ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಗುರುವಾರ ಮಳೆ ಬಂದರೆ ಮ್ಯಾಚ್ ಮರೆತು ಬಿಡಿ

ಏಪ್ರಿಲ್ ತಿಂಗಳ ಕೊನೆವರೆಗೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ ರಾಯಲ್ ಚಾಲೆಂಜರ್ಸ್ ಹಾಗೂ ಗುಜರಾತ್ ಲಯನ್ಸ್ ಮಧ್ಯೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯವಿದ್ದು, ಮಳೆಯಿಂದ ಅಡಚಣೆ ಆಗಬಹುದು ಎಂಬ ಹವಾಮಾನ ವರದಿ ಇದೆ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಹಾಗೆ ನೋಡಿದರೆ ಬೆಂಗಳೂರಿನ ಪಾಲಿಗೆ ಏಪ್ರಿಲ್ ತಿಂಗಳು ಹವಾಮಾನದ ದೃಷ್ಟಿಯಿಂದ ಭಯಾನಕವೇನಲ್ಲ. ತಿಂಗಳ ಆರಂಭದಲ್ಲಿ ಕೆಲ ದಿನ ಬಿಸಿಲಿನ ವಾತಾವರಣ ಕಾಣಿಸಿಕೊಂಡಿದ್ದು ಬಿಟ್ಟರೆ ಮುಂಗಾರು ಪೂರ್ವದ ಮಳೆ ಬೆಂಗಳೂರಿಗೆ ಒಂದಿಷ್ಟು ತಂಪೆರೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಕಳೆದ ಕೆಲವು ದಿನಗಳಿಂದ ಇಲ್ಲಿ ಮೋಡ ಮುಸುಕಿದ ವಾತಾವರಣವೇ ಇದೆ. ಪ್ರತಿ ದಿನ ಮಳೆ ಆಗದಿರಬಹುದು. ಆದರೆ ಕಳೆದ ವಾರವಂತೂ ಅಲ್ಲಲ್ಲಿ ಚೆನ್ನಾಗಿಯೇ ಮಳೆ ಆಗಿದೆ. ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಐಪಿಎಲ್ ಪಂದ್ಯ ತಪ್ಪಿಹೋಯಿತೇ ಎಂದು ಕ್ರಿಕೆಟ್ ಪ್ರೇಮಿಗಳು ಒಂದಿಷ್ಟು ಬೇಸರ ಮಾಡಿಕೊಂಡಿರುತ್ತಾರೆ.[ಜಿಟಿ ಜಿಟಿ ಮಳೆಗೆ ಪಂದ್ಯ ರದ್ದು, ಅಂಕಪಟ್ಟಿಯಲ್ಲಿ ಆರ್ ಸಿಬಿ ಮೇಲಕ್ಕೆ]

Cloud

ಗುರುವಾರ ಮಧ್ಯಾಹ್ನ ಸಿಡಿಲು-ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯನ್ನಂತೂ ತಳ್ಳಿ ಹಾಕುವ ಹಾಗಿಲ್ಲ. ಇನ್ನು 48 ಗಂಟೆಗಳಲ್ಲಿ ಬೆಂಗಳೂರಲ್ಲಿ ಮಳೆ ಸಾಧ್ಯತೆ ದಟ್ಟವಾಗಿದೆ. ಏಪ್ರಿಲ್ ನ ಕೊನೆವರೆಗೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಜಾಸ್ತಿ ಇದೆ. ರಾಯಲ್ ಚಾಲೆಂಜರ್ಸ್ ಹಾಗೂ ಗುಜರಾತ್ ಲಯನ್ಸ್ ಮಧ್ಯೆ ಬೆಂಗಳೂರಿನಲ್ಲಿ ಗುರುವಾರ ನಿಗದಿಯಾಗಿರುವ ಪಂದ್ಯ ನಡೆಯುವುದು ಕೂಡ ಅನುಮಾನ ಎಂಬಂತೆಯೇ ಇದೆ.

ಮ್ಯಾಚ್ ನಡೆದರೆ ಮ್ಯಾಚ್ ಅಥವಾ ಮಳೆ ಬಂದರೆ ಮಳೆ ಎಂಜಾಯ್ ಮಾಡಿ ಅಷ್ಟೇ.

ಮಾಹಿತಿ: ಸ್ಕೈಮೆಟ್ ವೆದರ್

English summary
The month of April hasn’t been that bad for Bengaluru as far as the weather conditions are concerned. While the first few days may have seen some really hot weather conditions, on and off Pre-Monsoon showers have kept the pleasant spirit alive in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X