ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂಡಸ್ IoT ಕಿಟ್ ವೇದಿಕೆಗೆ ಚಾಲನೆ ನೀಡಿದ ಸಚಿವ ರಾಜೀವ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18: ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರಿಂದು ಬೆಂಗಳೂರಿನ ಸಿಡಾಕ್ ಕೇಂದ್ರಕ್ಕೆ ಭೇಟಿ ನೀಡಿ, ಇಂಡಸ್ (ಉನ್ನತ ಕೌಶಲದ ನಾವೀನ್ಯತೆ ಅಭಿವೃದ್ಧಿ) ಐಓಟಿ ಕಿಟ್ - ಏಕ ಫಲಕ ಐಓಟಿ ಅಭಿವೃದ್ಧಿ ವೇದಿಕೆಗೆ ಚಾಲನೆ ನೀಡಿದರು. ಸಿಡಾಕ್ ಅಭಿವೃದ್ಧಿಪಡಿಸಿರುವ ಕಿಟ್ ಒಂದು ಕ್ರೆಡಿಟ್ ಕಾರ್ಡ್ ಅಳತೆಯಲ್ಲಿದ್ದು, ಆರು ಸೆನ್ಸಾರ್, ಪ್ರಚೋದಕಗಳು, ಸಂಪರ್ಕ ಮತ್ತು ಡೀಬಗರ್ ಇಂಟರ್ಫೇಸ್‌ಗಳನ್ನು ಒಳಗೊಂಡಿದೆ.

ಸುಲಭವಾಗಿ ಒಯ್ಯಬಹುದಾದ ಮತ್ತು ಕಾಂಪ್ಯಾಕ್ಟ್ ಆದ ಐಓಟಿ ಕಿಟ್ ಡ್ರೋನ್‌ಗಳು ಸೇರಿದಂತೆ ವಿಸ್ತೃತ ಶ್ರೇಣಿಯ ಸ್ಥಳೀಯ ಮತ್ತು ಸ್ಮಾರ್ಟ್ ಪರಿಹಾರಗಳ ಅಭಿವೃದ್ಧಿಗೆ ಅವಕಾಶ ನೀಡುತ್ತದೆ.

ಇದು ಸಾಧಾರಣವಾಗಿ ಪ್ರತಿ ಯೂನಿಟ್‌ ಗೆ ರೂ 2,500 ಬೆಲೆಯಿದ್ದು, ಶೀಘ್ರದಲ್ಲೇ ಜಿಇಎಂ ಪೋರ್ಟಲ್‌ ನಲ್ಲಿ ಲಭ್ಯವಿರುತ್ತದೆ. ಸಿಡಾಕ್ ಈ ತಂತ್ರಜ್ಞಾನವನ್ನು ವಾಣಿಜ್ಯ ಉತ್ಪಾದನೆಗಾಗಿ ನವೋದ್ಯಮಗಳಿಗೆ ವರ್ಗಾಯಿಸಲು ಸಿದ್ಧವಾಗಿದೆ.

Union Minister of State Rajeev Chandrasekhar Launches indigenously developed INDUS IoT Kit

ಚಂದ್ರಶೇಖರ್ ಅವರು ಬೆಂಗಳೂರಿನಲ್ಲಿ ಸಿಡಾಕ್ ಅಭಿವೃದ್ಧಿಪಡಿಸಿರುವ ಇತರ ನಾವೀನ್ಯಪೂರ್ಣ ತಂತ್ರಜ್ಞಾನಗಳಾದ ಸ್ಮಾರ್ಟ್ ನೀರಿನ ಮೀಟರ್, ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್, ಸ್ಮಾರ್ಟ್ ನೀರು ಸರಬರಾಜು ವ್ಯವಸ್ಥೆ, ಸಿಡಾಕ್‌ನ ಅತ್ಯುನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ (ಎಚ್‌.ಪಿ.ಸಿ) ಕೊಡುಗೆಗಳನ್ನು ಎಚ್‌.ಪಿ.ಸಿ ಸಿಸ್ಟಮ್ ಸಾಫ್ಟ್‌ ವೇರ್ ಪರಿಹಾರಗಳು ಮತ್ತು ಸೇವೆಗಳು, ಮುಂಬರುವ ಪರಮ್ ಉತ್ಕರ್ಶ್ ಸೂಪರ್‌ ಕಂಪ್ಯೂಟಿಂಗ್ ಸೌಲಭ್ಯಗಳನ್ನು ಪರಿಶೀಲಿಸಿದರು ತರುವಾಯ, ಕ್ವಾಂಟಮ್ ಕಂಪ್ಯೂಟಿಂಗ್ ಸಂಬಂಧಿತ ಚಟುವಟಿಕೆಗಳ ಅವಲೋಕನ ಮಾಡಿದರು. ಈ ಉಪಕ್ರಮಗಳನ್ನು ಶ್ಲಾಘಿಸಿದ ಚಂದ್ರಶೇಖರ್, ವಿನ್ಯಾಸದ ಚಕ್ರದ ಆರಂಭದಲ್ಲೇ ಅಂತಿಮ ಬಳಕೆದಾರರೊಂದಿಗೆ ತೊಡಗಿಸಿಕೊಳ್ಳುವುದರೊಂದಿಗೆ ಐಒಟಿಯನ್ನು ಡ್ರೋನ್‌, ಎಚ್.ಪಿ.ಸಿ. ಕೇಸ್ ಗಳಲ್ಲಿ ಉದ್ದೇಶಿತ ಕೈಗಾರಿಕಾ ಬಳಕೆ ಮತ್ತು ವಿಸ್ತರಿಸಲು ಶಿಫಾರಸು ಮಾಡಿದರು.

ಸಿಡಾಕ್‌ನಲ್ಲಿ ಬಹುನಿರೀಕ್ಷಿತ ಅಧಿವೇಶನವು ಪ್ರಮುಖ ಎಂ.ಎನ್.ಸಿ.ಗಳು ಮತ್ತು ನವೋದ್ಯಮಗಳಿಂದ ಕೇಂದ್ರ ಸರ್ಕಾರದ ರಾಜ್ಯ ಸಚಿವರೊಂದಿಗೆ ಉನ್ನತ ಕಾರ್ಯನಿರ್ವಾಹಕರ ಸಂವಾದವಾಗಿತ್ತು, ಅವರು ಸ್ವತಃ ಟೆಕ್ನೋಕ್ರಾಟ್ ಆಗಿದ್ದು, ಭಾರತದ ಅತ್ಯುತ್ತಮ ತಂತ್ರಜ್ಞಾನ ಮನಸ್ಸುಗಳಲ್ಲಿ ಒಬ್ಬರೆಂದು ಹೇಳಲಾಗುತ್ತದೆ. ಚಂದ್ರಶೇಖರ್ ಅವರು ಸಿಲಿಕಾನ್ ಕಣಿವೆಯಲ್ಲಿ 80486 ಮೈಕ್ರೋ-ಪ್ರೊಸೆಸರ್ ಹಾಗೂ ಪೆಂಟಿಯಂಗಾಗಿ ಚಿಪ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಡೊಮೇನ್ ತಜ್ಞರಾಗಿರುವ ಅವರು, ತಮ್ಮ ಜ್ಞಾನ, ಪರಿಣತಿ ಮತ್ತು ಅಮೂಲ್ಯವಾದ ಅನುಭವವನ್ನು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಗೆ ವಹಿಸಿಕೊಟ್ಟ ಎರಡು ಪ್ರಮುಖ ಖಾತೆಗಳಿಗೆ ತರುತ್ತಿದ್ದಾರೆ.

ಸಂವಾದದಲ್ಲಿ ಪಾಲ್ಗೊಂಡಿದ್ದವರನ್ನುದ್ದೇಶಿಸಿ ಮಾತನಾಡಿದ ಚಂದ್ರಶೇಖರ್, ಪ್ರಧಾನಮಂತ್ರಿ ಮೋದಿ ಅವರ ದೃಷ್ಟಿಕೋನವನ್ನು ಹಂಚಿಕೊಂಡರು ಮತ್ತು"ನರೇಂದ್ರ ಮೋದಿ ಸರ್ಕಾರ ಭಾರತವನ್ನು ವಿಧ್ಯುನ್ಮಾನ ಮತ್ತು ತಾಂತ್ರಿಕ ಅಗ್ರೇಸರನಾಗಿ ಮಾಡುವ ವಿಚಾರದಲ್ಲಿ ತುಂಬಾ ಗಂಭೀರವಾಗಿದೆ. ವಿಧ್ಯುನ್ಮಾನ ಮತ್ತು ಐಟಿ ಸಚಿವಾಲಯವು ಅನುವುಗಾರ/ಪಾಲುದಾರನ ಪಾತ್ರವನ್ನು ನಿರ್ವಹಿಸುತ್ತದ್ದು, ಮಾರುಕಟ್ಟೆ ಮತ್ತು ಬಂಡವಾಳದ ಪ್ರವೇಶ ಸೇರಿದಂತೆ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ವೇಗವರ್ಧಿಸಲು ಬೆಂಬಲವನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಜೀವಿತಾವಧಿಯಲ್ಲಿ ಒಮ್ಮೆ ದೊರಕುವ ಅವಕಾಶ ಭಾರತಕ್ಕಿದೆ ಎಂದರು. ಇದನ್ನು ನಾನು ತಂತ್ರಜ್ಞಾನ ಮತ್ತು ವಿದ್ಯುನ್ಮಾನ ವಲಯಕ್ಕೆ ವೈ2ಕೆ ಕ್ಷಣ ಎಂದು ಕರೆಯುತ್ತೇನೆ. ನರೇಂದ್ರ ಮೋದಿ ಅವರ ಸರ್ಕಾರ ಸೆಮಿಕಂಡಕ್ಟರ್ ಮತ್ತು ನವೋದ್ಯಮಗಳಿಗೆ ಸೂಕ್ತ ನೀತಿ ಚೌಕಟ್ಟು ಒದಗಿಸುವುದರೊಂದಿಗೆ ಅವರೊಂದಿಗೆ ಶ್ರಮಿಸಲು ಬದ್ಧವಾಗಿದೆ ಎಂದರು.

ಚಂದ್ರಶೇಖರ್ ಅವರು ವಿಧ್ಯುನ್ಮಾನ ಮತ್ತು ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಫ್ಯಾಬ್ರಿಕೇಶನ್ ತಂತ್ರದ ಕುರಿತು ಎಲ್ಲಾ ಬಾಧ್ಯಸ್ಥರುಗಳೊಂದಿಗೆ ಸಕ್ರಿಯ ಸಮಾಲೋಚನೆಗಳನ್ನು ನಡೆಸುತ್ತಿದ್ದಾರೆ. ಚಂದ್ರಶೇಖರ್ ಅವರು ಸೆಮಿಕಂಡಕ್ಟರ್ ಕಂಪನಿಗಳು ಮತ್ತು, ನಾಯಕರು ಹಾಗೂ ವಲಯದ ನವೋದ್ಯಮಗಳೊಂದಿಗೆ ಸಂವಾದ ನಡೆಸಿದ ವೇಳೆ "ಭಾರತವು ತನ್ನದೇ ಆದ ನಾವೀನ್ಯತೆಯ ವೇಗವನ್ನು ನಿರ್ಮಿಸಬೇಕು ಮತ್ತು ಇತರರಿಂದ ಭಯಭೀತವಾಗಬಾರದು. ನಾವು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ನಮ್ಮ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು. ನರೇಂದ್ರ ಮೋದಿ ಸರ್ಕಾರ ಪ್ರಬಲ ಅನುವುದಾರನಾಗಿರುತ್ತದೆ" ಎಂದರು.

ನೀತಿ ಚೌಕಟ್ಟಿನಲ್ಲಿ ಸೇರಿಸಬಹುದಾದ ಸಂಭವನೀಯ ತಂತ್ರಗಳ ಕುರಿತು ಅವರು ತಮ್ಮ ಒಳಹರಿವುಗಳನ್ನು ಆಹ್ವಾನಿಸಿದರು. "ನಾವು ಪಿ.ಎಲ್.ಐ. ಯೋಜನೆಯನ್ನು ಆರಂಭಿಸಿದ ರೀತಿ, ಸರ್ಕಾರ. ಡಿಎಲ್‌.ಐ ಯೋಜನೆಯಲ್ಲಿಯೂ ಕೆಲಸ ಮಾಡುತ್ತಿದೆ. ಸರ್ಕಾರ ಹೆಚ್ಚುವರಿ ಮೈಲಿ ಸಾಗಲೂ ಸಿದ್ಧವಿದೆ. ನೀವೆಲ್ಲರೂ ನನ್ನೊಂದಿಗೆ ತೊಡಗಿಸಿಕೊಳ್ಳಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ನಾನು ಕೇವಲ ಒಂದು ದೂರವಾಣಿ ಕರೆ ದೂರದಲ್ಲಿದ್ದೇನೆ "ಎಂದು ಚಂದ್ರಶೇಖರ್ ಭರವಸೆ ನೀಡಿದರು.

ಈ ಭೇಟಿಯನ್ನು ಸೆಮಿಕಂಡಕ್ಟರ್ ಕಂಪನಿಗಳು, ನಾಯಕರು ಮತ್ತು ನವೋದ್ಯಮಗಳು ಮೆಚ್ಚಿ ಸ್ವಾಗತಿಸಿವೆ. "ವಸ್ತು ನಿರ್ದಿಷ್ಟ ಕ್ಷೇತ್ರ, ವಿನ್ಯಾಸದ ಮೌಲ್ಯವರ್ಧನೆ ಉತ್ಪಾದನೆ ಸೇರಿದಂತೆ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸರ್ವಾಂಗೀಣ ಪ್ರಗತಿಯ ಮಾನ್ಯ ಸಚಿವರ ದೃಷ್ಟಿಕೋನ ನೋಡಲು ಇದು ಸ್ಫೂರ್ತಿದಾಯಕವಾಗಿದ್ದು, ಸರ್ಕಾರ ವೈಜ ವೇಗವರ್ಧಕವಾಗಿ ಕಾರ್ಯನಿರ್ವಹಿಸುವುದನ್ನು ನೋಡಲು ಉತ್ಸುಕವಾಗಿದೆ" ಎಂದು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಇಂಡಿಯಾದ ಅಧ್ಯಕ್ಷ ಮತ್ತು ಎಂ.ಡಿ ಸಂತೋಷ್ ಕುಮಾರ್ ಹೇಳಿದರು.

"ಇದು ಅನನ್ಯವಾದ ಅನುಭವ ನೀಡಿತು - ಬಹುತೇಕ ನಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡಿದಂತಿತ್ತು. ಅನೌಪಚಾರಿಕ ವಾತಾವರಣದಲ್ಲಿ ಆಲೋಚನೆಯ ಸ್ಪಷ್ಟತೆ ಮತ್ತು ಮುಕ್ತತೆಯು ಅದನ್ನು ಕಲ್ಪನೆಗಳ ವಿನಿಮಯದ ಚಾವಡಿಯಂತಿತ್ತು. ಇಂತಹ ನಾಯಕತ್ವದಿಂದ, ಮುಂಬರುವ ವರ್ಷಗಳಲ್ಲಿ ಭಾರತೀಯ ಸೆಮಿಕಂಡಕ್ಟರ್ ಉದ್ಯಮವು ಅಭಿವೃದ್ಧಿ ಹೊಂದುತ್ತದೆ ಮತ್ತು ಅಭಿವೃದ್ಧಿ ಹೊಂದುತ್ತದೆ ಎಂದು ನನಗೆ ಖಾತ್ರಿಯಿದೆ "ಎಂದು ಸಂಖ್ಯಾ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ಪರಾಗ್ ನಾಯಕ್ ಹೇಳಿದರು.

"ಜಾಗತಿಕ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಪೂರೈಕೆ ಸರಪಳಿಯಲ್ಲಿ ಭಾರತದ ಹೆಜ್ಜೆಗುರುತನ್ನು ಅಳೆಯಲು ಸರ್ಕಾರದ ಬದ್ಧತೆಯನ್ನು ಗುರುತಿಸುವುದು ಅತ್ಯಾಕರ್ಷಕವಾಗಿದೆ" ಎಂದು ಸಿರೆಲ್ ಸಿಸ್ಟಮ್ಸ್ ಸಿಇಒ ಸುಮೀತ್ ಮಾಥೂರ್ ಹೇಳಿದರು.

"ಸೆಮಿಕಂಡಕ್ಟರ್‌ ಗಳ ಹೊಸ ಯುಗಕ್ಕೆ ಭಾರತದ ಪರಿಸರ ವ್ಯವಸ್ಥೆಯ ಪಾಲುದಾರರೊಂದಿಗೆ ಸಹಕಾರವನ್ನು ಅಭಿವೃದ್ಧಿಪಡಿಸುವ ಅಗತ್ಯತೆಯ ಚಿಂತನೆಯನ್ನು ನಾನು ಇಷ್ಟಡುತ್ತೇನೆ, ಏಕೆಂದರೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ, ಜೊತೆಗೆ ಸಿಸ್ಟಮ್ ಡಿಸೈನ್ ಆಪ್ಟಿಮೈಸೇಶನ್ ಅಗತ್ಯವೂ ಇದೆ. ಇಂಟೆಲ್ ತನ್ನ ಇಂಟೆಲ್ ಫೌಂಡ್ರಿ ಸೇವೆ ಆಧಾರಿತ ವಿನ್ಯಾಸ ಮತ್ತು ಐಪಿ ಸೇವೆಗಳೊಂದಿಗೆ ಆರಂಭಿಸುವುದರೊಂದಿಗೆ ಇದು ತುಂಬಾ ಹೊಂದಿಕೊಳ್ಳುತ್ತದೆ." ಶ್ರೀನಿವಾಸ್ ಲಿಂಗಂ, ಉಪಾಧ್ಯಕ್ಷರು, ಡೇಟಾ ಸೆಂಟರ್ ಮತ್ತು ಎಐ ಸಮೂಹ ಮತ್ತು ಜಿಎಂ, ಇಂಟೆಲ್ ಇಂಡಿಯಾದ ಕೃತಕ ಬುದ್ಧಿಮತ್ತೆ ಸಮೂಹ.

ಈ ಸಂದರ್ಭದಲ್ಲಿ ಚಂದ್ರಶೇಖರ್ ಅವರೊಂದಿಗೆ ಸಂವಾದ ನಡೆಸಿದ ಕಾರ್ಯನಿರ್ವಾಹಕರುಗಳಲ್ಲಿ ಉನ್ನತ ಬಹು ರಾಷ್ಟ್ರೀಯ ಕಂಪನಿಗಳು ಮತ್ತು ಭಾರತೀಯ ನವೋದ್ಯಮಗಳ ಪ್ರತಿನಿಧಿಗಳಿದ್ದರು. ಶ್ರೀನಿವಾಸ್ ಲಿಂಗಂ, ವಿಪಿ, ಇಂಟೆಲ್, ಸಂಜಯ್ ಗುಪ್ತಾ, ವ್ಯವಸ್ಥಾಪಕ ನಿರ್ದೇಶಕರು, ಎನ್.ಎಕ್ಸ್.ಪಿ. ಸೆಮಿಕಂಡಕ್ಟರ್ಸ್, ಸಂತೋಷ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಟಿಐ, ದೀಪಕ್ ಅಗರ್ವಾಲ್, ಎಎಂಡಿ, ರಾಜನ್ ವಗಾಡಿಯಾ, ವಿಪಿ ಮತ್ತು ಅಧ್ಯಕ್ಷರು ಕ್ವಾಲ್ಕಾಮ್ ಇಂಡಿಯಾ ಮತ್ತು ಸಾರ್ಕ್, ಡಾ ನೀಲ್ ಗಾಲಾ, ಸಿಟಿಒ, ಇಂಕೋರ್ ಸೆಮಿಕಂಡಕ್ಟರ್ಸ್, ಶರವಣ ಕುಮಾರ್ ಗಣೇಶನ್, ಸಿಇಒ ಮತ್ತು ಸಂಸ್ಥಾಪಕರು, ಎಂ.ಎಂ.ಆರ್.ಎಫ್.ಐ.ಸಿ. ಸಂವಾದಾತ್ಮಕ ಅಧಿವೇಶನದಲ್ಲಿ ಭಾಗವಹಿಸಿದ್ದರು.

Recommended Video

ತನ್ನ ಸ್ಥಾನವನ್ನು KL ರಾಹುಲ್ ಗೆ ದಾನ ಮಾಡಿದ ವಿರಾಟ್ | Oneindia Kannada

ಸುಮೀತ್ ಮಾಥೂರ್, ಸಿಇಓ ಮತ್ತು ಸಂಸ್ಥಾಪಕರು, ಸಿರೆಲ್, ನಾರಾಯಣರಾವ್ ಸಿಇಓ, ಅಕಾರ್ಡ್, ಪರಾಗ್ ನಾಯಕ್ ಸಿಇಓ, ಸಂಖ್ಯಾ ನವೋದ್ಯಮಗಳನ್ನು ಪ್ರತಿನಿಧಿಸಿದ್ದರು. (ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ)

English summary
Union Minister of State Rajeev Chandrasekhar today visited CDAC Bangalore and Launched indigenously developed INDUS IoT Kit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X