ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ ಎಲೆಕ್ಟ್ರಿಕ್ ಉತ್ಪಾದನಾ ಹಬ್ ಆಗುವತ್ತ ಹೆಜ್ಜೆ: ರಾಜೀವ್ ಚಂದ್ರಶೇಖರ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23: ಭಾರತವು ಎಲೆಕ್ಟ್ರಿಕ್ ಉತ್ಪಾದನಾ ಹಬ್ ಆಗುವತ್ತ ಮಹತ್ವದ ಹೆಜ್ಜೆ ಇರಿಸಿದೆ ಎಂದು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ಭಾರತ ಎಲೆಕ್ಟ್ರಾನಿಕ್ ಉತ್ಪಾದನಾ ಹಬ್ ಆಗಲು ಮತ್ತು ಜಾಗತಿಕ ಮೌಲ್ಯಯುತವಾದ ಜಾಲದ ವಿಶ್ವಾಸಾರ್ಹವಾದ ದೇಶವಾಗಲು ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದು, ಇದಕ್ಕಾಗಿ ಅಗತ್ಯವಿರುವ ಪರಿಸರ ವ್ಯವಸ್ಥೆಯನ್ನು ರಚಿಸುವತ್ತ ಕಾರ್ಯನಿರತವಾಗಿದೆ ಎಂದರು.

ಆರ್ಥಿಕತೆಯ ಪುನಶ್ಚೇತನ: ಪುನರ್‍ಕಲ್ಪನೆ. ರೀಬೂಟ್, ಸುಧಾರಣೆ'' ಎಂಬ ಕುರಿತಾದ ವಿಷಯದ ಮೇಲೆ ಪಬ್ಲಿಕ್ ಅಫೇರ್ಸ್ ಫೋರಂ ಆಫ್ ಇಂಡಿಯಾ(ಪಿಎಎಫ್‍ಐ) ಏರ್ಪಡಿಸಿದ್ದ 8 ನೇ ರಾಷ್ಟ್ರೀಯ ವಿಚಾರ ಸಂಕಿರಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, 2014-15 ರಲ್ಲಿ ನಮ್ಮ ದೇಶದಲ್ಲಿ 1.8 ಲಕ್ಷ ಕೋಟಿ ಮೌಲ್ಯದ ಎಲೆಕ್ಟ್ರಾನಿಕ್ ಉತ್ಪಾದನೆ ಇತ್ತು.

Rajeev Chandrasekhar Says India Has Ambitions To Become The Electronic Manufacturing Hub

ನಂತರದ ಐದು ವರ್ಷಗಳಲ್ಲಿ ಇದರ ಪ್ರಮಾಣ 5.5 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿತು. ನಾವು ನಿಖರವಾದ ನೀತಿಗಳನ್ನು ರೂಪಿಸಿರುವುದು ಮತ್ತು ಗುರಿಯನ್ನು ಇಟ್ಟುಕೊಂಡು ನೀತಿಗಳನ್ನು ರೂಪಿಸುವ ಮೂಲಕ ಬೆಳವಣಿಗೆಯನ್ನು ಕಂಡಿದ್ದೇವೆ. ಇದು ನಮ್ಮ ಯಶಸ್ಸು ಎಂದೇ ಹೇಳಬಹುದು. ಇದೇ ವೇಳೆ ವಿಶ್ವಾಸಾರ್ಹವಾದ ಮೌಲ್ಯಯುತ ಜಾಲದಲ್ಲಿ ನಾವು ಪ್ರಮುಖ ಪಾತ್ರವನ್ನು ವಹಿಸುವುದು ನಮ್ಮ ಉದ್ದೇಶವಾಗಿದೆ.

2024-25 ರ ವೇಳೆಗೆ ಭಾರತ 250-300 ಯುಎಸ್‍ಡಿ ಬಿಲಿಯನ್ ಮೊತ್ತದ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಹೊಂದುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

ಜಾಗತಿಕ ಮಾರುಕಟ್ಟೆಗೆ ಅತ್ಯಂತ ವಿಶ್ವಾಸಾರ್ಹವಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರಮುಖ ಪೂರೈಕೆದಾರ ದೇಶವಾಗಲಿದೆ. ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಮತ್ತು ನಮಗೆ ಉತ್ತಮ ಅವಕಾಶ ಲಭ್ಯವಾಗಲಿದೆ. ಡಿಜಿಟಲ್ ಆರ್ಥಿಕತೆ ಮತ್ತು ಇದಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಇದು ವೈ2ಕೆ ಕ್ಷಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇಕ್ವಿಪ್‍ಮೆಂಟ್ ಮತ್ತು ಸಿಸ್ಟಂನಲ್ಲಿ ವಿಸ್ತರಣೆ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಇದಲ್ಲದೇ, ಆಟೋಮೋಟಿವ್ ಮತ್ತು ಮೆಡಿಕಲ್ ಇಕ್ವಿಪ್‍ಮೆಂಟ್‍ನತ್ತಲೂ ಗಮನಹರಿಸುತ್ತಿದ್ದೇವೆ. ಭಾರತವನ್ನು ಎಲೆಕ್ಟ್ರಾನಿಕ್ ಶಕ್ತಿಯನ್ನಾಗಿ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದರು.

ನಾವು ಪ್ರಮುಖ ಎಲೆಕ್ಟ್ರಾನಿಕ್ ಉತ್ಪಾದಕ ದೇಶವಾಗುವ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದೇವೆ. ಇದು ಇತರೆ ದೇಶಗಳಿಗಿಂತ ಭಿನ್ನವಾಗಿರುತ್ತದೆ. ಇದು ಕೇವಲ ಪ್ರಚಾರಕ್ಕಾಗಿ ರೂಪಿಸಿರುವ ಉಪಕ್ರಮವಲ್ಲ. ಇದು ಸೆಮಿಕಂಡಕ್ಟರ್ ಮತ್ತು ಬಿಡಿಭಾಗಗಳ ಕ್ಷೇತ್ರದಲ್ಲಿ ಆಳವಾದ, ಸುಸ್ಥಿರವಾದ ಮತ್ತು ಸ್ಪರ್ಧಾತ್ಮಕತೆಯನ್ನು ಪಡೆಯಲಿದೆ ಎಂದರು.

ಪಿಎಎಫ್‍ಐನ ವ್ಯವಸ್ಥಾಪನಾ ಸಮಿತಿ ಸದಸ್ಯ ಮತ್ತು ಇಂಡಿಯನ್ ಪಬ್ಲಿಕ್ ಪಾಲಿಸಿ ಉಪಾಧ್ಯಕ್ಷ ಹಾಗೂ ಅಮೆಜಾನ್ ಇಂಡಿಯಾದ ಚೇತನ್ ಕೃಷ್ಣಸ್ವಾಮಿ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಟ್ವಿಟರ್ ಇಂಡಿಯಾದ ಸೀನಿಯರ್ ಮ್ಯಾನೇಜರ್, ಪಬ್ಲಿಕ್ ಪಾಲಿಸಿ ಆಂಡ್ ಫಿಲಾಂಥ್ರಪಿ ಶುಗುಫ್ತಾ ಕಮ್ರಾನ್ ಅವರು ಸಮಾರೋಪ ನುಡಿಗಳನ್ನಾಡಿದರು.

ಈ ಕಾರ್ಯಕ್ರಮವನ್ನು ಪಿಎಎಫ್‍ಐನ ಉಪಾಧ್ಯಕ್ಷ ಮತ್ತು ಆಪಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿರಾಟ್ ಭಾಟಿಯಾ ಅವರು ನಡೆಸಿಕೊಟ್ಟರು.

Recommended Video

ಡೊಳ್ಳು ಹೊಟ್ಟೆ ಇರೋ ಪೊಲೀಸರಿಗೆ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ | Oneindia Kannada

English summary
India has ambitions of becoming an electronic manufacturing hub and a trusted player in the global value chain, and it has been working to create the required ecosystem, said Rajeev Chandrasekhar, Minister of State for Electronics and IT and Skill Development and Entrepreneurship, Government of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X