ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಭವನದಲ್ಲಿ ಬೆಕ್ಕುಗಳ ಕಾಟವಂತೆ! ಬಿಬಿಎಂಪಿಗೊಂದು ಪತ್ರ

|
Google Oneindia Kannada News

ಬೆಂಗಳೂರು, ಡಿಸೆಂಬರ್ 20: ರಾಜಭವನದಲ್ಲಿ ಬೆಕ್ಕುಗಳ ಹಾವಳಿ ವಿಪರೀತವಾಗಿದ್ದು, ನಿಯಂತ್ರಿಸುವಂತೆ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ.

ರಾಜಭವನದ ಉದ್ಯಾನ ಮತ್ತು ಸಿಬ್ಬಂದಿಗಳ ವಸತಿ ಸಮುಚ್ಚಯದಲ್ಲಿ ಹಲವು ಬೆಕ್ಕುಗಳಿವೆ, ಇವುಗಳನ್ನು ಯಾರೂ ಸಾಕಿಲ್ಲ, ಆ ಬೆಕ್ಕುಗಳನ್ನು ಹಿಡಿದು ಅದಕ್ಕೆ ಪುನರ್ವಸತಿ ಕಲ್ಪಿಸಬೇಕು ಎಂದು ರಾಜ್ಯಪಾಲರ ಅಧೀನ ಕಾರ್ಯದರ್ಶಿ ಆರ್‌ ಪ್ರಭುಶಂಕರ್ ಅವರು ಪಾಲಿಕೆಗೆ ಡಿ.5ರಂದು ಪತ್ರ ಬರೆದಿದ್ದಾರೆ.

ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರಾಗಿ 7 ಮಂದಿ ಪ್ರಮಾಣ ವಚನ ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರಾಗಿ 7 ಮಂದಿ ಪ್ರಮಾಣ ವಚನ

ಕೆಲವು ಸಿಬ್ಬಂದಿಗಳು ಪಾರಿವಾಳಗಳಿಗೆ ಆಹಾರ ಹಾಕುತ್ತಾರೆ, ಆ ವೇಳೆ ಬೆಕ್ಕುಗಳು ಪಾರಿವಾಳಗಳನ್ನು ತಿನ್ನುತ್ತಿವೆ, ಆದರೆ ಬೆಕ್ಕುಗಳನ್ನು ಹಿಡಿಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಕಾಡು ಬೆಕ್ಕುಗಳನ್ನು ಹಿಡಿಯಲು ನಮಗೆ ಅಧಿಕಾರವಿಲ್ಲ, ಹೀಗಾಗಿ ಬೆಕ್ಕುಗಳನ್ನು ಅರಣ್ಯ ಇಲಾಖೆಯಿಂದಲೇ ಹಿಡಿಯಬೇಕೇ ಅಥವಾ ಬಿಬಿಎಂಪಿಯವರು ಹಿಡಿಯಬೇಕೆ ಎಂಬ ಗೊಂದಲವಿದೆ.

Raj bhavan is facing Cat problems

ರಾಜಭವನಕ್ಕೆ ಪ್ರಜೆಗಳಿಗೆ ಮುಕ್ತ ಪ್ರವೇಶ, ನೀವು ನೋಡಿಬನ್ನಿ ರಾಜಭವನಕ್ಕೆ ಪ್ರಜೆಗಳಿಗೆ ಮುಕ್ತ ಪ್ರವೇಶ, ನೀವು ನೋಡಿಬನ್ನಿ

ಆದರೆ ಎಷ್ಟು ಬೆಕ್ಕುಗಳಿವೆ ಎಂಬ ಮಾಹಿತಿ ಇಲ್ಲ, ಬಿಬಿಎಂಪಿ ಅಧಿಕಾರಿಗಳು ಮೊದಲು ಬೆಕ್ಕುಗಳ ಸಂಖ್ಯೆಯನ್ನು ಪತ್ತೆ ಮಾಡಿ, ಬಳಿಕ ಕ್ರಮ ಕೈಗೊಳ್ಳಬೇಕು. ಇದೀಗ ಬಿಬಿಎಂಪಿ ಅಧಿಕಾರಿಗಳು ರಾಜಭವನಕ್ಕೆ ತೆರಳಿ ಬೆಕ್ಕುಗಳನ್ನು ಹಿಡಿಯುವ ಪ್ರಯತ್ನ ಮಾಡಲಿದ್ದಾರೆ.

English summary
Raj bhavan officials written a letter to BBMP over cat issues. They have requested to catch the cats in Rajbhavan premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X