ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆ ನೀರು ಕೊಯ್ಲು : ಜಲಮಂಡಳಿಯಿಂದ ದಂಡ ಮೊತ್ತ ಹೆಚ್ಚಳ

|
Google Oneindia Kannada News

ಬೆಂಗಳೂರು, ಮೇ 30 : ಬೆಂಗಳೂರು ನಗರದಲ್ಲಿ ಮಳೆ ನೀರು ಕೊಯ್ಲು ಆಳವಡಿಕೆ ಮಾಡಿಕೊಳ್ಳದಿದ್ದರೆ ಹೆಚ್ಚಿನ ದಂಡವನ್ನು ಪಾವತಿ ಮಾಡಬೇಕಿದೆ. ಬೆಂಗಳೂರು ಜಲಮಂಡಳಿ ಈ ಕುರಿತು ತೀರ್ಮಾನವನ್ನು ಕೈಗೊಂಡಿದೆ.

ಮಳೆ ನೀರು ಕೊಯ್ಲು ಯೋಜನೆ ಆಳವಡಿಕೆ ಮಾಡಿಕೊಳ್ಳದ ಮನೆ, ವಾಣಿಜ್ಯ ಸಂಕೀರ್ಣಗಳ ದಂಡ ಮೊತ್ತವನ್ನು ಹೆಚ್ಚಿಸಲು ಬೆಂಗಳೂರು ಜಲಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರದ ಒಪ್ಪಿಗೆಗಾಗಿ ಕಾಯಬೇಕಿಲ್ಲ.

ನೀರಿನ ದರ ಹೆಚ್ಚಳಕ್ಕೆ ಮುಂದಾದ ಬೆಂಗಳೂರು ಜಲಮಂಡಳಿನೀರಿನ ದರ ಹೆಚ್ಚಳಕ್ಕೆ ಮುಂದಾದ ಬೆಂಗಳೂರು ಜಲಮಂಡಳಿ

ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಗೃಹ ಬಳಕೆಗೆ ಶೇ 50ರಷ್ಟು, ವಾಣಿಜ್ಯ ಸಂಕೀರ್ಣಗಳಿಗೆ ಶೇ 100ರಷ್ಟು ದಂಡ ಮೊತ್ತವನ್ನು ಹೆಚ್ಚಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ' ಎಂದು ಹೇಳಿದ್ದಾರೆ.

ಚಂದ್ರಪ್ಪ ಹೇಳಿದ ಬೆಂಗಳೂರು ಬೋರ್‌ ವೆಲ್‌ಗಳ ಕಥೆಚಂದ್ರಪ್ಪ ಹೇಳಿದ ಬೆಂಗಳೂರು ಬೋರ್‌ ವೆಲ್‌ಗಳ ಕಥೆ

Rainwater harvesting : BWSSB to hike penalty

'ಜನರಿಗೆ ಕಿರುಕುಳ ನೀಡಲು ದಂಡ ಮೊತ್ತವನ್ನು ಹೆಚ್ಚಿಸುತ್ತಿಲ್ಲ. ಮಳೆ ಕೊಯ್ಲು ಯೋಜನೆ ಅಳವಡಿಸಿಕೊಳ್ಳಲಿ ಎಂಬ ಕಾರಣಕ್ಕೆ ದಂಡವನ್ನು ಹೆಚ್ಚಿಸಲಾಗುತ್ತಿದೆ' ಎಂದು ಜಲಮಂಡಳಿಯ ಮುಖ್ಯ ಇಂಜಿನಿಯರ್ ಕೆಂಪಯ್ಯ ಸ್ಪಷ್ಟನೆ ನೀಡಿದ್ದಾರೆ.

ಹೆಚ್ಚಿದ ನೀರಿನ ಬೇಡಿಕೆ, ಟ್ಯಾಂಕರ್ ಬಾಡಿಗೆ ಪಡೆದು ನೀರು ಪೂರೈಸಿದ ಬಿಬಿಎಂಪಿಹೆಚ್ಚಿದ ನೀರಿನ ಬೇಡಿಕೆ, ಟ್ಯಾಂಕರ್ ಬಾಡಿಗೆ ಪಡೆದು ನೀರು ಪೂರೈಸಿದ ಬಿಬಿಎಂಪಿ

ನಗರದಲ್ಲಿ 1.95 ಲಕ್ಷ ಜನರು ಮಳೆ ನೀರು ಕೊಯ್ಲು ಯೋಜನೆ ಆಳವಡಿಸಿಕೊಳ್ಳಬೇಕಿತ್ತು. ಇವುಗಳಲ್ಲಿ 1.20 ಜನರು ಅಳವಡಿಕೆ ಮಾಡಿಕೊಂಡಿದ್ದಾರೆ. ಉಳಿದ 75 ಸಾವಿರ ಜನರು ಇನ್ನೂ ಅಳವಡಿಕೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಮಾಹಿತಿ ಹೇಳಿದ್ದಾರೆ.

English summary
Bangalore water supply and sewerage board (BWSSB) decided to hike penalty for those who not set up rainwater harvesting. Penalty will increase by 50% for domestic consumers and 100% for commercial establishments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X