆ. ಜೊತೆಗೆ, ಇನ್ನಷ್ಟು ಚಿತ್ರಗಳನ್ನು ನಟಿ ತನ್ನ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದರು ಈಗ ಡಿಲೀಟ್ ಆಗಿದೆ ಎಂಬ ಸಂದೇಶ ಹರಿಸಲಾಗಿದೆ.

ಅಲ್ಲದೇ, ರೋಹನ್ ಗೌಡ ಅವರ 'ಶುಗರ್ ಫ್ಯಾಕ್ಟರಿ' ಹೆಸರಿನ ನೈಟ್ ಕ್ಲಬ್ ಬಗ್ಗೆ ಕೂಡಾ ಪ್ರಸ್ತಾಪಿಸಲಾಗಿದೆ. ರಾಕೇಶ್ ಅಸ್ವಸ್ಥರಾದಾಗ ರೋಹನ್ ಗೌಡ ಅವರೇ ಆಸ್ಪತ್ರೆಗೆ ದಾಖಲಿಸಿದರು ಎನ್ನಲಾಗಿದೆ. ಆದರೆ, ಈಗ ಈ ಚಿತ್ರದ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.

English summary
Rakesh Siddaramaiah's friend Ananth Narayan clarification about the group photo that is being circulated across the Social media and electronic media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X