ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆ ತಂದ ಅವಾಂತರ: ಎರಡು ಎಕರೆ ದ್ರಾಕ್ಷಿ ಬೆಳೆ ನಾಶ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಬುಧವಾರ ಸುರಿದ ಭಾರೀ ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ಸುಮಾರು ಎರಡು ಎಕರೆ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಿದೆ.

Recommended Video

ಸ್ವಲ್ಪ ತಲೆ ಓಡಿಸಿ, ಬುದ್ದಿ ಓಡಿಸಿ ರಂಜಾನ್ ಆಚರಣೆ ಮಾಡಿ ಎಂದ ಮುಸಲ್ಮಾನ್! | Ramzan

ಈ ಕೊರೊನಾ ವೈರಸ್ ಎಫೆಕ್ಟ್ ಮಧ್ಯೆ ರೈತರಿಗೆ ನ್ಯಾಯಯುತ ಬೆಲೆ ಸಿಗದೇ ಸಂಕಟ ಪಡುತ್ತಿರುವ ಸಂದರ್ಭದಲ್ಲಿಯೇ ದ್ರಾಕ್ಷಿ ಬೆಳೆ ನಾಶವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮಳೆ ತಂದ ಅವಾಂತರ: ದೇವನಹಹಳ್ಳಿಯಲ್ಲಿ ಎರಡು ಎಕರೆ ದ್ರಾಕ್ಷಿ ಬೆಳೆ ನಾಶBS Yediyurappa Siddaramaiah

Posted by Bengaluru Zone onThursday, 30 April 2020

ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆ ಗ್ರಾಮದ ದೇವರಾಜಪ್ಪ ಎಂಬ ರೈತ ಕಳೆದ ಐದಾರು ವರ್ಷಗಳಿಂದ ಸಾಕಿ ಬೆಳೆಸಿದ್ದ, 15 ರಿಂದ 20 ಲಕ್ಷ ರೂ. ಮೌಲ್ಯದ ದ್ರಾಕ್ಷಿ ತೋಟ ಈಗ ಕಟಾವಿಗೆ ಸಿದ್ದವಾಗಿತ್ತು.

Rain: Destroyed Two Acre Of Grape Crop In Devanahalli

ಸುಮಾರು 50 ರಿಂದ 60 ಟನ್ ದ್ರಾಕ್ಷಿ ಬೆಳೆ ಬಂದಿತ್ತು. ಬುಧವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆಗೆ ಮಕಾಡೆ ಮಲಗಿ ಚಾಪೆಯಂತಾಗಿದೆ. ರೈತ ದೇವರಾಜಪ್ಪ ದಂಪತಿ ತಮಗೆ ಆಗಿರುವ ನಷ್ಟವನ್ನು ತಾಲ್ಲೂಕು ಆಡಳಿತ ಹಾಗೂ ಸರ್ಕಾರ ಮಾನವೀಯ ದೃಷ್ಟಿಯಿಂದ ಪರಿಹಾರ ಕೊಡುವ ಮೂಲಕ ಆಸರೆಯಾಗಬೇಕೆಂದು ಕೇಳಿಕೊಂಡಿದ್ದಾರೆ.

Rain: Destroyed Two Acre Of Grape Crop In Devanahalli

ಗಾಳಿ-ಮಳೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದ್ರಾಕ್ಷಿ, ಹೂವು, ಹಣ್ಣು, ಟೊಮ್ಯಾಟೊ, ತರಕಾರಿ ಬೆಳೆಗಳು ನಾಶವಾಗಿ ಹೋಗಿವೆ. ರೈತರ ಗೋಳು ಕೇಳುವವರಾರು ಇಲ್ಲದಂತಾಗಿದೆ.

English summary
The two acre grape crop in the Venkatagirikote village of Devanahalli taluk in the Bengaluru rural district has been completely destroyed by heavy rains Wednessday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X