ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಹಲವೆಡೆ ಭಾನುವಾರ ಬೆಳಗಿನ ಜಾವ ಸುರಿದ ಮಳೆ

|
Google Oneindia Kannada News

ಬೆಂಗಳೂರು, ಮೇ 12: ನಗರದ ಹಲವೆಡೆ ಶನಿವಾರ ಮಳೆಯಾಗಿ ಕಾದಿದ್ದ ಬೆಂಗಳೂರಿಗೆ ತಂಪು ನೀಡಿತ್ತು. ಭಾನುವಾರ ಬೆಳಗ್ಗೆ ಕೂಡ ಕೆಲವು ಕಡೆ ಮಳೆ ಮುಂದುವರೆದಿದೆ. ಭಾನುವಾರ ಬೆಳಗಿನ ಜಾವ ಮಳೆಯ ಆಗಮನವಾಗಿದೆ. ವಾತಾವರಣದ ಸಧ್ಯಕ್ಕಂತೂ ಕೂಲ್ ಆಗಿದೆ.

ಇನ್ನು ಮೂರು ದಿನಗಳ ಕಾಲ ರಾಜ್ಯದ ಒಳನಾಡಿನಲ್ಲಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿಬಿಎಂಪಿಯಲ್ಲಿ ಮಳೆ ಹಾನಿ ನಿರ್ವಹಣೆಗೆ ಪ್ರತ್ಯೇಕ ತಂಡ ರಚನೆ ಬಿಬಿಎಂಪಿಯಲ್ಲಿ ಮಳೆ ಹಾನಿ ನಿರ್ವಹಣೆಗೆ ಪ್ರತ್ಯೇಕ ತಂಡ ರಚನೆ

ಬೆಂಗಳೂರು ನಗರದ ಬಾಣಸವಾಡಿ, ಶಾಂತಿನಗರ, ಮಲ್ಲೇಶ್ವರಂ, ಕಾರ್ಪೊರೇಷನ್, ಮೆಜಸ್ಟಿಕ್, ಆನೇಕಲ್, ಯಶವಂತಪುರ, ಹೆಬ್ಬಾಳ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು, ಏಕಾಏಕಿ ಮಳೆ ಆರಂಭವಾದ ಪರಿಣಾಮ ವಾಹನ ಸವಾರರು ಪರದಾಟ ನಡೆಸಿದರು. ಇತ್ತ ಸಂಜೆ ವೇಳೆಗೆ ಕೋಲಾರ ಜಿಲ್ಲೆಯ ಕೆಲವೆಡೆ ಮಳೆರಾಯನ ಆರ್ಭಟ ಜೋರಾಗಿತ್ತು.

Rain will continue another two three days

ಉತ್ತಮ ಭರಣಿ ಮಳೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಸುಮಾರು 30 ನಿಮಿಷಗಳ ಕಾಲ ಗುಡುಗು ಸಹಿತ ಸುರಿದ ಮಳೆಗೆ ಜಿಲ್ಲೆಯ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಇನ್ನೆಷ್ಟು ದಿನ ಬಿಸಿಗಾಳಿ ಮುಂದುವರೆಯುತ್ತೆ? ಇಲ್ಲಿದೆ ಮಾಹಿತಿದೇಶದಲ್ಲಿ ಇನ್ನೆಷ್ಟು ದಿನ ಬಿಸಿಗಾಳಿ ಮುಂದುವರೆಯುತ್ತೆ? ಇಲ್ಲಿದೆ ಮಾಹಿತಿ

ಬೆಂಗಳೂರು ನಗರದಲ್ಲಿ ಇಂದು ರಾತ್ರಿ ಕೂಡ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಗುಡುಗು, ಗಾಳಿ ಸಹಿತ ಮಳೆಯಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜಧಾನಿಯಲ್ಲಿ ಸುರಿದ ಧಾರಾಕಾರ ಮಳೆ, ಎಲ್ಲೆಲ್ಲಿ ಅವಾಂತರರಾಜಧಾನಿಯಲ್ಲಿ ಸುರಿದ ಧಾರಾಕಾರ ಮಳೆ, ಎಲ್ಲೆಲ್ಲಿ ಅವಾಂತರ

ರಾಜ್ಯದ ಕೋಲಾರ, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆಯ ಹಲವು ಪ್ರದೇಶದಲ್ಲಿ ಸಂಜೆ ವೇಳೆಗೆ ಮಳೆಯಾಗಿದ್ದು, ಮೂರು ದಿನಗಳ ಕಾಲ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

English summary
Pre-Monsoon rain in Bengaluru, Mysore and Hassan for the next three days Pre Monsoon rain in Bengaluru to continue for next two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X