ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಅ.4ರಂದು ಮಳೆ ಮುನ್ಸೂಚನೆ; Yellow ಅಲರ್ಟ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03 : ಸತತ ಮೂರು ದಿನಗಳಿಂದ ಬೆಂಗಳೂರು ನಗರದಲ್ಲಿ ಮಳೆಯಾಗುತ್ತಿದೆ. ಅಕ್ಟೋಬರ್ 4ರ ಶುಕ್ರವಾರವೂ ಸಹ ನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಬೆಂಗಳೂರು ನಗರದಲ್ಲಿ ಶುಕ್ರವಾರ ಭಾರಿ ಮಳೆಯಾಗಲಿದ್ದು, Yellow ಅಲರ್ಟ್ ಘೋಷಣೆ ಮಾಡಲಾಗಿದೆ. ನಗರದಲ್ಲಿ 7 ರಿಂದ 11 ಸೆಂ. ಮೀ. ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಲಾಗಿದೆ.

ಮುಂಗಾರು ಅಂತ್ಯ; ಕರ್ನಾಟಕದಲ್ಲಿ ಶೇ 23ರಷ್ಟು ಅಧಿಕ ಮಳೆಮುಂಗಾರು ಅಂತ್ಯ; ಕರ್ನಾಟಕದಲ್ಲಿ ಶೇ 23ರಷ್ಟು ಅಧಿಕ ಮಳೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕರ್ನಾಟಕದ ಪೂರ್ವ ಭಾಗದಲ್ಲಿ ಶುಕ್ರವಾರ ಭಾರಿ ಮಳೆಯಾಗಲಿದೆ. ಕಳೆದ ಮೂರು ದಿನಗಳಿಂದ ಬೆಂಗಳೂರು ನಗರದಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿದೆ.

ಬೆಂಗಳೂರಲ್ಲಿ ಮತ್ತೆರೆಡು ದಿನ ಭಾರಿ ಮಳೆ ಸಾಧ್ಯತೆಬೆಂಗಳೂರಲ್ಲಿ ಮತ್ತೆರೆಡು ದಿನ ಭಾರಿ ಮಳೆ ಸಾಧ್ಯತೆ

ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಬೆಂಗಳೂರು ನಗರದ ದಕ್ಷಿಣ ಭಾಗದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಹಲವು ಬಡಾವಣೆಗಳು ಜಲಾವೃತಗೊಂಡಿದ್ದವು. ಮನೆಗಳಿಗೆ ನೀರು ನುಗ್ಗಿ ಜನರು ರಾತ್ರಿಯಿಡೀ ಜಾಗರಣೆ ಮಾಡಿದ್ದರು.

Exclusive: 'ಪ್ರಧಾನಿ ನಿಧಿ'ಯೇ ಖೋತಾ ಆಗಿರುವಾಗ ಪ್ರವಾಹ ಪರಿಹಾರ ನೀಡೋಕೆ ಹೇಗೆ ಸಾಧ್ಯ?Exclusive: 'ಪ್ರಧಾನಿ ನಿಧಿ'ಯೇ ಖೋತಾ ಆಗಿರುವಾಗ ಪ್ರವಾಹ ಪರಿಹಾರ ನೀಡೋಕೆ ಹೇಗೆ ಸಾಧ್ಯ?

ಬಿಬಿಎಂಪಿಯ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ. ಮಳೆ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವುದು ಅವರ ಮುಂದಿರುವ ಮೊದಲ ಸವಾಲು ಆಗಿದೆ.

ಮಂಗಳವಾರವೂ ಭಾರಿ ಮಳೆ

ಮಂಗಳವಾರವೂ ಭಾರಿ ಮಳೆ

ಮಂಗಳವಾರ ರಾತ್ರಿ ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗಿತ್ತು. ರಾತ್ರಿ 9.30ರ ಸುಮಾರಿಗೆ ಮತ್ತು ಬುಧವಾರ ಮುಂಜಾನೆ 1 ಗಂಟೆ ಸುಮಾರಿಗೆ ಗುಡುಗು ಸಹಿತ ಮಳೆಯಾಗಿತ್ತು. ಇದರಿಂದಾಗಿ ಹಲವು ಪ್ರದೇಶಗಳಲ್ಲಿ ಮರಗಳು ಧರೆಗುರುಳಿದ್ದವು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು.

ಎಲ್ಲಿ ಎಷ್ಟು ಮಳೆಯಾಗಿದೆ?

ಎಲ್ಲಿ ಎಷ್ಟು ಮಳೆಯಾಗಿದೆ?

ಮಂಗಳವಾರ ರಾತ್ರಿ ಮತ್ತು ಬುಧವಾರ ಮುಂಜಾನೆ ಕೆಂಗೇರಿಯಲ್ಲಿ 30, ಚಾಮರಾಜಪೇಟೆ, ವಿದ್ಯಾಪೀಠದಲ್ಲಿ 22, ಸಾರಕ್ಕಿಯಲ್ಲಿ 13, ಜಯನಗರ, ಯಶವಂತಪುರ, ವಿಜಯನಗರದಲ್ಲಿ 8 ಮಿ. ಮೀ. ಮಳೆಯಾಗಿತ್ತು. ಮಳೆಯಿಂದಾಗಿ ನಗರದ ತಾಪಮಾನವೂ ಕಡಿಮೆಯಾಗಿತ್ತು.

ಚಂಡಮಾರುತದ ಸೂಚನೆ

ಚಂಡಮಾರುತದ ಸೂಚನೆ

ತಮಿಳುನಾಡು ರಾಜ್ಯದ ಕರಾವಳಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿದೆ. ಚಂಡಮಾರುತದ ಸೂಚನೆ ಇದೆ. ಆದ್ದರಿಂದ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನೂ ಎರಡು ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆ ನೀಡಲಾಗಿದೆ.

ಬಿಬಿಎಂಪಿಗೆ ಹೊಸ ಮೇಯರ್

ಬಿಬಿಎಂಪಿಗೆ ಹೊಸ ಮೇಯರ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಗೌತಮ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ. ಮೇಯರ್‌ಗೆ ಮಳೆ ಸ್ವಾಗತ ನೀಡುತ್ತಿದ್ದು, ಅದನ್ನು ಸರಿಯಾಗಿ ನಿಭಾಯಿಸುವುದೇ ಅವರ ಮುಂದಿನ ಮೊದಲ ಸವಾಲಾಗಿದೆ.

English summary
The India Meteorological Department (IMD) issued yellow alert for Bengaluru city of Karnataka on October 3, 2019. Bengaluru witnessed for rain from past three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X