ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ

By Ashwath
|
Google Oneindia Kannada News

ಬೆಂಗಳೂರು, ಮೇ. 8: ಕಳೆದ ಎರಡು ದಿನದಲ್ಲಿ ತುಂತುರು ಮಳೆಯಾಗುತ್ತಿದ್ದ ರಾಜಧಾನಿಯಲ್ಲಿ ಮೇ.8 ರಂದು ತುಸು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಹವಾಮಾನ ಇಲಾಖೆ ನಿನ್ನೆಯೇ ಬೆಂಗಳೂರಿನಲ್ಲಿ ಮಳೆ ಬರಲಿರುವ ಬಗ್ಗೆ ಮುನ್ಸೂಚನೆ ನೀಡಿದ್ದರೂ, ಬಹಳಷ್ಟು ಮಂದಿ ಮಳೆಯಲ್ಲಿ ಒದ್ದೆಯಾಗಿ ಓಡಾಡುವುದು ನಗರದಲ್ಲಿ ಸಾಮಾನ್ಯವಾಗಿತ್ತು.

ರಾಜ್ಯದಲ್ಲಿ ಹಲವೆಡೆ ಭಾರೀ ಮಳೆಯಾಗಿದೆ. ತುಮಕೂರಿನ ಪಾವಗಡದ ಸಿ.ಕೆ.ಪುರದಲ್ಲಿ ಗಾಳಿ ಮಳೆಗೆ ಆರು ನೂರಕ್ಕೂ ಅಧಿಕ ಅಡಿಕೆ ಮರಗಳು ನೆಲಕ್ಕೆ ಉರುಳಿದೆ. ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆ ಆರ್ಭಟ ಜೋರಾಗಿದೆ. ಮುಂದಿನ 24 ಗಂಟೆಯಲ್ಲಿ ತೀರ ಪ್ರದೇಶದಲ್ಲಿ ಭಾರೀ ಗಾಳಿ ಮಳೆಯಾಗಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮೀನುಗಾರರಿಗೆ ಎಚ್ಚರಿಕೆ

ಮೀನುಗಾರರಿಗೆ ಎಚ್ಚರಿಕೆ

ಮುಂದಿನ 24 ಗಂಟೆಯಲ್ಲಿ ತೀರ ಪ್ರದೇಶದಲ್ಲಿ ಭಾರೀ ಗಾಳಿ ಮಳೆಯಾಗಲಿದೆ. 45-50 ಕಿ.ಮೀ ವೇಗದಲ್ಲಿ ಬೀಸುತ್ತಿದ್ದ ಗಾಳಿ 50-60 ಕಿ.ಮೀ ವೇಗದಲ್ಲಿ ಬೀಸಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯಬೇಡಿ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

 ಮತ್ತಷ್ಟು ಮಳೆ

ಮತ್ತಷ್ಟು ಮಳೆ

ಮೇ.8 ಮತ್ತು ಮೇ.9ರಂದು ಕರಾವಳಿ, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಕಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ಬೆಂಗಳೂರಿನಲ್ಲಿ ಮಳೆ ಮುಂದುವರಿಕೆ

ಬೆಂಗಳೂರಿನಲ್ಲಿ ಮಳೆ ಮುಂದುವರಿಕೆ

ಬೆಂಗಳೂರಿನಲ್ಲಿ ಮುಂದಿನ 24 ಗಂಟೆಯಲ್ಲಿ ಮೋಡ ಕವಿದ ವಾತವರಣವಿರಲಿದ್ದು, ಹಲವೆಡೆ ಮಳೆಯಾಗಲಿದೆ ಹವಾಮಾನ ಇಲಾಖೆ ತಿಳಿಸಿದೆ.

 ಅತಿ ಹೆಚ್ಚು ಮಳೆಯಾದ ಸ್ಥಳಗಳು ಸೆಂ.ಮಿನಲ್ಲಿ

ಅತಿ ಹೆಚ್ಚು ಮಳೆಯಾದ ಸ್ಥಳಗಳು ಸೆಂ.ಮಿನಲ್ಲಿ

ಗೋಕರ್ಣ( ಉತ್ತರ ಕನ್ನಡ) 13, ಮುಳ್ಳಯನ ಗಿರಿ ( ಚಾಮರಾಜನಗರ) 11 ಸೆಂ.ಮೀ ಮಳೆಯಾಗಿದೆ.

 ಮಳೆ ಪ್ರಮಾಣ ಸೆಂ.ಮೀನಲ್ಲಿ

ಮಳೆ ಪ್ರಮಾಣ ಸೆಂ.ಮೀನಲ್ಲಿ

ಖಾನಾಪುರ (ಬೆಳಗಾವಿ, ಹಾನಗಲ್‌, ಹಿರೇಕೆರೂರು (ಹಾವೇರಿ) 5 ; ಸಿದ್ದಾಪುರ (ಉತ್ತರ ಕನ್ನಡ ) ಹಾವೇರಿ, (ಶಿವಮೊಗ್ಗ) 4 ; ಶಿರಸಿ (ಉತ್ತರ ಕನ್ನಡ ), ಶಿಕಾರಿಪುರ (ಶಿವಮೊಗ್ಗ , ಕೊಟ್ಟಿಗೆಹಾರ (ಚಿಕ್ಕಮಗಳೂರು), ದಾವಣಗೆರೆ, 3ಸೆಂ.ಮೀ ಮಳೆಯಾಗಿದೆ.

ಮಳೆ ಪ್ರಮಾಣ ಸೆಂ.ಮೀನಲ್ಲಿ

ಮಳೆ ಪ್ರಮಾಣ ಸೆಂ.ಮೀನಲ್ಲಿ

ಬಂಟ್ವಾಳ, ಮಾಣಿ, ಧರ್ಮಸ್ಥಳ (ದಕ್ಷಿಣ ಕನ್ನಡ),ಹೊನ್ನಾವರ, ಕುಮಟಾ, ಅಂಕೋಲಾ, ಬನವಾಸಿ(ಉತ್ತರ ಕನ್ನಡ), ಹುಬ್ಬಳ್ಳಿ, ಬ್ಯಾಡಗಿ (ಹಾವೇರಿ), ಆಲಮಟ್ಟಿ (ಬಿಜಾಪುರ) 2 ಸೆಂ.ಮೀ ಮಳೆಯಾಗಿದೆ.

English summary
Rain/thundershowers would occur at most places over Coastal & South Interior Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X