ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಫೇಸ್ ರೆಕಗ್ನಿಷನ್ ಸಿಸ್ಟಂ

|
Google Oneindia Kannada News

ಬೆಂಗಳೂರು, ಜನವರಿ 9: ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಶೀಘ್ರ ಫೇಸ್ ರೆಕಗ್ನಿಷನ್ ಸಿಸ್ಟಂ ಅಳವಡಿಸಲಾಗುತ್ತಿದೆ.

ಬೆಂಗಳೂರು ಸಿಟಿ ರೈಲು ನಿಲ್ದಾಣ, ಮಹಾರಾಷ್ಟ್ರದ ಮನ್ಮಾಡ್ ಹಾಗೂ ಭುಸಾವಲ್ ರೈಲು ನಿಲ್ದಾಣಗಳಲ್ಲಿ ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ಚುಕುಬುಕು ಬೇಕು: ಉಪನಗರ ರೈಲ್ವೆ ಯೋಜನೆ ಅನುಷ್ಠಾನಕ್ಕಾಗಿ ಟ್ವಿಟ್ಟರ್ ಅಭಿಯಾನ ಚುಕುಬುಕು ಬೇಕು: ಉಪನಗರ ರೈಲ್ವೆ ಯೋಜನೆ ಅನುಷ್ಠಾನಕ್ಕಾಗಿ ಟ್ವಿಟ್ಟರ್ ಅಭಿಯಾನ

ನಿರ್ಭಯಾ ನಿಧಿ ಅಡಿಯಲ್ಲಿ ರೈಲ್ವೆಗೆ 250 ಕೋಟಿ ರೂ ದೊರೆತಿದ್ದು, ಹಲವು ರೈಲ್ವೆ ನಿಲ್ದಾಣಗಳಲ್ಲಿ ವಿಡಿಯೋ ಸರ್ವೇಕ್ಷಣಾ ವ್ಯವಸ್ಥೆ ಅಳವಡಿಸಲಾಗಿದೆ.

Railways To Test Face Recognition At Bengaluru Railway Station

ಆಧುನಿಕ ಕ್ಯಾಮರಾಗಳನ್ನು ನಿಲ್ದಾಣಗಳಲ್ಲಿ ಅಳವಡಿಸಿ ಅವುಗಳನ್ನು ಆರ್‌ಪಿಎಫ್‌ನ ಕಂಟ್ರೋಲ್ ರೂಂಗೆ ಸಂಯೋಜಿಸಲಾಗುತ್ತದೆ. ಈ ಮೂಲಕ ಪ್ರಯಾಣಿಕರ ಚಲನವಲನಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ಅಪರಾಧ ಹಾಗೂ ಅಪರಾಧಿಗಳ ಪತ್ತೆ ಜಾಲ ತಂತ್ರಜ್ಞಾನದಲ್ಲಿ ಶಂಕಿತರ ಮುಖಚಹರೆಗಳು ಲಭ್ಯವಿದೆ. ಈ ತಂತ್ರಜ್ಞಾನದ ಜೊತೆ ಫೇಸ್ ರೆಕಗ್ನಿಷನ್ ಸಿಸ್ಟಂ ಅನ್ನು ಸಂಯೋಜಿಸುವುದು ರೈಲ್ವೆಯಲ್ಲಿನ ಭದ್ರತೆ ನೋಡಿಕೊಳ್ಳುವ ರೈಲ್ವೆ ರಕ್ಷಣಾ ದಳದ ಉದ್ದೇಶವಾಗಿದೆ.

ಈಗಾಗಲೇ ಈ ವ್ಯವಸ್ಥೆಯನ್ನು ಬೆಂಗಳೂರು ಕಂಟೋನ್ಮೆಂಟ್ , ಬಂಗಾರಪೇಟೆ, ಬೆಳಗಾವಿ, ಹಾಸನ, ಶಿವಮೊಗ್ಗ, ವಾಸ್ಕೋ, ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ದೇಶದ 200 ರೈಲು ನಿಲ್ದಾಣಗಳಲ್ಲಿ ಇದರ ಅಳವಡಿಕೆಯ ಗುರಿ ಹೊಂದಲಾಗಿದೆ.

English summary
Facial recognition technology backed by artificial intelligence has been installed at Bengaluru.After the facial recognition system is tested, the technology will be implemented across the railway network.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X