ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್. ಆರ್. ನಗರ ಚುನಾವಣೆ; ಕೋವಿಡ್ ಸೋಂಕಿತರು ಮತ ಹಾಕಬಹುದು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ಕೋವಿಡ್ ಸಂದರ್ಭದಲ್ಲಿ ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ಕೋವಿಡ್ ಸೋಂಕಿತರು ಸಹ ಉಪ ಚುನಾವಣೆಯಲ್ಲಿ ಮತದಾನ ಮಾಡಬಹುದಾಗಿದೆ.

ಬುಧವಾರ ಬಿಬಿಎಂಪಿ ಆಯುಕ್ತ ಮತ್ತು ಆರ್. ಆರ್. ನಗರ ಕ್ಷೇತ್ರದ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಪತ್ರಿಕಾಗೋಷ್ಠಿ ನಡೆಸಿದರು. ಉಪ ಚುನಾವಣೆ ಸಿದ್ಧತೆಯ ಕುರಿತು ಮಾಹಿತಿ ನೀಡಿದರು. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಆರ್. ಆರ್. ನಗರ ಚುನಾವಣೆ; ಖುಷ್ಬೂ ಸುಂದರ್ ರೋಡ್ ಶೋ ಆರ್. ಆರ್. ನಗರ ಚುನಾವಣೆ; ಖುಷ್ಬೂ ಸುಂದರ್ ರೋಡ್ ಶೋ

"ನವೆಂಬರ್ 3ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಕೋವಿಡ್ ಸೋಂಕಿತರಿಗೂ ಮತದಾನಕ್ಕೆ ಅವಕಾಶವಿದೆ" ಎಂದು ಬಿಬಿಎಂಪಿ ಆಯುಕ್ತರು ಹೇಳಿದರು.

ಆರ್. ಆರ್. ನಗರ ಚುನಾವಣೆ; ಜಾತಿ ಲೆಕ್ಕಾಚಾರದ್ದೇ ಮಾತು ಆರ್. ಆರ್. ನಗರ ಚುನಾವಣೆ; ಜಾತಿ ಲೆಕ್ಕಾಚಾರದ್ದೇ ಮಾತು

Rajarajeshwari Nagar By Election Covid Patients Can Cast Vote

"ಕೋವಿಡ್ ಸೋಂಕಿತರಿಗೆ ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್, ಪಿಪಿಇ ಕಿಟ್ ಒದಗಿಸಲಾಗಿದೆ. ಮತದಾನ ಮಾಡಲು ಇಚ್ಚಿಸುವ ಸೋಂಕಿತರಿಗೆ ಕಂಟ್ರೋಲ್ ರೂಂನಿಂದ ಕರೆ ಮಾಡಲಾಗುತ್ತದೆ. ಮನೆ ಬಾಗಿಲಿಗೆ ಪಿಪಿಇ ಕಿಟ್ ಹಾಗೂ ಅಂಬ್ಯುಲೆನ್ಸ್ ಒದಗಿಸಲಾಗುತ್ತದೆ" ಎಂದರು.

ಆರ್. ಆರ್. ನಗರ ಉಪ ಚುನಾವಣೆ ಚಿತ್ರಣ; ಗೆಲುವಿಗಾಗಿ ಪಕ್ಷಗಳ ಕಸರತ್ತು! ಆರ್. ಆರ್. ನಗರ ಉಪ ಚುನಾವಣೆ ಚಿತ್ರಣ; ಗೆಲುವಿಗಾಗಿ ಪಕ್ಷಗಳ ಕಸರತ್ತು!

"ಕ್ಷೇತ್ರದ ವ್ಯಾಪ್ತಿಯಲ್ಲಿ 9 ವಾರ್ಡ್‌ಗಳಿವೆ, 10 ಅಂಬ್ಯುಲೆನ್ಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಮತದಾನ ಮಾಡುವ ಕೋವಿಡ್ ಸೋಂಕಿತರನ್ನು ಮತದಾನ ‌ಕೇಂದ್ರಕ್ಕೆ ಕರೆದೊಯ್ದು, ಮನೆಗೆ ವಾಪಸ್ ತಂದು ಬಿಡಲಾಗುತ್ತದೆ" ಎಂದು ಆಯುಕ್ತರು ವಿವರಣೆ ನೀಡಿದರು.

ಆರ್. ಆರ್. ನಗರ ಕ್ಷೇತ್ರದಲ್ಲಿ 695 ವಿಕಲಚೇತನರಿಗೆ ಅಂಚೆ ಮತಗಳ ಚಲಾವಣೆಗೆ ಅವಕಾಶ ನೀಡಲಾಗಿದೆ. ಮತದಾನಕ್ಕಾಗಿ ಒಟ್ಟು 678 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಇವುಗಳಲ್ಲಿ 88 ಸೂಕ್ಷ್ಮ ಮತಗಟ್ಟೆಗಳಾಗಿವೆ.

ಪ್ರತಿ ಮತಗಟ್ಟೆಗಳಲ್ಲಿ ಆರೋಗ್ಯ ಸಿಬ್ಬಂದಿ ಇರಲಿದ್ದಾರೆ. ಮತದಾರರಿಗೆ ಥರ್ಮಲ್ ಸ್ಲ್ರೀನಿಂಗ್ ಕಡ್ಡಾಯವಾಗಿದೆ. ಮತಗಟ್ಟೆ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕ ಮತ್ತು ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು.

English summary
BBMP commissioner and election officer of the Rajarajeshwari Nagar by election Manjunath Prasad said that Covid 19 patients can cast vote in the by elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X