ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋಡಹೊದ್ದ ಆಗಸದಿಂದ ಕೊನೆಗೂ ಬಿತ್ತು ಮುಂಗಾರಿನ ಪುಟ್ಟ ಹನಿಗಳು

|
Google Oneindia Kannada News

ಬೆಂಗಳೂರು, ಜೂನ್ 14: ಕಳೆದ ಮೂರ್ನಾಲ್ಕು ದಿನಗಳಿಂದ ಮೋಡಹೊದ್ದು ಮಲಗಿದ್ದ ಆಗಸ ಈಗ ಸ್ವಲ್ಪ ಕಣ್ಣು ತೆರೆದು ಮಳೆಯ ಹನಿಯನ್ನೂ ನೀಡಿದೆ.

ಜಯನಗರ, ಬನಶಂಕರಿ, ಮೆಜೆಸ್ಟಿಕ್, ಮಲ್ಲೇಶ್ವರ, ಕೆಂಗೇರಿ, ಉತ್ತರ ಹಳ್ಳಿ ಸಮೀಪ ಸಣ್ಣ ಮಳೆಯಾಗಿದೆ. ಮಡಕೇರಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗೆ ಮುಂಗಾರು ಆವರಿಸಿ ಮಳೆ ಬಂದಿದ್ದರೂ ಬೆಂಗಳೂರಿಗೆ ಇನ್ನೂ ಮುಂಗಾರು ಪ್ರವೇಶವಾಗಿರಲಿಲ್ಲ, ಒಂದೆರೆಡು ಬಾರಿ ಗುಡುಗಿನಿಂದ ಕೂಡಿದ ಮುಂಗಾರು ಪೂರ್ವ ಮಳೆ ಮಾತ್ರ ಬಂದಿತ್ತು. ಇದೀಗ ಸಣ್ಣ ಮಳೆ ಬರುತ್ತಿರುವುದು ಮುಂಗಾರು ಆಗಮನವಾದಂತಿದೆ.

ಗುಜರಾತ್ ಬಿಟ್ಟು ಪಾಕಿಸ್ತಾನದೆಡೆಗೆ ಪಥ ಬದಲಿಸಿದ 'ವಾಯು' ಚಂಡಮಾರುತಗುಜರಾತ್ ಬಿಟ್ಟು ಪಾಕಿಸ್ತಾನದೆಡೆಗೆ ಪಥ ಬದಲಿಸಿದ 'ವಾಯು' ಚಂಡಮಾರುತ

ಬೆಂಗಳೂರು ಕೇಂದ್ರಭಾಗದಲ್ಲಿ 29.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 29.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ , 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ, ಎಚ್‌ಎಎಲ್‌ನಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ, 21.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Rain started across the Bengaluru

ವಾಯು ಚಂಡಮಾರುತದ ಪರಿಣಾಮ ಉಡುಪಿಯಲ್ಲಿ 11 ಸೆಂ.ಮೀ, ಕುಂದಾಪುರ, ಅಂಕೋಲಾ, ಕಾರವಾರದಲ್ಲಿ 9 ಸೆಂ,ಮೀ, ಪಣಂಬೂರು, ಮೂಡಬಿದಿರೆ, ಉಪ್ಪಿನಂಗಡಿ, ಭಟ್ಕಳ, ಗೋಕರ್ಣ, ವಿರಾಜಪೇಟೆ, ಕೊಟ್ಟಿಗೆಹಾರದಲ್ಲಿ ತಲಾ 7 ಸೆಂ.ಮೀನಷ್ಟು ಮಳೆಯಾಗಿದೆ.

English summary
After seeing four-five days clouds finally Karnataka, Bengaluru got rains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X