ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ಉದ್ಯಾನ ನಗರಿಯಲ್ಲಿ ಸೆ. 26ರ ರಾತ್ರಿ ಶುರುವಾದ ಮಳೆ ಮುಂಜಾನೆವರೆಗೂ ಸುರಿದು ಭಾರೀ ಅವಾಂತರ ಸೃಷ್ಟಿಸಿದೆ.

ಹಲವಾರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರ ಜೀವನ ಅಸ್ತವ್ಯಸ್ತವಾಗಿರುವುದಲ್ಲದೆ, ಜೆಪಿ ನಗರದಲ್ಲಿ ಅಪಾರ್ಟ್ ಮೆಂಟ್ ನ ಗೋಡೆ ಕುಸಿದ ಪರಿಣಾಮವಾಗಿ, ಎರಡು ಮನೆಗಳ ಜನರಿಗೆ ತೊಂದರೆಯಾಗಿದೆ.

ಕಳೆದ 24 ದಿನಗಳಲ್ಲಿ ಬೆಂಗಳೂರಲ್ಲಿ 376 ಮಿ.ಮೀ. ಮಳೆ!ಕಳೆದ 24 ದಿನಗಳಲ್ಲಿ ಬೆಂಗಳೂರಲ್ಲಿ 376 ಮಿ.ಮೀ. ಮಳೆ!

Rain havoc in Bengaluru again on 26th September 2017

ಗೋಡೆಯ ಅವಶೇಷಗಳು ಎರಡೂ ಮನೆಗಳ ಬಾಗಿಲಿಗೇ ಬಂದು ಬಿದ್ದಿರುವುದರಿಂದ ಆ ಮನೆಗಳ ಸದಸ್ಯರು ಮನೆಯೊಳಗೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಕರ್ನಾಟಕದಲ್ಲಿ ಇನ್ನೂ 4 ದಿನ ಮುಂದುವರಿಯಲಿದೆ ವರುಣನ ಆರ್ಭಟಕರ್ನಾಟಕದಲ್ಲಿ ಇನ್ನೂ 4 ದಿನ ಮುಂದುವರಿಯಲಿದೆ ವರುಣನ ಆರ್ಭಟ

ಇನ್ನುಳಿದಂತೆ, ನಾಯಂಡಹಳ್ಳಿ, ವಿಜಯ ನಗರ, ನಾಗರಭಾವಿ, ಜಯನಗರ, ಕೆ.ಆರ್. ಮಾರುಕಟ್ಟೆ, ಸುಮನಹಳ್ಳಿ ಮುಂತಾದೆಡೆ ರಾತ್ರಿಯಿಡೀ ಮಳೆ ಸುರಿದಿದ್ದರಿಂದ ತಗ್ಗು ಪ್ರದೇಶಗಳಿಗೆ ನೀರು ಹರಿದು ಮನೆಗಳಿಗೆ ನೀರು ನುಗ್ಗಿ ಜನರಿಗೆ ತೊಂದರೆಯಾಗಿದೆ.

ಚಂದ್ರಾ ಲೇಔಟ್ ನಲ್ಲಿ ಹಾಸ್ಟೆಲೊಂದರ ಗೋಡೆ ಕುಸಿದ ಪರಿಣಾಮವಾಗಿ, ಗೋಡೆ ಪಕ್ಕದಲ್ಲಿ ಎಂದಿನಂತೆ ನಿಲ್ಲಿಸಲಾಗಿದ್ದ ಆರು ಬೈಕು, ಎರಡು ಕಾರುಗಳು ಜಖಂ ಆಗಿವೆ.

ಕೋರಮಂಗಲದ 4ನೇ ಬ್ಲಾಕ್ ನ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತಿದ್ದು ವಾಹನ ಚಾಲಕರಿಗೆ, ಪಾದಚಾರಿಗಳಿಗೆ ತೊಂದರೆಯಾಗಿದೆ.

English summary
Rain creates havoc in Bengaluru again. As it showered overnight on September 26th, 2017, normal life of people has been greatly disturbed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X