ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರಾಕಾರ ಮಳೆಗೆ ತತ್ತರಿಸಿದ ಬೆಂಗಳೂರು, ಹವಾಮಾನ ಮುನ್ಸೂಚನೆಯೇನು?

ಸರಿ ಸುಮಾರು ಬೆಂಗಳೂರಿನ ಎಲ್ಲಾ ಭಾಗಗಳಲ್ಲೂ ಮಳೆ ಸುರಿದಿದೆ. ಸಂಜೆ ವೇಳೆಗೆ ಏಕಾಏಕಿ ಮೋಡ ಕವಿದ ವಾತಾವರಣ ಉಂಟಾಗಿ ರಾತ್ರಿಯಾಗುತ್ತಿದ್ದಂತೆ ಭಾರೀ ಗಾಳಿ ಬೀಸಲು ಆರಂಭಿಸಿತು. ಬೆನ್ನಿಗೆ ಮಳೆಯೂ ಬಂತು. ಗಾಳಿಯ ರಭಸಕ್ಕೆ ಮರಗಳು ಧರೆಗುರುಳಿವೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 27: ಶುಕ್ರವಾರ ರಾತ್ರಿ ಇಡೀ ಸುರಿದ ಗಾಳಿ, ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದೆ. ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯದ ಜತೆಗೆ ಸರಕಾರ ಹಾಗೂ ಸಾರ್ವಜನಿಕರ ಆಸ್ತಿ ಪಾಸ್ತಿಗೆ ನಷ್ಟ ಉಂಟಾಗಿದೆ.

ಸರಿ ಸುಮಾರು ಬೆಂಗಳೂರಿನ ಎಲ್ಲಾ ಭಾಗಗಳಲ್ಲೂ ಮಳೆ ಸುರಿದಿದೆ. ಸಂಜೆ ವೇಳೆಗೆ ಏಕಾಏಕಿ ಮೋಡ ಕವಿದ ವಾತಾವರಣ ಉಂಟಾಗಿ ರಾತ್ರಿಯಾಗುತ್ತಿದ್ದಂತೆ ಭಾರೀ ಗಾಳಿ ಬೀಸಲು ಆರಂಭಿಸಿತು. ಬೆನ್ನಿಗೆ ಮಳೆಯೂ ಬಂತು. ಗಾಳಿಯ ರಭಸಕ್ಕೆ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಬಿಬಿಎಂಪಿ ಸಹಾಯವಾಣಿಯ ಪ್ರಕಾರ 20ಕ್ಕೂ ಹೆಚ್ಚು ಕಡೆ ಮರಗಳು ಉರುಳಿದ ದೂರುಗಳು ಬಂದಿವೆ. 30ಕ್ಕೂ ಹೆಚ್ಚು ಕಡೆ ಕೊಂಬೆಗಳು ಬಿದ್ದಿದ್ದಾಗಿ ಜನರು ಕರೆ ಮಾಡಿ ಸಹಾಯವಾಣಿಗೆ ಹೇಳಿದ್ದಾರೆ.

Rain with storm hits Bengaluru, People faced power cut, traffic jam

ಕಾರುಗಳ ಮೇಲೆ ಮರಗಳು ಉರುಳಿ ಹಾನಿ ಸಂಭವಿಸಿದರೆ, ಇನ್ನೂ ಕೆಲವು ಕಡೆ ಕರೆಂಟ್ ಕಂಬಗಳು ಬಿದ್ದಿವೆ. ಕಂಬಗಳು ಧರೆಗುರುಳಿದ ಕಡೆಗಳಲ್ಲಿ ರಾತ್ರಿ ಇಡೀ ವಿದ್ಯುತ್ ವ್ಯತ್ಯಯ ಕಂಡು ಬಂತು. ಇನ್ನು ಹಲವಾರು ಪ್ರದೇಶಗಳಲ್ಲಿ 2- 4 ಗಂಟೆ ವರೆಗೆ ವಿದ್ಯುತ್ ಕಡಿತ ಅನುಭವಿಸಬೇಕಾಯಿತು.

ಶುಕ್ರವಾರದ ಮಳೆಯ ಮುಖ್ಯ ಅಂಶಗಳು

* ಕಸ್ತೂರ್ಬಾ ರಸ್ತೆಯಲ್ಲಿ ಕಾರಿನ ಮೇಲೆಯೇ ಮರ ಬಿದ್ದಿದೆ. ಆದರೆ ಚಾಲಕ ಅದೃಷ್ಟಾವಶಾತ್ ಪಾರಾಗಿದ್ದಾರೆ.
* ಜೆಸಿ ರಸ್ತೆಯ ನಯನ ಎಂಬ ಸಭಾಂಗಣದಲ್ಲಿ ನಾಟಕ ನಡೆಯುತ್ತಿತ್ತು. ಆದರೆ ನಾಟಕದ ಮಧ್ಯೆ ಸಭಾಂಗಣಕ್ಕೇ ನೀರು ನುಗ್ಗಿದ್ದರಿಂದ ಬೇರೆ ದಾರಿ ಕಾಣದ ಡ್ರಾಮಾ ನಿಲ್ಲಿಸಲಾಯಿತು.
* ಇನ್ನು ಎಂದಿನಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡು ಬಂತು.
* ರಾಜರಾಜೇಶ್ವರಿ ನಗರದ ದೊಡ್ಡ ಬಿದಿರಕಲ್ಲು ಸುತ್ತ ಮುತ್ತ 8.95 ಸೆಂಟಿ ಮೀಟರ್ ಹಾಗೂ ಸಂಪಂಗಿರಾಮನಗರ ಪರಿಸರದಲ್ಲಿ 7.15 ಸೆಂಟಿ ಮೀಟರ್ ಮಳೆಯಾಗಿದೆ.

ನಾಳೆಯೂ ಮಳೆ!

ಗುರುವಾರದ ವೇಳೆಗೆ ಬೆಂಗಳೂರಿನಲ್ಲಿ ಸರಾಸರಿ ಬಿದ್ದ ಮಳೆಯ ಪ್ರಮಾಣ 11.84 ಸೆಂಟಿ ಸೆಂಟಿಮೀಟರ್. ಇದು ಮೇ ತಿಂಗಳ ಸಾಮಾನ್ಯ ಸರಾಸರಿ 10.7ಕ್ಕಿಂತಲೂ ಹೆಚ್ಚು.

ಶುಕ್ರವಾರ ಧಾರಾಕಾರ ಮಳೆ ಬರುವುದಾಗಿ ಹೇಳಿದ್ದ ಸ್ಕೈಮೆಟ್ ವೆದರ್ ಶನಿವಾರ ಸಂಜೆಯೂ ಮಳೆ ಸುರಿಯಲಿದೆ ಎಂದು ಹೇಳಿದೆ. ಜತೆಗೆ ಗಾಳಿಯೂ ಬೀಸಲಿದೆ ಎಂದು ಎಚ್ಚರಿಕೆ ನೀಡಿದೆ.

ಇನ್ನು ಮೇನಿಂದ ಅಕ್ಟೋಬರ್ ವರೆಗೆ ಸಿಲಕಾನ್ ಸಿಟಿಗೆ ಈ ಬಾರಿ ಭರ್ಜರಿ ಮಳೆಯ ದರ್ಶನವಾಗಲಿದೆ ಎಂದು ಸ್ಕೈಮೆಟ್ ಹೇಳಿದೆ.

English summary
Due to heavy rain in Bengaluru on ೵Friday night trees are fall down. Traffic jam and power cut problem faced by many Bangaluru people. As per the skymet weather report Bengaluru will also face rain in next 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X