ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಬೆಂಗಳೂರು ಮಳೆ, ಸಮಸ್ಯೆ ಎದುರಿಸಲು ಸಚಿವರ ತಂಡ ರಚನೆ

|
Google Oneindia Kannada News

ಬೆಂಗಳೂರು, ಮೇ 20; ಬೆಂಗಳೂರು ನಗರದಲ್ಲಿ ಮಳೆ ಅವಾಂತರ ಮಾಡಿದೆ. ಸರ್ಕಾರ ಮತ್ತು ಬಿಬಿಎಂಪಿ ಮಳೆ ಪರಿಸ್ಥಿತಿ ನಿರ್ವಹಣೆ ಮಾಡುತ್ತಿರುವ ವಿಚಾರ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದಲ್ಲಿನಮಳೆ ಪರಿಸ್ಥಿತಿ ನಿರ್ವಹಣೆಗೆ ಸಚಿವರ ತಂಡವನ್ನು ರಚನೆ ಮಾಡಿದ್ದಾರೆ. ಬೆಂಗಳೂರು ನಗರದ 8 ವಲಯಗಳಿಗೆ ಏಳು ಸಚಿವರ ಟಾಸ್ಕ್ ಫೋರ್ಸ್‌ ರಚನೆ ಮಾಡಿದ್ದಾರೆ.

ಹವಾಮಾನ ಬದಲಾವಣೆ: ಮೇ 21ರ ನಂತರ 'ರಕ್ತ ಮಳೆ' ಎಚ್ಚರಿಕೆ ಹವಾಮಾನ ಬದಲಾವಣೆ: ಮೇ 21ರ ನಂತರ 'ರಕ್ತ ಮಳೆ' ಎಚ್ಚರಿಕೆ

ಮಳೆ ಅನಾಹುತಗಳ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 8 ವಲಯಗಳಿಗೆ ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಮಳೆ ಅವಾಂತರ: ಬೆಂಗಳೂರಿನ 8 ವಲಯಗಳಿಗೆ ಸಚಿವರ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ಮಳೆ ಅವಾಂತರ: ಬೆಂಗಳೂರಿನ 8 ವಲಯಗಳಿಗೆ ಸಚಿವರ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್

Rain In Bengaluru CM Forms Task Force To Monitor Situation

ಇದರಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಬೆಂಗಳೂರು ಮಳೆ: ಬಿಬಿಎಂಪಿ, ಬೆಸ್ಕಾಂ ಸಹಾಯವಾಣಿಗೆ ದೂರುಗಳ ಸುರಿಮಳೆ ಬೆಂಗಳೂರು ಮಳೆ: ಬಿಬಿಎಂಪಿ, ಬೆಸ್ಕಾಂ ಸಹಾಯವಾಣಿಗೆ ದೂರುಗಳ ಸುರಿಮಳೆ

ಕಾರ್ಯಪಡೆ ವಿವರ
* ಆರ್ ಅಶೋಕ್ - ದಕ್ಷಿಣ ವಲಯ
* ಡಾ. ಅಶ್ವಥ್ ನಾರಾಯಣ್ - ಪೂರ್ವ ವಲಯ
* ವಿ. ಸೋಮಣ್ಣ - ಪಶ್ಚಿಮ ವಲಯ
* ಎಸ್. ಟಿ. ಸೋಮಶೇಖರ್ - ಆರ್ ಆರ್ ನಗರ ವಲಯ
* ಬೈರತಿ ಬಸವರಾಜ್ - ಮಹದೇವಪುರ ವಲಯ
* ಗೋಪಾಲಯ್ಯ - ಬೊಮ್ಮನಹಳ್ಳಿ ವಲಯ
* ಮುನಿರತ್ನ - ಯಲಹಂಕ ಮತ್ತು ದಾಸರಹಳ್ಳಿ ವಲಯ

ಪೂರ್ವ ವಲಯದ ಕಥೆ ಏನು?; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಅಶ್ವಥ ನಾರಾಯಣಗೆ ಪೂರ್ವವಲಯ ಉಸ್ತುವಾರಿ ನೀಡಿದ್ದಾರೆ. ಆದರೆ ಸಚಿವರು ವಿದೇಶ ಪ್ರವಾಸದಲ್ಲಿದ್ದಾರೆ. ಈಗಾಗಲೇ ಲಂಡನ್ ಪ್ರವಾಸದಲ್ಲಿರುವ ಅವರು, ಮುಖ್ಯಮಂತ್ರಿಗಳ ಜೊತೆ ದಾವೋಸ್ ಪ್ರವಾಸಕ್ಕೂ ತೆರಳಲಿದ್ದಾರೆ.

ವಿದೇಶದಿಂದ ವಾಪಸ್ ಬರಲು ಇನ್ನೂ 5 ದಿನಗಳು ಬೇಕು. ಸಚಿವರು ವಿದೇಶದಿಂದ ವಾಪಸ್ ಆಗುವ ತನಕ ಪೂರ್ವ ವಲಯ ಯಾರು ನೋಡಿಕೊಳ್ಳುತ್ತಾರೆ? ಎನ್ನುವ ಪಶ್ನೆಗೆ ಉತ್ತರವಿಲ್ಲ.

English summary
Karnataka chief minister Basavaraj Bommai formed minister task force to monitor the situation of Bengaluru rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X