ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಐಎಎಲ್ ರೈಲು ನಿಲ್ದಾಣ ಸಿದ್ಧ; ರೈಲು ಸಂಚಾರ ಯಾವಾಗ?

|
Google Oneindia Kannada News

ಬೆಂಗಳೂರು, ಆಗಸ್ಟ್ 11 : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲು ನಿಲ್ದಾಣ ಆಗಸ್ಟ್ ಅಂತ್ಯಕ್ಕೆ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ. ಆದರೆ, ರೈಲು ಸಂಚಾರ ಯಾವಾಗ ಆರಂಭವಾಗಲಿದೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

Recommended Video

ಬೆಂಗಳೂರಿನಲ್ಲಿ 50 ಸಾವಿರ ಅಂಗಡಿಗಳು ಬಂದ್ | Oneindia Kannada

ಬೆಂಗಳೂರಿನ ಬಹು ನಿರೀಕ್ಷಿತ ರೈಲು ನಿಲ್ದಾಣ ಕೆಐಎಎಲ್‌ ಬಳಿ ನಿರ್ಮಾಣವಾಗುತ್ತಿದೆ. ಈ ರೈಲು ನಿಲ್ದಾಣ ಆರಂಭವಾದರೆ ವಿಮಾನ ನಿಲ್ದಾಣ ಪ್ರಯಾಣಿಸುವ ಜನರಿಗೆ ಅನುಕೂಲವಾಗಲಿದೆ. ನಿಲ್ದಾಣದ ಕೊನೆ ಹಂತದ ಕೆಲಸಗಳು ನಡೆಯುತ್ತಿದ್ದು, ನಿರ್ಮಾಣ ಕಾರ್ಯ ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ; ಟೆಂಡರ್‌ ಆಹ್ವಾನ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ; ಟೆಂಡರ್‌ ಆಹ್ವಾನ

ಬೆಂಗಳೂರು ರೈಲ್ವೆ ವಿಭಾಗದ ಮ್ಯಾನೇಜರ್ ಅಶೋಕ್ ಕುಮಾರ್ ವರ್ಮಾ ಈ ಕುರಿತು ಮಾಹಿತಿ ನೀಡಿದ್ದಾರೆ. "ನಿಲ್ದಾಣದ ಕಟ್ಟಡ ನಿರ್ಮಾಣ ಕಾರ್ಯ, ವಿದ್ಯುತ್ ಕಾಮಗಾರಿ, ಫ್ಲಾಟ್‌ ಫಾರಂ ನಿರ್ಮಾಣ ಮುಂತಾದವುಗಳು ಪೂರ್ಣಗೊಂಡಿವೆ" ಎಂದು ಹೇಳಿದ್ದಾರೆ.

10 ಹೊಸ ಮಾರ್ಗದಲ್ಲಿ ರೈಲು ಓಡಿಸಲಿದೆ ನೈಋತ್ಯ ರೈಲ್ವೆ 10 ಹೊಸ ಮಾರ್ಗದಲ್ಲಿ ರೈಲು ಓಡಿಸಲಿದೆ ನೈಋತ್ಯ ರೈಲ್ವೆ

Railway Station Near KIA Ready By August End

"ಮೊದಲು 2020ರ ಮಾರ್ಚ್‌ನಲ್ಲಿ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕೋವಿಡ್ 19 ಪರಿಸ್ಥಿತಿ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಯಿತು" ಎಂದು ಅಶೋಕ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ಬೆಂ-ಬೆಳಗಾವಿ, ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರಕ್ಕೆ ಒಪ್ಪಿಗೆಬೆಂ-ಬೆಳಗಾವಿ, ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರಕ್ಕೆ ಒಪ್ಪಿಗೆ

ರೈಲು ಸಂಚಾರ ಯಾವಾಗ? : ಕೆಐಎಎಲ್ ಬಳಿ ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಂಡರೂ ರೈಲು ಸಂಚಾರ ಆರಂಭಯಾವಾಗ? ಎಂಬ ಪ್ರಶ್ನೆ ಕಾಡುತ್ತಿದೆ. ರೈಲುಗಳ ಸಾಮಾನ್ಯ ಸಂಚಾರ ಆರಂಭವಾದ ಬಳಿಕ ಕೆಐಎಎಲ್‌ಗೆ ಪ್ರಯಾಣಿಕರು ರೈಲಿನಲ್ಲಿ ಸಂಚಾರ ನಡೆಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇವನಹಳ್ಳಿ ರೈಲು ನಿಲ್ದಾಣದಿಂದ ಕೆಐಎಎಲ್ ವಿಮಾನ ನಿಲ್ದಾಣಕ್ಕೆ 10 ನಿಮಿಷದಲ್ಲಿ ಸಂಚಾರ ನಡೆಸಬಹುದಾಗಿದೆ. ಬಿಎಂಟಿಸಿ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಫೀಡರ್ ಬಸ್‌ ಸೇವೆಯನ್ನು ಆರಂಭಿಸಲು ತೀರ್ಮಾನಿಸಿದೆ.

English summary
Railway station near Kempegowda International Airport will become a reality by the end of August. But train service will began after regular service starts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X