ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಂಗ್ಲಾಕ್ಕೆ ಮಿನಿ ಟ್ರಕ್ ರವಾನೆ; ರೈಲ್ವೆ ಮತ್ತೊಂದು ಸಾಧನೆ

|
Google Oneindia Kannada News

ಬೆಂಗಳೂರು, ನವೆಂಬರ್ 24: ಭಾರತೀಯ ರೈಲ್ವೆ ವಾಹನಗಳ ಸಾಗಾಟದಲ್ಲಿ ಮತ್ತೊಂದು ಸಾಧನೆ ಮಾಡಿದೆ. ತಮಿಳುನಾಡಿನ ಹೊಸೂರಿನಿಂದ ಬಾಂಗ್ಲಾದೇಶಕ್ಕೆ ಮಿನಿಟ್ರಕ್‌ಗಳನ್ನು ಸಾಗಣೆ ಮಾಡಲಾಗಿದೆ.

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯೆಲ್ ಈ ಕುರಿತು ಟ್ವೀಟ್ ಮಾಡಿದ್ದಾರೆ. "ರಫ್ತು ಹೆಚ್ಚಿಸಲು ಭಾರತೀಯ ರೈಲ್ವೆ ಪ್ರೋತ್ಸಾಹ ನೀಡುತ್ತಿದೆ" ಎಂದು ಹೇಳಿದ್ದಾರೆ. ಮಿನಿಟ್ರಕ್ ಲೋಡ್ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಸಿಹಿ ಸುದ್ದಿ; ರೈಲ್ವೆ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ ಆರಂಭ ಸಿಹಿ ಸುದ್ದಿ; ರೈಲ್ವೆ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ ಆರಂಭ

ಹೊಸೂರು ರೈಲ್ವೆ ನಿಲ್ದಾಣದಿಂದ ಮಿನಿ ಟ್ರಕ್‌ಗಳನ್ನು ಹೊತ್ತ ರೈಲು ಬಾಂಗ್ಲಾದೇಶಕ್ಕೆ ಸಂಚಾರ ನಡೆಸಿವೆ. ಮಿನಿ ಟ್ರಕ್‌ಗಳ ಸಾಗಣೆಗಾಗಿಯೇ ವಿಶೇಷವಾಗಿ ಬೋಗಿಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ವಾಹನ ಸಾಗಾಟದಲ್ಲಿ ರೈಲ್ವೆ ಹೊಸ ಸಾಧನೆ ಮಾಡಿದೆ.

ಕಲಬುರಗಿ-ಲಾತೂರ; ನೂತನ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ ಕಲಬುರಗಿ-ಲಾತೂರ; ನೂತನ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ

Railways Transporting Mini Trucks From Hosur To Bangladesh

ಲಾಕ್ ಡೌನ್ ಅವಧಿಯಲ್ಲಿ ಬೆಂಗಳೂರಿನಿಂದ ಟ್ರಾಕ್ಟರ್, ಕಾರುಗಳನ್ನು ರೈಲ್ವೆ ಇಲಾಖೆ ಸಾಗಣೆ ಮಾಡಿತ್ತು. ನೈಋತ್ಯ ರೈಲ್ವೆ ಮೈಸೂರು ವಿಭಾಗ ಬೈಕ್‌ಗಳನ್ನು ಸಾಗಣೆ ಮಾಡುವ ಮೂಲಕ ಆದಾಯವನ್ನುಗಳಿಸುತ್ತಿದೆ. ಬೆಂಗಳೂರಿನಿಂದ ದೇಶದ ವಿವಿಧ ಪ್ರದೇಶಗಳಿಗೆ ಕಾರುಗಳನ್ನು ಸಾಗಣೆ ಮಾಡಲಾಗಿತ್ತು.

ರೈಲ್ವೆ ಟಿಕೆಟ್ ಮೇಲೆ ಶೇ 20ರ ರಿಯಾಯಿತಿ: ಯಾರಿಗೆ ಸಿಗಲಿದೆ ಈ ಆಫರ್?ರೈಲ್ವೆ ಟಿಕೆಟ್ ಮೇಲೆ ಶೇ 20ರ ರಿಯಾಯಿತಿ: ಯಾರಿಗೆ ಸಿಗಲಿದೆ ಈ ಆಫರ್?

ವಾಹನಗಳ ಸಾಗಾಟದಲ್ಲಿ ರೈಲ್ವೆ ಹೊಸ ಹೊಸ ಪ್ರಯೋಗವನ್ನು ಮಾಡುತ್ತಿದೆ. ಸೋಮವಾರ ಮಹಾರಾಷ್ಟ್ರದಿಂದ 83 ಪಿಕಪ್ ವಾಹನಗಳನ್ನು ಬಾಂಗ್ಲಾದೇಶಕ್ಕೆ ಕಳಿಸಲಾಗಿತ್ತು. ಇಂದು ಮಿನಿಟ್ರಕ್ ಸಾಗಣೆ ಮಾಡಲಾಗಿದೆ.

ನವೆಂಬರ್ 22ರಂದು ಮೈಸೂರಿನ ಕಡಕೋಳ ರೈಲು ನಿಲ್ದಾಣದಿಂದ 1100 ಟಿವಿಎಸ್ ಬೈಕ್‌ಗಳನ್ನು ಪಶ್ಚಿಮ ಬಂಗಾಳಕ್ಕೆ ಸಾಗಣೆ ಮಾಡಲಾಗಿತ್ತು. ಮೈಸೂರಿನಿಂದ ಮೂರನೇ ಬಾರಿಗೆ ಬೈಕ್‌ಗಳನ್ನು ರೈಲಿನಲ್ಲಿ ಸಾಗಾಟ ಮಾಡಲಾಗಿದೆ.

Recommended Video

Virat Kohli ಪರ ಬ್ಯಾಟ್ ಬೀಸಿದ Harbhajan singh | Oneindia Kannada

ಸಚಿವರ ಟ್ವೀಟ್

English summary
Union railway minister Piyush Goyal tweeted that railways is transporting mini trucks from Hosur, Tamil Nadu to Bangladesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X