ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಮ್ಮ ಮೆಟ್ರೋ' ಕೋಚ್‌ನೊಳಗೆ ನುಗ್ಗಿದ ಮಳೆ ನೀರು

|
Google Oneindia Kannada News

ಬೆಂಗಳೂರು, ಮೇ 07: ಬೆಂಗಳೂರಿನಲ್ಲಿ ಶುಕ್ರವಾರ ಸುರಿದ ಮಳೆಯಿಂದಾಗಿ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಕೋಚ್‌ಗಳಿಗೆ ಮಳೆ ನೀರು ನುಗ್ಗಿ ಪ್ರಯಾಣಿಕರನ್ನು ಸ್ಪಲ್ಪ ಹೊತ್ತು ಆತಂಕವನ್ನು ಉಂಟು ಮಾಡಿರುವ ಘಟನೆ ನಗರದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಮೂರನೇ ಪ್ಲಾಟ್‌ಫಾರ್ಮನಲ್ಲಿ ನಡೆದಿದೆ.

ರೈಲುಗಳಿಗೆ ನೀರು ನುಗ್ಗಿ ಬೋಗಿಗಳ ನೆಲದ ಮೇಲೆ ನೀರು ತುಂಬಿ ಅವಘಡ ಸಂಭವಿಸುವ ಸಾಧ್ಯತೆ ಇದೆ ಎಂದು ಪ್ರಯಾಣಿಕರು ಆತಂಕ ಪಟ್ಟಿದ್ದರು. ಮಳೆ ನೀರು ನುಗ್ಗಿರುವುದನ್ನು ಕಂಡು ಪ್ರಯಾಣಿಸುತ್ತಿದ್ದ ವೇಳೆ ಹೆದರಿ ಆತಂಕ ಪಟ್ಟಿದ್ದರು.

ಪ್ಲಾಟ್‌ಫಾರ್ಮ್ 3ರ ಒಂದು ಭಾಗವು ಓವರ್‌ಹೆಡ್ ಕವರ್ ಹೊಂದಿಲ್ಲದ ಕಾರಣ ಬೆಂಗಳೂರಿನಲ್ಲಿ ಸುರಿಯುವ ಮಳೆ ಸಮಯದಲ್ಲಿ ರೈಲುಗಳ ಕೊನೆಯ ಎರಡು ಮೆಟ್ರೋ ಬೋಗಿಗಳಿಗೆ ನೀರು ಪ್ರವೇಶಿಸುತ್ತದೆ. ಹೀಗಾಗಿ ಮಟ್ರೋ ರೈಲಿಗೆ ‍ಭಾರಿ ಮಳೆ ನೀರು ನುಗ್ಗಿ ನಿಲ್ಲುವ ನಿಂತ ನೀರಿನ ಸ್ಥಳಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಬೋಗಿ ತುಂಬಿದರೆ ನೀರು ಇಡೀ ರೈಲಿನ ಬೋಗಿಗಳು ತುಂಬಿ ಪ್ರವಾಹ ಎದುರಾಗಬಹುದು ಎಂದು ಮೆಟ್ರೋ ಪ್ರಯಾಣಿಕರು ಆತಂಕ ಪಟ್ಟಿದ್ದರು.

Bengaluru: Rainwater enters Namma metro coaches

ಇನ್ನು ಆತಂಕ್ಕಕೆ ಒಳಗಾಗಿದ್ದ ಪ್ರಯಾಣಿಕರೊಬ್ಬರು "ಇಂತಹ ಘಟನೆಗಳು ತುಂಬಾ ಅಪಾಯಕಾರಿ ಬಿಎಂಆರ್ಸಿಎಲ್ ಈ ಕುರಿತು ಗಂಭೀರವಾಗಿ ಈ ಸಮಸ್ಯೆಯನ್ನು ಸರಿಪಡಿಸಬೇಕು'' ಎಂದು ಆಗ್ರಹಿಸಿದರು.

Bengaluru: Rainwater enters Namma metro coaches

"ಈ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಬಹಳ ದಿನಗಳಿಂದ ತಿಳಿದಿತ್ತು. ಉಳಿದ ಪ್ಲಾಟ್‌ಫಾರ್ಮ್‌ಗಳಿಗೆ ಅವರು ಏಕೆ ಓವರ್‌ಹೆಡ್ ಶೆಲ್ಟರ್ ನಿರ್ಮಿಸಲು ಸಾಧ್ಯವಾಗಲಿಲ್ಲ? ಮೆಟ್ರೊ ರೈಲಿನ ನೆಲ ನುಣುಪಾಗಿದ್ದು, ಅಂತಹ ಮಹಡಿಯಲ್ಲಿ ನೀರು ನುಗ್ಗುವ ವೇಳೆ ಅವಘಡಗಳಿಗೆ ಕಾರಣವಾಗಬಹುದು. ಆದರೆ, ಇಂತಹ ಘಟನೆಗಳಿಂದ ಪ್ರಯಾಣಿಕರಿಗೆ ಸಾವು-ನೋವುಗಳು ಘಟನೆಗಳು ಸಂಭವಿಸಿದರೆ ಯಾರು ಹೊಣೆ,'' ಎಂದು ಮೆಟ್ರೋ ಪ್ರಯಾಣಿಕರು ಬಿಎಂಆರ್‍‌ಸಿಎಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bengaluru: Rainwater enters Namma metro coaches

ರೈಲಿನ ಕೋಚ್‌ ಒಳಗೆ ನೀರು ನುಗ್ಗಿರುವ ಬಗ್ಗೆ ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ ಚವಾಣ್ ಅವರನ್ನು ಪ್ರಶ್ನಿಸಿದಾಗ, "ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಮೆಟ್ರೋ ಬೋಗಿಗಳಲ್ಲಿ ಮಳೆ ನೀರು ನುಗ್ಗಿದರೆ ಯಾವುದೇ ರೀತಿಯ ವಿದ್ಯುತ್ ಅಪಾಯಗಳು ಸಂಭವಿಸುವುದಿಲ್ಲ,'' ಎಂದು ಅವರು ತಿಳಿಸಿದರು.

English summary
Oversight! Rainwater enters Bengaluru metro coaches As water enters the trains, passengers have expressed concern about possible accidents due to water on the floor of the coaches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X