ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ಅಲರ್ಟ್: ಮಾರ್ಚ್‌ನಲ್ಲಿ ಬೆಂಗಳೂರು ರೈಲುಗಳು ಭಾಗಶಃ, ಸಂಪೂರ್ಣ ರದ್ದು

|
Google Oneindia Kannada News

ಬೆಂಗಳೂರು, ಫೆಬ್ರವರಿ 18: ಬೆಂಗಳೂರು-ಮಂಗಳೂರು/ಕಾರವಾರ/ಕಣ್ಣೂರು ನಡುವೆ ಸಂಚರಿಸುವ ರೈಲುಗಳು ಸೇರಿದಂತೆ ಹಲವಾರು ರೈಲುಗಳು ಮುಂದಿನ ತಿಂಗಳು ಅಂದರೆ ಮಾರ್ಚ್‌ನಲ್ಲಿ ರದ್ದಾಗಿದೆ. ಕೆಲವು ರೈಲುಗಳು ಭಾಗಶಃ ರದ್ದಾದರೆ ಇನ್ನು ಕೆಲವು ರೈಲುಗಳು ಮಾರ್ಚ್ ಮೊದಲ ವಾರದಲ್ಲಿ ಸಂಪೂರ್ಣವಾಗಿ ರದ್ದಾಗಿದೆ.

ಮಂಗಳೂರಿನ ಪಡೀಲ್-ಕುಲಶೇಖರ ವಿಭಾಗದಲ್ಲಿ ಡಬಲ್ ಲೈನ್ ಕಾಮಗಾರಿಯನ್ನು ಕಾರ್ಯಾರಂಭಿಸಲು ಅನುಕೂಲವಾಗುವಂತೆ ಬೆಂಗಳೂರು-ಮಂಗಳೂರು/ಕಾರವಾರ/ಕಣ್ಣೂರು ನಡುವೆ ಸಂಚರಿಸುವ ರೈಲುಗಳನ್ನು ಮಾರ್ಚ್ 3 ಮತ್ತು 7 ರ ನಡುವೆ ಭಾಗಶಃ ಅಥವಾ ಸಂಪೂರ್ಣವಾಗಿ ರದ್ದು ಮಾಡಲಾಗಿದೆ.

Budget 2022; ನೈಋತ್ಯ ರೈಲ್ವೆಗೆ 6,900 ಕೋಟಿ ರೂ. ಅನುದಾನBudget 2022; ನೈಋತ್ಯ ರೈಲ್ವೆಗೆ 6,900 ಕೋಟಿ ರೂ. ಅನುದಾನ

ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದ ಪ್ರಕಟಣೆಯು ಮಾರ್ಚ್ 3 ರಿಂದ ಮಾರ್ಚ್ 7 ರವರೆಗೆ ಡಬಲ್ ಲೈನ್ ಮತ್ತು ಪ್ರಿ-ಇಂಟರ್‌ಲಾಕಿಂಗ್ ಕೆಲಸವನ್ನು ಕೈಗೊಳ್ಳಲಿದೆ ಎಂದು ಹೇಳಿದೆ. ಹಾಗಾಗಿ, ಈ ಅವಧಿಯಲ್ಲಿ ಇದು ರೈಲು ಸೇವೆಯಲ್ಲಿ ಕೆಲವು ಬದಲಾವಣೆಯನ್ನು ಮಾಡಿದೆ.

Railway Passengers Alert: Bengaluru Trains Partially Cancelled, Some Others Fully Cancelled in March

ಯಾವೆಲ್ಲಾ ಬೆಂಗಳೂರು ರೈಲುಗಳು, ಯಾವಾಗ ಭಾಗಶಃ ರದ್ದು?

ಮಾರ್ಚ್ 5ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16595 ಬೆಂಗಳೂರು-ಕಾರವಾರ ಪಂಚಗಂಗಾ ಡೈಲಿ ಓವರ್‌ನೈಟ್‌ ಎಕ್ಸ್‌ಪ್ರೆಸ್‌ ಮತ್ತು ರೈಲು ಸಂಖ್ಯೆ 16511 ಬೆಂಗಳೂರು-ಕಣ್ಣೂರು ಡೈಲಿ ಓವರ್‌ನೈಟ್‌ ಎಕ್ಸ್‌ಪ್ರೆಸ್‌ ಕ್ರಮವಾಗಿ ಕಬಕ ಪುತ್ತೂರು ಮತ್ತು ಸುಬ್ರಹ್ಮಣ್ಯ ರಸ್ತೆಯಲ್ಲಿ ಅಲ್ಪಾವಧಿಗೆ ಕೊನೆಗೊಳ್ಳುತ್ತದೆ. ಮಾರ್ಚ್ 6ರಂದು ರೈಲು ಸಂಖ್ಯೆ 16596 ಕಾರವಾರ/ಕಣ್ಣೂರು ಹಾಗೂ 16512 ಕಬಕ ಪುತ್ತೂರು/ಸುಬ್ರಹ್ಮಣ್ಯ ರಸ್ತೆಯಲ್ಲಿ ನಡುವೆ ರದ್ದುಗೊಳ್ಳುತ್ತವೆ. ಸೇವೆಗಳು ಕಬಕ ಪುತ್ತೂರು/ಸುಬ್ರಹ್ಮಣ್ಯ ರಸ್ತೆಯಿಂದ ಬೆಂಗಳೂರಿನ ಕಡೆಗೆ ಪ್ರಾರಂಭವಾಗುತ್ತವೆ.

ಮಾರ್ಚ್ 5 ರಂದು ಯಶವಂತಪುರದಿಂದ ಹೊರಡುವ ಮೈಸೂರು ಮಾರ್ಗದ ಯಶವಂತಪುರ-ಮಂಗಳೂರು ಸೆಂಟ್ರಲ್ ರೈಲು ಸಂಖ್ಯೆ 16585 ಸಕಲೇಶಪುರದಲ್ಲಿ ಅಲ್ಪಾವಧಿಗೆ ರದ್ದಾಗಲಿದೆ. ಇದರ ಜೋಡಿ ರೈಲು 16586 ಸಕಲೇಶಪುರದಿಂದ ಪ್ರಯಾಣವನ್ನು ಪ್ರಾರಂಭಿಸುತ್ತದೆ. ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ತ್ರಿ-ವೀಕ್ಲಿ ಗೋಮಟೇಶ್ವರ ಎಕ್ಸ್‌ಪ್ರೆಸ್ ಅನ್ನು ಮಾರ್ಚ್ 3 ಮತ್ತು 6 ರಂದು ಸುಬ್ರಹ್ಮಣ್ಯ ರಸ್ತೆಯಲ್ಲಿ ರದ್ದು ಮಾಡಲಾಗಿದೆ. ರೈಲು ಸಂಖ್ಯೆ 16539 ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಅನ್ನು ಮಾರ್ಚ್ 5 ರಂದು ಸುಬ್ರಹ್ಮಣ್ಯ ರಸ್ತೆಯಲ್ಲಿ ಸ್ವಲ್ಪ ಹೊತ್ತು ನಿಲ್ಲಿಸಲಾಗುತ್ತದೆ.

ತಾಳಗುಪ್ಪ-ಹುಬ್ಬಳ್ಳಿ ಮಾರ್ಗ; ಸಮೀಕ್ಷೆ ವರದಿ ಕೇಳಿದ ರೈಲ್ವೆ ಮಂಡಳಿ ತಾಳಗುಪ್ಪ-ಹುಬ್ಬಳ್ಳಿ ಮಾರ್ಗ; ಸಮೀಕ್ಷೆ ವರದಿ ಕೇಳಿದ ರೈಲ್ವೆ ಮಂಡಳಿ

ಯಾವೆಲ್ಲಾ ಬೆಂಗಳೂರು ರೈಲುಗಳು, ಯಾವಾಗ ರದ್ದು?

ರೈಲು ಸಂಖ್ಯೆ 06602/06601 ಮಂಗಳೂರು ಸೆಂಟ್ರಲ್-ಮಡ್ಗಾಂವ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ (ಹಿಂದಿನ 56641/56640 ಪ್ಯಾಸೆಂಜರ್) ಮಾರ್ಚ್ 6 ರಂದು ರದ್ದಾಗಲಿದೆ. ಅದೇ ರೀತಿ, ರೈಲು ಸಂಖ್ಯೆ 06486/06487 ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಎಕ್ಸ್‌ಪ್ರೆಸ್ ವಿಶೇಷ ಮತ್ತು ರೈಲು ಸಂಖ್ಯೆ 06488/06489 ಸುಬ್ರಹ್ಮಣ್ಯ ರಸ್ತೆ-ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಮಾರ್ಚ್ 3 ರಿಂದ ಮಾರ್ಚ್ 6 ರವರೆಗೆ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ. 16515 ಯಶವಂತಪುರ-ಕಾರವಾರ ತ್ರಿ-ವೀಕ್ಲಿ ಎಕ್ಸ್‌ಪ್ರೆಸ್ ಅನ್ನು ಮಾರ್ಚ್ 2 ರಂದು ಮಾರ್ಗದಲ್ಲಿ ಒಂದು ಗಂಟೆ ನಿಯಂತ್ರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಈ ನಡುವೆ ಭಾರತೀಯ ರೈಲ್ವೇ ದೆಹಲಿಯಿಂದ ಜೋಧ್‌ಪುರಕ್ಕೆ ಫೆಬ್ರವರಿ 27 ರವರೆಗೆ ಹಲವಾರು ರೈಲುಗಳನ್ನು ರದ್ದುಗೊಳಿಸುವುದಾಗಿ ಘೋಷಣೆ ಮಾಡಿದೆ. . 232 ರೈಲುಗಳು ಸಂಪೂರ್ಣವಾಗಿ ಮತ್ತು 39 ರೈಲುಗಳನ್ನು ಭಾರತೀಯ ರೈಲ್ವೇ ಭಾಗಶಃ ರದ್ದುಗೊಳಿಸಿದೆ. ಮೂಲಗಳ ಪ್ರಕಾರ, ಮೆರ್ಟಾ ರಸ್ತೆ ಮತ್ತು ಖಾರಿಯಾ ಖನ್‌ಗಢ್ ನಿಲ್ದಾಣದ ನಡುವೆ ಕಾಮಗಾತಿ ನಡೆಯುತ್ತಿದೆ. ಈ ಕಾರಣದಿಂದಾಗಿ ಭಾರತೀಯ ರೈಲ್ವೇ ಈ ನಿರ್ಧಾರವನ್ನು ತೆಗೆದುಕೊಂಡಿದೆ. ರದ್ದಾದ ರೈಲುಗಳ ಪಟ್ಟಿಯಲ್ಲಿ ದೆಹಲಿ ಸರೈ ರೋಹಿಲ್ಲಾದಿಂದ ಜೋಧ್‌ಪುರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಜೋಧ್‌ಪುರದಿಂದ ಭೋಪಾಲ್, ರೇವಾರಿಯಿಂದ ಜೋಧ್‌ಪುರ ರೈಲುಗಳು ಸೇರಿವೆ. (ಒನ್‌ಇಂಡಿಯಾ ಸುದ್ದಿ)

Recommended Video

Rohit ಪ್ರಕಾರ ಇವನೇ Team India Future | Oneindia Kannada

English summary
Railway passengers alert: Bengaluru trains partially cancelled, some others fully cancelled in March first week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X