ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್.ಆರ್.ನಗರ ಫಲಿತಾಂಶ : 2724 ನೋಟಾ ಮತ ಚಲಾವಣೆ!

By Gururaj
|
Google Oneindia Kannada News

ಬೆಂಗಳೂರು, ಮೇ 31 : ವಿವಾದಗಳಿಂದಲೇ ಸುದ್ದಿ ಮಾಡಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 25 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣಾ ಫಲಿತಾಂಶದಲ್ಲಿ ಕುತೂಹಲ ಹುಟ್ಟಿಸಿರುವುದು ನೋಟಾ ಮತಗಳು. 2,724 ನೋಟಾ ಮತಗಳು ಕ್ಷೇತ್ರದಲ್ಲಿ ಚಲಾವಣೆಯಾಗಿವೆ.

ರಾಜರಾಜೇಶ್ವರಿ ನಗರ ಫಲಿತಾಂಶ LIVE: ನೋಟಾ 633, ಹುಚ್ಚಾ ವೆಂಕಟ್ 145!ರಾಜರಾಜೇಶ್ವರಿ ನಗರ ಫಲಿತಾಂಶ LIVE: ನೋಟಾ 633, ಹುಚ್ಚಾ ವೆಂಕಟ್ 145!

ನೋಟಾ (ಮೇಲಿನ ಯಾವ ಅಭ್ಯರ್ಥಿಗಳೂ ನನ್ನ ಆಯ್ಕೆ ಅಲ್ಲ) ಎಂದು 2724 ಜನರು ಮತ ಹಾಕಿದ್ದು, ಕುತೂಹಲಕ್ಕೆ ಕಾರಣವಾಗಿದೆ. ರಾಜರಾಜೇಶ್ವರಿ ನಗರದ ಚುನಾವಣಾ ಕಣ ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಭಾರೀ ಸುದ್ದಿ ಮಾಡಿತ್ತು.

ಬಿಜೆಪಿ ಬಹುಮತದ ಕನಸು ಭಗ್ನಗೊಳಿಸಿದ್ದು 'ನೋಟಾ'ಬಿಜೆಪಿ ಬಹುಮತದ ಕನಸು ಭಗ್ನಗೊಳಿಸಿದ್ದು 'ನೋಟಾ'

Rajarajeshwari Nagar : More than 900 NOTA votes registered

ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಕ್ಷೇತ್ರದಲ್ಲಿ ಕುಕ್ಕರ್, ಸೀರೆ, ನೀರಿನ ಕ್ಯಾನ್ ಹಂಚಿಕೆ ಮಾಡಿ ಮತದಾರರಿಗೆ ಆಮಿಷವೊಡ್ಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು. ಮೇ 6ರಂದು ಕ್ಷೇತ್ರದ ವ್ಯಾಪ್ತಿಯಲ್ಲಿ 95 ಲಕ್ಷಕ್ಕೂ ಅಧಿಕ ಹಣ ಟ್ರಕ್‌ನಲ್ಲಿ ಪತ್ತೆಯಾಗಿತ್ತು.

ಆರ್.ಆರ್.ನಗರ ಚುನಾವಣೆ ಮುಂದೂಡಿದ್ದು ಏಕೆ?ಆರ್.ಆರ್.ನಗರ ಚುನಾವಣೆ ಮುಂದೂಡಿದ್ದು ಏಕೆ?

ಜಾಲಹಳ್ಳಿ ಸಮೀಪದ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ 9,746 ವೋಟರ್ ಐಡಿಗಳನ್ನು ಚುನಾವಣಾ ಆಯೋಗ ವಶಕ್ಕೆ ಪಡೆದುಕೊಂಡಿತ್ತು. ಈ ಕುರಿತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಜನರು ಹೆಚ್ಚು ನೋಟಾ ಮತಗಳನ್ನು ಹಾಕಿರುವ ಸಾಧ್ಯತೆ ಇದೆ.

English summary
Rajarajeshwari Nagar assembly election result announced. 2724 None of the Above (NOTA) votes registered in assembly constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X