ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಏರ್‌ಪೋರ್ಟ್‌ಲ್ಲಿ ರೈಲ್ವೆ ಲೋಕೋಪೈಲಟ್ ಅಪಹರಣ, ದರೋಡೆ

|
Google Oneindia Kannada News

ಬೆಂಗಳೂರು, ಆಗಸ್ಟ್ 12: ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ರೈಲ್ವೆ ಲೋಕೋಪೈಲಟ್ ಅಪಹರಿಸಿ, ದರೋಡೆ ಮಾಡಿರುವ ಘಟನೆ ನಡೆದಿದೆ.

Recommended Video

KG Halli , DJ halli ಪ್ರಕರಣಜ ಬಗ್ಗೆ ಕರ್ನಾಟಕ ಕಾಂಗ್ರೆಸ್ ಪತ್ರಿಕಾ ಗೋಷ್ಠಿ | Oneindia Kannada

ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಸೋನು ಕುಮಾರ್ ಸಿಂಗ್ ಅಪಹರಣಕ್ಕೊಳಗಾದ ವ್ಯಕ್ತಿ.ಬೆಳಗಿನ ಜಾವ 1.20ರ ಸುಮಾರಿಗೆ ಪಾಟ್ನಾದಿಂದ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಬಳಿಕ ಕೆಆರ್.ಪುರಂಗೆ ತೆರಳಲು ಕ್ಯಾಬ್ ವೊಂದನ್ನು ಬುಕ್ ಮಾಡಿಕೊಂಡಿದ್ದರು.

ಫಿನಾಯಿಲ್ ಮಾರುವ ನೆಪದಲ್ಲಿ ದರೋಡೆ; ದಾವಣಗೆರೆ ಪೊಲೀಸರಿಂದ ಅಲರ್ಟ್ಫಿನಾಯಿಲ್ ಮಾರುವ ನೆಪದಲ್ಲಿ ದರೋಡೆ; ದಾವಣಗೆರೆ ಪೊಲೀಸರಿಂದ ಅಲರ್ಟ್

ಕಾರನ್ನು ಹತ್ತಿದ್ದ ಸಿಂಗ್ ಅವರನ್ನು ಚಾಲಕ 2 ಕಿಮೀ ವರೆಗೂ ಕರೆದುಕೊಂಡು ಹೋಗಿ, ಟೀ ಕುಡಿಯಬೇಕೆಂದು ಕಾರು ನಿಲ್ಲಿಸಿದ್ದಾನೆ.

Railway Loco Pilot Abducted From Airport

ಬಳಿಕ ಮತ್ತೊಬ್ಬ ವ್ಯಕ್ತಿ ಕಾರು ಹತ್ತಿದ್ದಾನೆ. ಇದಕ್ಕೆ ಸಿಂಗ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಚಾಲಕ ಅವರ ಮನವೊಲಿಸಿದ್ದಾನೆ. ಬಳಿಕ ಕಾರು ನಿಲ್ಲಿಸಿ ಸಿಂಗ್ ಅವರ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿದ್ದಾರೆ. ಬಳಿಕ ತುಮಕೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಎಟಿಎಂ ಕಾರ್ಡ್ ತೆಗೆದುಕೊಂಡು ರೂ.20,000 ಡ್ರಾ ಮಾಡಿದ್ದಾರೆ.

ಬಳಿಕ ಆ ಹಣವನ್ನು ಆಟೋ ಚಾಲಕನೊಬ್ಬನಿಗೆ ನೀಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪಹರಣಕಾರುರು ಬಿಹಾರದಲ್ಲಿರುವ ನನ್ನ ಕುಟುಂಬಕ್ಕೆ ಕರೆ ಮಾಡಿ ರೂ.2 ಲಕ್ಷ ಗೂಗಲ್ ಪೇ ಮಾಡುವಂತೆ ತಿಳಿಸು ಎಂದು ಬಲವಂತ ಮಾಡಿದ್ದರು. ನನ್ನ ಕುಟುಂಬಸ್ಥರ ಬಳಿ ಹಣವಿಲ್ಲ ಎಂದು ನಾನು ಹೇಳಿದ್ದೆ.

ಬಳಿಕ ಸ್ನೇಹಿತರಿಗೆ ಕರೆ ಮಾಡಿ ಖಾತೆ ಹಣ ಜಮಾ ಮಾಡುವಂತೆ ತಿಳಿಸಿದ್ದೆ. ಬಳಿಕ ರೂ.1 ಲಕ್ಷದವರೆಗೂ ಹಣವನ್ನು ಆರೋಪಿಗಳು ತಮ್ಮ ಖಾತೆಗೆ ಜಮಾ ಮಾಡಿಕೊಂಡರು. ಅಲ್ಲದೆ, ವೈಯಕ್ತಿಕ ಫೋನ್ ಹಾಗೂ ರೈಲ್ವೇ ಇಲಾಖೆ ನೀಡಿದ್ದ ಸಿಯುಜಿ ಫೋನ್ ಕೂಡ ಕಸಿದುಕೊಂಡರು ಎಂದು ಸಿಂಗ್ ಅವರು ಹೇಳಿದ್ದಾರೆ.

ಬಳಿಕ ಅವರು ಡಾಬಾವೊಂದರಲ್ಲಿ ಮಧ್ಯಪಾನ ಮಾಡುತ್ತಾ ಕುಳಿತಾಗ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

English summary
A loco pilot attached to the Bengaluru Railway Division was allegedly abducted by the driver of a cab he hired from Kempegowda International Airport early on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X