• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ರಾಹ್ಮಣ ಮಹಿಳೆಯ ಅಂತಿಮ ಸಂಸ್ಕಾರ ನಡೆಸಿದ ಸಂಸದ ನಾಸೀರ್ ಹುಸೇನ್

|
Google Oneindia Kannada News

ಬೆಂಗಳೂರು, ಮೇ 20: ಕೊರೊನಾ ಅಲೆಯ ವೇಳೆ ಹಿಂದೂ-ಮುಸ್ಲಿಂ ಸಾಮರಸ್ಯದ ಬಗ್ಗೆ ಹಲವಾರು ಸುದ್ದಿಗಳನ್ನು ಕೇಳಿರುತ್ತೇವೆ. ಅದರಲ್ಲೂ, ಎರಡನೇ ಅಲೆಯ ಸಂದರ್ಭದಲ್ಲಿ ಅದೆಷ್ಟೋ ಹಿಂದೂ ಶವಗಳ ಅಂತಿಮಕ್ರಿಯೆಯನ್ನು ಮುಸ್ಲಿಮರು ಮಾಡಿರುವುದನ್ನು ಓದಿದ್ದೇವೆ.

ಅಂತದ್ದೇ ಒಂದು ಮಾನವೀಯತೆಯ ಕೆಲಸವನ್ನು ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್ ಮಾಡಿದ್ದಾರೆ. ತಮಿಳುನಾಡು ಮೂಲದ ಬ್ರಾಹ್ಮಣ ಮಹಿಳೆಯ ಅಂತಿಮ ವಿಧಿವಿಧಾನ ನಡೆಸಲು ಕುಟುಂಬದವರು ಯಾರೂ ಇಲ್ಲ ಎಂದು ತಿಳಿದಾಗ, ತಾವೇ ಮುಂದೆ ನಿಂತು ನಾಸೀರ್ ಹುಸೇನ್ ಆ ಕೆಲಸವನ್ನು ಮಾಡಿದ್ದಾರೆ.

ಮನೆಯಲ್ಲೇ ಕೊರೊನಾ ಪರೀಕ್ಷೆಯ ಕಿಟ್ ಬಿಡುಗಡೆಗೆ ಸಿದ್ಧ, ಬೆಲೆ ಎಷ್ಟು ಗೊತ್ತಾ?ಮನೆಯಲ್ಲೇ ಕೊರೊನಾ ಪರೀಕ್ಷೆಯ ಕಿಟ್ ಬಿಡುಗಡೆಗೆ ಸಿದ್ಧ, ಬೆಲೆ ಎಷ್ಟು ಗೊತ್ತಾ?

ಅಸ್ಥಿ ವಿಸರ್ಜನೆ ಸೇರಿದಂತೆ ಹಿಂದೂ ಸಂಪ್ರದಾಯದ ಪ್ರಕಾರ ಪ್ರೊ. ಸಾವಿತ್ರಿ ವಿಶ್ವನಾಥನ್ ಅವರ ಅಂತಿಮ ಕ್ರಿಯೆಯನ್ನು ನಾಸಿರ್ ಹುಸೇನ್ ನೆರವೇರಿಸಿದ್ದಾರೆ. ಸಾವಿತ್ರಿ ವಿಶ್ವನಾಥನ್ ಅವರು ದೆಹಲಿ ವಿಶ್ವವಿದ್ಯಾಲಯದ ಜಪಾನಿ ಅಧ್ಯಯನ ಪೀಠದ ನಿವೃತ್ತ ಪ್ರಾಧ್ಯಾಪಕಿಯಾಗಿದ್ದರು.

ನಿವೃತ್ತಿಯ ಬಳಿಕ ಬೆಂಗಳೂರಿನ ತನ್ನ ಸಹೋದರಿಯ ಜೊತೆಗೆ ಸಾವಿತ್ರಿ ವಾಸವಾಗಿದ್ದರು. ಅಕ್ಕ, ತಂಗಿ ಇಬ್ಬರಿಗೂ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ಇಬ್ಬರೂ ದಾಖಲಾಗಿದ್ದರು.

ಆದರೆ, ಸಾವಿತ್ರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಅವರ ಸಂಬಂಧಿಕರೆಲ್ಲರೂ ದೂರದ ಊರಿನಲ್ಲಿ ಇದ್ದಿದ್ದರಿಂದ, ಯಾರಿಗೂ ಬೆಂಗಳೂರಿಗೆ ಬರಲು ಸಾಧ್ಯವಾಗಿರಲಿಲ್ಲ.

ಹಾಗಾಗಿ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರ ಎಲ್ಲಾ ಕ್ರಿಯೆಗಳನ್ನು ನಡೆಸಿ, ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆಯನ್ನೂ ಮಾಡಿದ್ದಾರೆ. ನಾಸೀರ್ ಹುಸೇನ್ ಅವರ ಈ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

   ನಾಲಿಗೆ ಒಣಗೊದು ಕೊರೋನ ರೋಗದ ಲಕ್ಷಣ !! | Oneindia Kannada
   English summary
   Rajya Sabha Member Dr. Syed Nasir Hussain Done The Last Rites Of Brahmin Lady In Bengaluru
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X