ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಾಳೆ, ಹೆಸರುಗಳು ಇನ್ನೂ ಅಂತಿಮವಾಗಿಲ್ಲ

|
Google Oneindia Kannada News

ಬೆಂಗಳೂರು, ನವೆಂಬರ್ 28: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 29ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಆದರೆ ಇದುವರೆಗೂ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆಯೇ ಇನ್ನೂ ಮುಗಿದಿಲ್ಲ.

ರಾಜ್ಯೋತ್ಸವ ಪ್ರಶಸ್ತಿ ಯಾರ್ಯಾರ ಮುಡಿಗೆ: ಇಂದು ಹೊರಬೀಳಲಿದೆ ಪಟ್ಟಿ ರಾಜ್ಯೋತ್ಸವ ಪ್ರಶಸ್ತಿ ಯಾರ್ಯಾರ ಮುಡಿಗೆ: ಇಂದು ಹೊರಬೀಳಲಿದೆ ಪಟ್ಟಿ

63ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ 63 ಸಾಧಕರಿಗೆ ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ 126 ಸಾಧಕರ ಪಟ್ಟಿಯನ್ನು ಸರ್ಕಾರ ತಯಾರಿಸಿದೆ.ಈ ಕುರಿತು ಸಿಎಂ ನವೆಂಬರ್ 28ರಂದು ಸಭೆ ಕರೆದಿದ್ದರು ಆದರೆ ಆತುರಾತುರವಾಗಿ ನವೆಂಬರ್ 27ರಂದೇ ಸಭೆ ನಡೆಸಲಾಗಿದೆ.

ನ.1ರ ರಾಜ್ಯೋತ್ಸವ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ ಮಲ್ಲೇಶ್ವರ ನ.1ರ ರಾಜ್ಯೋತ್ಸವ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ ಮಲ್ಲೇಶ್ವರ

ಈ ಸಂದರ್ಭದಲ್ಲಿ ಪಟ್ಟಿಯಲ್ಲಿ ಇಲ್ಲದೇ ಇರುವ ಕೆಲ ಸಾಧಕರ ಹೆಸರುಗಳನ್ನು ಅಕಾಡೆಮಿ ಅಧ್ಯಕ್ಷರು ಸೂಚಿಸಿದ್ದಾರೆ, ಎಲ್ಲರ ಅಭಿಪ್ರಾಯ ಪಡೆಯಲಾಗಿದೆ. ನವೆಂಬರ್ ಮೊದಲ ವಾರದಲ್ಲೇ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಿತ್ತು ಆದರೆ ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಬೆಳಗಾವಿಯೇ 2ನೇ ರಾಜಧಾನಿಯಾಗಲಿ, ಅದಕ್ಕೂ ಮುನ್ನ ಮುಖ್ಯಮಂತ್ರಿಗಳೇ.. ಬೆಳಗಾವಿಯೇ 2ನೇ ರಾಜಧಾನಿಯಾಗಲಿ, ಅದಕ್ಕೂ ಮುನ್ನ ಮುಖ್ಯಮಂತ್ರಿಗಳೇ..

Rajyotsava award ceremony tomorrow

ಇದಾದ ನಂತರ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಪ್ರಶಸ್ತಿ ಅನುಮೋದನೆ ವಿಳಂಬವಾಗಿತ್ತು. ಸಭೆಯಲ್ಲಿ ಸಚಿವ ಡಿಕೆ ಶಿವಕುಮಾರ್, ಜಯಮಾಲಾ, ಎಚ್‌ಡಿ ರೇವಣ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಸ್‌ಜಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.

English summary
State govt decided to give Rajyotsava award tomorrow. Because of Ananth kumar demise it has been postponed earlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X