ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮುಂದುವರೆದ ತಡರಾತ್ರಿ ಮಳೆ ಅಬ್ಬರ, ಜನತೆ ತತ್ತರ

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ನಗರದಲ್ಲಿ ಸೋಮವಾರವೂ ಗುಡುಗು ಸಹಿತ ಮಳೆ ಮುಂದುವರಿದಿದೆ. ಹಲವೆಡೆ ಮಳೆಯಿಂದಾಗಿ ಮರಗಳು ಧರೆಗುರುಳಿದ್ದು, ಬೀದಿಗಳು ಜಲಾವೃತವಾಗಿದೆ. ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿರುವಾಗ ಈಗ ಮಳೆಯ ಕಾರಣದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ. ಸೋಮವಾರ ಸಂಜೆ ಸುಮಾರು ಒಂದು ಗಂಟೆ ಕಾಲ ಹಲವೆಡೆ ಮಳೆ ಸುರಿದಿದೆ. ಭಾರಿ ಮಳೆಯಿಂದ ಉಂಟಾದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ದುರ್ಘಟನೆಯೂ ನಡೆದಿದೆ.

ದಕ್ಷಿಣ ಬೆಂಗಳೂರಿನ ವಿದ್ಯಾಪೀಠ ವಾರ್ಡ್‌ನಲ್ಲಿ 35.50 ಮಿಮೀ ಮತ್ತು ಕೆಂಗೇರಿಯಲ್ಲಿ 32 ಮಿಮೀ ಮಳೆಯಾಗಿದೆ. ಉತ್ತರ ಬೆಂಗಳೂರಿನ ಜಕ್ಕೂರು ಮತ್ತು ವಿದ್ಯಾರಣ್ಯಪುರದಲ್ಲಿ ಕ್ರಮವಾಗಿ 26.50 ಮಿ.ಮೀ ಮತ್ತು 24.50 ಮಿ.ಮೀ ಮಳೆಯಾಗಿದೆ.

ಬೆಂಗಳೂರು ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ಕಟ್; ಯಾವ-ಯಾವ ಏರಿಯಾ?ಬೆಂಗಳೂರು ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ಕಟ್; ಯಾವ-ಯಾವ ಏರಿಯಾ?

ಕೆಎಸ್‌ಎನ್‌ಡಿಎಂಸಿ ಡ್ಯಾಶ್‌ಬೋರ್ಡ್‌ನ ಪ್ರಕಾರ ಅಂಜನಾಪುರ ಮತ್ತು ಹೊರಮಾವು ಪ್ರದೇಶದಲ್ಲಿ ರಾತ್ರಿ 9 ಗಂಟೆಯವರೆಗೆ 23.50 ಮಿಮೀ ಮಳೆಯಾಗಿದೆ. ಬೆಳಗ್ಗೆ ಬಿಬಿಎಂಪಿಯಿಂದ ಸ್ಥಳ ಪರಿಶೀಲನೆ ನಡೆಸಿ ಪ್ರವಾಸ ಉಂಟಾಗುವುದಿಲ್ಲ ಭರವಸೆ ನೀಡಿದ್ದರೂ ಸಂಜೆಯ ತುಂತುರು ಮಳೆಯ ನಂತರ ಸುಲ್ತಾನ್‌ಪೇಟೆ ರಸ್ತೆ ಮತ್ತೆ ಜಲಾವೃತಗೊಂಡಿತು ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ.

Bengaluru Rain: Fallen Trees and Flooded Streets

ಹಲವು ಪ್ರದೇಶಗಳು ಜಲಾವೃತ

ಹಳೆ ತರಗುಪೇಟೆ, ಮಾಮೂಲ್‌ಪೇಟೆ, ಕೆಆರ್‌ ಮಾರುಕಟ್ಟೆ ಮುಂತಾದ ಪ್ರದೇಶಗಳೂ ಜಲಾವೃತಗೊಂಡಿವೆ. ವಸಂತನಗರದ ಮಿಲ್ಲರ್ಸ್ ರಸ್ತೆ, ಶಿವಾಜಿನಗರದ ಕೆಲವು ರಸ್ತೆಗಳು ಮತ್ತು ವಿವಿಧ ವಲಯಗಳ ಹಲವು ರಸ್ತೆಗಳು ಜಲಾವೃತವಾಗಿವೆ.

BBMP Rain Compliant: ಬೆಂಗಳೂರಿನಲ್ಲಿ ಮಳೆ; ಬಿಬಿಎಂಪಿಗೆ ದೂರು ನೀಡುವುದು ಹೇಗೆ?BBMP Rain Compliant: ಬೆಂಗಳೂರಿನಲ್ಲಿ ಮಳೆ; ಬಿಬಿಎಂಪಿಗೆ ದೂರು ನೀಡುವುದು ಹೇಗೆ?

ಧರೆಗುರುಳಿದ ಮರಗಳು

ಮಳೆಯಿಂದಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಬಳಿಯ ಹಡ್ಸನ್ ಸರ್ಕಲ್ ಹಾಗೂ ಚಾಮರಾಜಪೇಟೆ, ಜಕ್ಕೂರು, ಅಮೃತಹಳ್ಳಿ, ಮಲ್ಲೇಶ್ವರಂನಲ್ಲಿ ಮರ ಧರೆಗುರುಳಿದೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮೋದಿ ಆಸ್ಪತ್ರೆ ಬಳಿ ಮತ್ತು ಕೆಜಿ ರಸ್ತೆಯ ಅಭಿನಯ ಥಿಯೇಟರ್ ಬಳಿಯೂ ಮರಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಿದಾಗಿ ಮೋದಿ ಆಸ್ಪತ್ರೆ ಬಳಿ 400 ಮನೆಗಳಲ್ಲಿ ವಿದ್ಯುತ್ ಕಡಿತವಾಗಿದೆ.

Bengaluru Rain: Fallen Trees and Flooded Streets

ಮಂಗಳವಾರ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಸಾಮನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆಯಿದೆ. ಕೆಲವು ಕಡೆಗಳಲ್ಲಿಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ ಎಂದು ಐಎಂಡಿ ಹವಾಮಾನ ವರದಿ ತಿಳಿಸಿದೆ.

Recommended Video

ಶೀಘ್ರದಲ್ಲೇ ಬೊಮ್ಮಾಯಿ ಸರ್ಕಾರದ ಮತ್ತೆರಡು ವಿಕೆಟ್ ಪತನ? | Oneindia Kannada

English summary
It was another night of fallen trees, flooded streets and traffic jams in Bengaluru as thundershowers continued on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X