ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಲ್ಲೇಖನ ನಿಷೇಧ ಖಂಡಿಸಿ ಬೆಂಗಳೂರಲ್ಲಿ ಜೈನರ ಬೃಹತ್ ಜಾಥಾ

By Vanitha
|
Google Oneindia Kannada News

ಬೆಂಗಳೂರು, ಆಗಸ್ಟ್, 27 : ಜೈನಧರ್ಮೀಯರು ಸಲ್ಲೇಖನ ವ್ರತ ವಿರುದ್ದ ರಾಜಸ್ಥಾನ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಪರಮ ಪೂಜ್ಯ 108 ಬಾಲಾಚಾರ್ಯಶ್ರೀ ಸಿದ್ಧಸೇನ ಮಹಾರಾಜರ ನೇತೃತ್ವದಲ್ಲಿ ಮೌನ ಜಾಥಾ ಕೈಗೊಂಡರು.

ಜೈನ ಧರ್ಮ ಪವಿತ್ರ ಆಚರಣೆಯಾದ ಸಲ್ಲೇಖನ ವ್ರತಕ್ಕೆ ನಿಷೇಧ ಹೇರಿ ರಾಜಸ್ಥಾನ ಹೈಕೋರ್ಟ್ ಎಡವಟ್ಟು ಎಸಗಿದೆ. ಈ ಪ್ರಯುಕ್ತ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಜೈನ ಧರ್ಮೀಯರು ಪ್ರತಿಭಟನೆ ಕೈಗೊಂಡಿದ್ದಾರೆ.[ಜೈನರ ಸಲ್ಲೇಖನ ವ್ರತ ಕಾನೂನುಬಾಹಿರ ಆಚರಣೆಯಂತೆ!]

ಸಲ್ಲೇಖನ ವ್ರತ ಆತ್ಮಹತ್ಯೆಗೆ ಸಮಾನವಾದದು, ಅದನ್ನು ನಿಷೇಧಿಸಬೇಕು ಎಂದು ನಿಖಿಲ್ ಸೋನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್ ನ್ಯಾಯಾಧೀಶ ಸುನೀಲ್ ಅಂಬ್ಬಾವಿ ನೇತೃತ್ವದ ಖಂಡ ಪೀಠ ಐಪಿಸಿ ಸೆಕ್ಷನ್ 306(ಆತ್ಮಹತ್ಯೆಗೆ ಪ್ರೇರಣೆ), 309( ಆತ್ಮಹತ್ಯೆಗೆ ಯತ್ನ) ಪ್ರಕಾರ ಕಾನೂನು ಬಾಹಿರ. ಈ ವ್ರತ ಅನುಸರಿಸಲು ಮುಂದಾದಲ್ಲಿ ಅವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ಜೈನರ ಆಚರಣಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿತ್ತು.

ಈ ತೀರ್ಪನ್ನು ವಿರೋಧಿಸಿದ ಜೈನರು ಬೆಂಗಳೂರಿನ ಜಯನಗರ ಜಿನ ಮಂದಿರದಿಂದ ಸುಮಾರು ಬೆಳಿಗ್ಗೆ 8.30 ರ ವೇಳೆಗೆ ಜಾಥಾ ಆರಂಭಿಸಿದ್ದು, ಇದು ಮೈಸೂರು ಬ್ಯಾಂಕ್, ಕೆ. ಆರ್ ರಸ್ತೆ ಮೂಲಕ ಚಿಕ್ಕಪೇಟೆ ಬಳಿಯ ಶ್ವೇತಾಂಬರ ಜಿನ ಮಂದಿರ, ಅವೆನ್ಯೂ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಇದರ ಚಿತ್ರ ತುಣುಕುಗಳು ಇಲ್ಲಿದೆ ನೋಡಿ.

ಏನಿದು ಸಲ್ಲೇಖನ ವ್ರತ?

ಏನಿದು ಸಲ್ಲೇಖನ ವ್ರತ?

ಜೈನ ಧರ್ಮದಲ್ಲಿ ದೀಕ್ಷೆ ಪಡೆದ ವ್ಯಕ್ತಿ ತನ್ನ ಸ್ವಇಚ್ಛೆಯಿಂದ ನೀರು ಆಹಾರವನ್ನು ಬಿಟ್ಟು ಕ್ರಮಬದ್ದವಾದ ಉಪವಾಸ ಕೈಗೊಳ್ಳುತ್ತಾರೆ. ಆಹಾರ ಕ್ರಮಾಧಿಗಳನ್ನು ಬಿಡುತ್ತಾ ದೇಹದ ಮೇಲಿನ ಮಮತೆಯನ್ನು ಕಳೆದುಕೊಂಡು, ಕೊನೆ ಕ್ಷಣದವರೆಗೂ ಸಾವನ್ನು ಬಹಳ ಖುಷಿಯಿಂದಲೇ ಸ್ವೀಕರಿಸುವುದೇ ಸಲ್ಲೇಖನ ವ್ರತ.

ಪರಮ ಪೂಜ್ಯ 108 ಬಾಲಾಚಾರ್ಯಶ್ರೀ ಸಿದ್ಧಸೇನ ಮಹಾರಾಜರು

ಪರಮ ಪೂಜ್ಯ 108 ಬಾಲಾಚಾರ್ಯಶ್ರೀ ಸಿದ್ಧಸೇನ ಮಹಾರಾಜರು

ಇಹಲೋಕದ ವ್ಯಾಮೋಹ ತೊರೆದು ಮೋಕ್ಷವನ್ನು ಸಾಧಿಸಲು ಇರುವ ಒಂದು ಅತ್ಯುತ್ತಮ ಮಾರ್ಗವೇ ಸಲ್ಲೇಖನ ವ್ರತ. ಇದು ಜೈನ ಧರ್ಮೀಯರ ಪವಿತ್ರ ನಂಬಿಕೆ.

ಶ್ವೇತಾಂಬರ ಮತ್ತು ದಿಗಂಬರ ಜೈನರು ಒಟ್ಟಾಗಿ ಪ್ರತಿಭಟನೆ

ಶ್ವೇತಾಂಬರ ಮತ್ತು ದಿಗಂಬರ ಜೈನರು ಒಟ್ಟಾಗಿ ಪ್ರತಿಭಟನೆ

ಸಲ್ಲೇಖನ ವ್ರತ ಯಾವ ವ್ರತ ಮರಣದಲ್ಲಿ ಬರುತ್ತದೆ?

ಜೈನಧರ್ಮದಲ್ಲಿ ಬಾಲ ಮರಣ, ಪಂಡಿತ ಮರಣ, ವ್ರತ ಮರಣ ಎಂಬ ಮೂರು ವರ್ಗವಿದೆ. ಇದರಲ್ಲಿ ಸಲ್ಲೇಖನ ವ್ರತವು ವ್ರತ ಮರಣದಲ್ಲಿ ಬರುತ್ತದೆ.

ಸಲ್ಲೇಖನ ವ್ರತ ಮೊದಲು ಕೈಗೊಂಡವರು

ಸಲ್ಲೇಖನ ವ್ರತ ಮೊದಲು ಕೈಗೊಂಡವರು

ವ್ರತ ಮರಣದಲ್ಲಿನ ಸಲ್ಲೇಖನ ವ್ರತವನ್ನು ಜೈನಧರ್ಮದ ೨೪ನೇ ತೀರ್ಥಂಕರ ವರ್ಧಮಾನ ಮಹಾವೀರ, ಭದ್ರಬಾಹುಮುನಿ ಮತ್ತು ಚಂದ್ರಗುಪ್ತ ಮೌರ್ಯ ಕೈಗೊಂಡರೆಂದು ತಿಳಿದು ಬಂದಿದೆ. ವಿಶ್ವದಲ್ಲಿ ಸಲ್ಲೇಖನ ವ್ರತ ಮರಣಗಳು ಹೆಚ್ಚಾಗಿ ಶ್ರವಣ ಬೆಳಗೊಳದಲ್ಲಿ ಸಂಭವಿಸಿದೆ.

ಸಲ್ಲೇಖನ ವ್ರತ ಪದಶಃ ಅರ್ಥ:

ಸಲ್ಲೇಖನ ವ್ರತ ಪದಶಃ ಅರ್ಥ:

ಸತ್‌ (ಶ್ಲಾಘನೀಯ), ಲೇಖನಾ (ಕಾರ್ಯಕ್ಲೇಷ) ಎಂಬ ೨ ಪದಗಳು ಸಲ್ಲೇಖನವನ್ನು ವಿಧಿ ವಿಧಾನ ಸಾಧನೆ ತಪಸ್ಸು, ಯೋಗ ಎಂದೆಲ್ಲ ಗುರುತಿಸಲಾಗಿದೆ. ಇಂದ್ರಿಯ ನಿಗ್ರಹ, ಮಲವಿನಾಶ, ಕರ್ಮಕಳಂಕದಿಂದ ಮುಕ್ತಿ ಪಡೆದುಕೊಂಡು ಆತ್ಮದತ್ತ ಮನಸ್ಸನ್ನು ಕೇಂದ್ರೀಕರಿಸುವುದು.

ಜೈಪುರದಲ್ಲಿನ ಜೈನರು

ಜೈಪುರದಲ್ಲಿನ ಜೈನರು

ಜೈಪುರದಲ್ಲಿ ಸುಮಾರು 1 ಲಕ್ಷ ಜೈನರು ಸಲ್ಲೇಖನ ವ್ರತ ನಿಷೇಧದ ತೀರ್ಪು ವಿರೋಧಿಸಿ ಜಾಥಾ ಕೈಗೊಂಡಿದ್ದರು

English summary
Rajasthan High Court decision against Bengaluru Jains about Sallekhana vrath. Bengaluru jains has organized big ralley on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X