ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದ್ಯರಾತ್ರಿ ವಿಸ್ತರಣೆಗೆ ಕಾಂಗ್ರೆಸಿಗರ ವಿರೋಧ

|
Google Oneindia Kannada News

ಬೆಂಗಳೂರು, ಮಾ.5 : ಬೆಂಗಳೂರಿನಲ್ಲಿ ನೈಟ್ ಲೈಫ್ ಅವಧಿ ವಿಸ್ತರಣೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಮತ್ತು ವಿಧಾನಪರಿಷತ್ ಸದಸ್ಯ ಎಂವಿ ರಾಜಶೇಖರನ್ ಮದ್ಯರಾತ್ರಿ ವಿಸ್ತರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ತಡರಾತ್ರಿ 1 ಗಂಟೆವರೆಗೂ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ವಿಧಾನಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅಂಕಿ ಅಂಶಗಳ ಕುರಿತು ಮಾಹಿತಿ ನೀಡಿರುವ ರಾಜಶೇಖರನ್, ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. [ನೈಟ್ ಲೈಫ್ ಗೆ ಬಿಜೆಪಿ ವಿರೋಧ]

Siddaramaiah

ಎಂವಿ ರಾಜಶೇಖರನ್ ಬರೆದ ಪತ್ರದಲ್ಲಿ ಪಾಪದ ದುಡ್ಡಿನಲ್ಲಿ ಪೊಲೀಸ್ ಇಲಾಖೆಯನ್ನು ಬಲಗೊಳಿಸುವ ಅಗತ್ಯವಿಲ್ಲ. ಆದ್ದರಿಂದ ಸರ್ಕಾರದ ನಿರ್ಣಯವನ್ನು ಹಿಂಪಡೆಯಬೇಕು, ಸರ್ಕಾರ ಈ ನಿರ್ಧಾರದ ಕುರಿತು ಪುನರ್ ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾರೆ. [ಪೊಲೀಸರಿಗೆ ಸವಾಲು]

ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ 2012-13ರಲ್ಲಿ ನಡೆಸಿದ ಸಮೀಕ್ಷೆಯ ಪಕ್ರಾರ ಬೆಂಗಳೂರು ನಗರದಲ್ಲಿ ಶೇ.33ಕ್ಕೂ ಹೆಚ್ಚು ಯುವಕ-ಯುವತಿಯರು ಮದ್ಯವ್ಯಸನಿಗಳಾಗಿದ್ದಾರೆ. ಅದರಲ್ಲೂ ಹದಿಹರೆಯದ ಯುವಕ ಯುವತಿಯರು ಮದ್ಯವ್ಯಸನಿಗಳಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೈಟ್ ಲೈಫ್ ಅವಧಿ ವಿಸ್ತರಣೆ ಬೇಕೆ? ಎಂದು ರಾಜಶೇಖರನ್ ಪ್ರಶ್ನಿಸಿದ್ದಾರೆ. [ಬೆಂಗಳೂರಿನಲ್ಲಿ ಇನ್ನು ಮದ್ಯರಾತ್ರಿ]

ನಿಮ್ಹಾನ್ಸ್ ಸಂಸ್ಥೆಯು ತನ್ನ ವಾರ್ಷಿಕ ಪ್ರಕಟಣೆಯಲ್ಲಿ ಯುವಜನರ ಆರೋಗ್ಯದ ಮೇಲೆ ಮದ್ಯಪಾನ ದುಷ್ಪರಿಣಾಮ ಬೀರುತ್ತಿರುವ ಕುರಿತಂತೆ ವಿಶೇಷ ಅಧ್ಯಯನ ಮಾಡಿ ವರದಿ ಪ್ರಕಟಿಸಿದೆ. ಬೆಂಗಳೂರಿನಂತಹ ನಗರದಲ್ಲಿ ನೈಟ್ ಲೈಫ್ ವಿಸ್ತರಣೆ ಮಾಡುವ ಮೊದಲು ಸರ್ಕಾರ ಗಂಭೀರವಾಗಿ ಆಲೋಚಿಸಬೇಕು ಎಂದು ಪತ್ರದಲ್ಲಿ ರಾಜಶೇಖರನ್ ಮನವಿ ಮಾಡಿದ್ದಾರೆ.

English summary
Senior Congress leader MV Rajasekharan has opposed the government’s decision to extend nightlife in Bangalore, allowing bars and restaurants to function till 1 am. In a letter to Chief Minister Siddaramaiah, he has termed the decision unfortunate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X